ಬೆಂಗಳೂರು : ಗ್ರೇಟರ್ ಬೆಂಗಳೂರು ಅಡಳಿತ ವಿಧೇಯಕಕ್ಕೆ ವಿರೋಧ ವ್ಯಕ್ತವಾಗಿದ್ದು, ವಿಧಾನಸಭೆಯಲ್ಲಿ ವಿಧೇಯಕ ಮಂಡನೆಯ ವೇಳೆ ಗಲಾಟೆ ನಡೆದಿದೆ. ವಿಧೆಯಕಕ್ಕೆ ಬಿಜೆಪಿಯ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಬೆಂಗಳೂರಿನ ಜನರು ಈ ವಿಧೇಯಕದ ವಿರುದ್ಧ ಇದ್ದಾರೆ.ಈ ಬಗ್ಗೆ ಚರ್ಚೆ ಆಗಬೇಕು ಇದಕ್ಕೆ ನಮ್ಮ ವಿರೋಧವಿದೆ. ಬೆಂಗಳೂರು ಚಿದ್ರ ಚಿದ್ರ ಮಾಡಿದರೆ ಶಾಪ ತಟ್ಟಲಿದೆ. ನಿಮಗೆ ಕೆಂಪೇಗೌಡರ ಶಾಪ ತಟ್ಟದೇ ಇರುವುದಿಲ್ಲ. ವೈಜ್ಞಾನಿಕವಾಗಿ ವಿಧೇಯಕ ತಂದಿದ್ದಾರೆ ಎಂದು ಬಿಜೆಪಿಯ ಸದಸ್ಯರು ಗಲಾಟೆ ನಡೆಸಿದರು.
ಈಗಾಗಲೇ ಬೆಂಗಳೂರು ನಗರ ನರಕ ಆಗಿದೆ. ಸರ್ಕಾರಕ್ಕೆ 1 ರೂಪಾಯಿ ಕೊಡಲು ಯೋಗ್ಯತೆ ಇಲ್ಲ. ಜುಲೈ 27ಕ್ಕೆ ಸಭೆ ಕರೆದಿದ್ದೀರಲ್ಲ ಈ ಬಗ್ಗೆ ಚರ್ಚೆ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ವಿರೋಧ ಪಕ್ಷ ನಾಯಕ ಆರ್.ಅಶೋಕ್, ಅಶ್ವಥನಾರಾಯಣ್, ಸುರೇಶ್ ಕುಮಾರ್ ಆಗ್ರಹಿಸಿದರು.
ಅಧಿಕಾರಿಗಳಿಗೆ ಬೆಂಗಳೂರಿನ ಬಗ್ಗೆ ಏನು ಬದ್ಧತೆ ಇದೆ ಅವರು ಏನು ವಿಧೇಯಕ ಮಾಡಿ ಎಲ್ಲೋ ಹೋಗುತ್ತಾರೆ ಬೆಂಗಳೂರನ್ನು ಸರ್ವನಾಶ ಮಾಡಲು ಹೊರಟಿದ್ದೀರಿ ಇದರ ಸಾಧಕ ಬಾಧಕಗಳ ಬಗ್ಗೆ ಚರ್ಚೆಯಾಗಬೇಕು ಅದಕ್ಕಾಗಿ ಬೆಂಗಳೂರು ಶಾಸಕರ ಸಮಿತಿಯನ್ನು ರಚಿಸಿ ಅಧ್ಯಯನ ವರದಿ ಆಧರಿಸಿ ತೀರ್ಮಾನ ಕೈಗೊಳ್ಳಿ ಎಂದು ವಿಪಕ್ಷ ನಾಯಕ ಆರ್ ಅಶೋಕ ಹಾಗೂ ಅಶ್ವತ್ ನಾರಾಯಣ್ ಒತ್ತಾಯ ಮಾಡಿದರು.