ಬೆಂಗಳೂರು : ತಾನು ಕಳ್ಳ, ಪರರ ನಂಬ ಎನ್ನುವಂತಿದೆ ನಾಯಕರ ವರ್ತನೆ. ಚಿಲುಮೆ ಸಂಸ್ಥೆ ನೇಮಕ ಮಾಡಿದ್ದು ಮಿಸ್ಟರ್ ಭ್ರಷ್ಟರಾಮಯ್ಯ ಎಂದು ಬಿಜೆಪಿ ಟ್ವೀಟ್ ಮೂಲಕ ಕಾಂಗ್ರೆಸ್ ಗೆ ತಿರುಗೇಟು ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿದ ಬಿಜೆಪಿ ತಾನು ಕಳ್ಳ, ಪರರ ನಂಬ ಎನ್ನುವಂತಿದೆ ನಾಯಕರ ವರ್ತನೆ. ಚಿಲುಮೆ ಸಂಸ್ಥೆ ನೇಮಕ ಮಾಡಿದ್ದು ಮಿಸ್ಟರ್ ಭ್ರಷ್ಟರಾಮಯ್ಯ, ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿದಂತೆ ಕಾಂಗ್ರೆಸ್ ತಾನು ಮಾಡಿದ ಕಳ್ಳತನವನ್ನು ಬೇರೆಯವರ ಹೆಗಲಿಗೆ ಕಟ್ಟಲು ಪ್ರಯತ್ನ ಪಡುತ್ತಿದೆ. ನಿಮ್ಮ ಈ ಪ್ರಯತ್ನವೂ ಯಶಸ್ವಿ ಆಗೋದಿಲ್ಲ ಎಂದು ಬಿಜೆಪಿ ಕಾಂಗ್ರೆಸ್ ಕಾಳೆದಿದೆ.
ಕಾಂಗ್ರೆಸ್ನ ನಾಯಕರು ತಾವು ದೊಡ್ಡ ಹಗರಣವನ್ನು ಬಯಲಿಗೆಳೆಯುತ್ತಿದ್ದೇವೆ ಎನ್ನುತ್ತಾ ಬಂದು, ಕೊನೆಗೆ ಹಗರಣಗಳ ಬೇರುಗಳೆಲ್ಲವೂ ಕಾಂಗ್ರೆಸ್ ಬುಡದಲ್ಲೇ ಅಡಿಗಿವೆ ಎನ್ನುತಿದ್ದಂತೆ ಪೇರಿ ಕೀಳುತ್ತಾರೆ. ಶಿಕ್ಷಕರ ನೇಮಕಾತಿ, ಪಿಎಸ್ಐ ಹಗರಣದ ನಂತರ ಈಗಿನ ಮತದಾರರ ಮಾಹಿತಿ ಸೋರಿಕೆಯಲ್ಲೂ ಕಾಂಗ್ರೆಸ್ ನಾಯಕರ ಹೆಸರು ಕಾಣುತ್ತಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಕಾಂಗ್ರೆಸ್ನ ನಾಯಕರು ತಾವು ದೊಡ್ಡ ಹಗರಣವನ್ನು ಬಯಲಿಗೆಳೆಯುತ್ತಿದ್ದೇವೆ ಎನ್ನುತ್ತಾ ಬಂದು, ಕೊನೆಗೆ ಹಗರಣಗಳ ಬೇರುಗಳೆಲ್ಲವೂ @INCKarnatakaದ ಕೈ ಬುಡದಲ್ಲೇ ಅಡಿಗಿವೆ ಎನ್ನುತಿದ್ದಂತೆ ಪೇರಿ ಕೀಳುತ್ತಾರೆ. ಶಿಕ್ಷಕರ ನೇಮಕಾತಿ, ಪಿಎಸ್ಐ ಹಗರಣದ ನಂತರ ಈಗಿನ ಮತದಾರರ ಮಾಹಿತಿ ಸೋರಿಕೆಯಲ್ಲೂ ಕಾಂಗ್ರೆಸ್ ನಾಯಕರ ಹೆಸರು ಕಾಣುತ್ತಿದೆ. pic.twitter.com/iCtfVeL9Na
— BJP Karnataka (@BJP4Karnataka) November 28, 2022
“ಧಾರ್ಮಿಕ ಮತಾಂತರ ಸ್ವಾತಂತ್ರ್ಯವಿದ್ಯೋ ಹೊರತು ಬಲವಂತದ ಮತಾಂತರಕ್ಕಲ್ಲ” ; ‘ಸುಪ್ರೀಂ’ಗೆ ಕೇಂದ್ರದಿಂದ ಅಫಿಡವಿಟ್