ಬಳ್ಳಾರಿ: ಭಾರತ್ ಜೋಡೋ ಪಾದಯಾತ್ರೆ ಮೂಲ ಉದ್ದೇಶ ಸಂಕ್ಷಿಪ್ತವಾಗಿ ಹೇಳುವುದಾದರೆ, ಭಾರತ ದೇಶವನ್ನು ದ್ವೇಷಮುಕ್ತ, ಹಿಂಸೆ ಮುಕ್ತ, ನಿರುದ್ಯೋಗ ಮುಕ್ತ, ಪ್ರಜಾಪ್ರಭುತ್ವ ರಕ್ಷಿಸುವ, ಬಡಮುಕ್ತ ಭಾರತ ಉದ್ದೇಶದಿಂದ ಈ ಯಾತ್ರೆ ಆರಂಭವಾಗಿದೆ. ಈ ಯಾತ್ರೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3570 ಕಿ.ಮೀ ಯಾತ್ರೆಯಾಗಿದೆ. ಭಾರತ ಯಾತ್ರೆ, ರಾಜ್ಯದ ಪ್ರದೇಶ ಯಾತ್ರಿ, ಅಥಿಥಿ ತ್ರಿಗಳಿದ್ದಾರೆ. ನಮ್ಮ ರಾಜ್ಯದಲ್ಲಿ ನಿತ್ಯ 1 ಲಕ್ಷ ಜನ ಹೆಜ್ಜೆ ಹಾಕಿದ್ದು, ವಿಶ್ವದಲ್ಲಿ ಇದು ಐತಿಹಾಸಿಕ ಯಾತ್ರೆ. ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧಿ ನೇತೃತ್ವದಲ್ಲಿ ಯಾತ್ರೆ ನಡೆದಿದ್ದು, ಸ್ವಾತಂತ್ರ್ಯದ ನಂತರ ನಭೂತೋ ನಭವಿಷ್ಯತಿ ಎಂಬ ರೀತಿಯಲ್ಲಿ ಈ ಯಾತ್ರೆ ನಡೆಯುತ್ತಿದೆ ಎಂಬುದಾಗಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
‘ಭಾರತ್ ಜೋಡೋ’ ಕೇವಲ ಚುನಾವಣೆ ಉದ್ದೇಶದಿಂದ ನಡೆಯುತ್ತಿರುವ ಯಾತ್ರೆಯಲ್ಲ – ಮಲ್ಲಿಕಾರ್ಜುನ ಖರ್ಗೆ
ಇಂದು ಭಾರತ ಜೋಡೋ ಯಾತ್ರೆಯಲ್ಲಿ ಮಾತನಾಡಿದಂತ ಅವರು, ಈ ಯಾತ್ರೆ 1000 ಕಿ.ಮೀ ದೂರ ಕ್ರಮಿಸಿ ಬಳ್ಳಾರಿಗೆ ಬಂದಿದೆ. ಕರ್ನಾಟಕ ರಾಜ್ಯದಲ್ಲಿ ಸೆ.30ರಂದು ಆರಂಭವಾದ ಈ ಯಾತ್ರೆ 429 ಕಿ.ಮೀ ಪೂರ್ಣಗೊಳಿಸಿದೆ ಎಂದರು.
2014ರಲ್ಲಿ ವಿಶ್ವಗುರು ಕಾಂಗ್ರೆಸ್ ಮುಕ್ತ ಭಾರತ ಎಂದು ಪ್ರಚಾರ ಘೋಷಣೆ ಮಾಡಿದ್ದರು. ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಲ್ಲಿ ಆರಂಭಿಸಿದ ಈ ಯಾತ್ರೆಯಲ್ಲಿ ನಿತ್ಯ ಲಕ್ಷಾಂತರ ಮಂದಿ ಉತ್ಸೇಹ ನೀಡುತ್ತಿರುವುದನ್ನು ಕಂಡು ವಿಶ್ವಗುರು ತಲೆ ಕೆಡಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಅವರು ರಾಜಕೀಯ ದುರುದ್ದೇಶಕ್ಕೆ ಈ ಪಾದಯಾತ್ರೆ ಮಾಡುತ್ತಿಲ್ಲ. ದೇಶದ ತ್ರಿವರ್ಣ ಧ್ವಜ, ಅಂಬೇಡ್ಕರ್ ಅವರ ಸಂವಿಧಾನ, ನಮ್ಮ ಹಕ್ಕು ಪ್ರತಿಪಾದಿಸುವ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು ನಮ್ಮೆಲ್ಲರ ನೆಚ್ಚಿನ ನಾಯಕ ರಾಹುಲ್ ಗಾಂಧಿ ಅವರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಹೇಳಿದರು.
ಮುರುಘಾ ಮಠಕ್ಕೆ ಕಾನೂನು ಪ್ರಕಾರ ನೂತನ ಪೀಠಾಧಿಪತಿ : ಸಿಎಂ ಬಸವರಾಜ ಬೊಮ್ಮಾಯಿ
ರಾಹುಲ್ ಗಾಂಧಿ ಅವರ ಜತೆ ಫೋಟೋ ತೆಗೆಸಿಕೊಳ್ಳಲು ಸಾವಿರಾರು ಜನ ಪ್ರಯತ್ನಿಸಿದ್ದು, ಅವರಿಗೆ ಭದ್ರತೆ ಕಾರಣದಿಂದ ಅವಕಾಶ ನೀಡಲಿಲ್ಲ. ಈ ಯಾತ್ರೆಯಿಂದ ಬಿಜೆಪಿ ನಿದ್ದೆಗೆಟ್ಟು ಸುಳ್ಳು ಜಾಹೀರಾತು ನೀಡುತ್ತಿದ್ದಾರೆ. ಈ ಯಾತ್ರೆಗೆ ಬೆಂಬಲ ನೀಡಿರುವ ಎಲ್ಲರಿಗೂ ಧನ್ಯವಾದ ತಿಳಿಸಿದರು.