ಬೆಂಗಳೂರು: ಅತೃಪರಿಂದ ಸರ್ಕಾರ ರಚಿಸಿದ ಬಿಜೆಪಿಗೆ ಈಗ ಅದೇ ಅತೃಪ್ತಿಯ ಭೂತ ಹೆಗಲೇರಿದೆ! ಮದುವೆ ಗಂಡಿಗೆ ಬಿಜೆಪಿ ಮದುವೆ ಮಾಡ್ತಿಲ್ಲ, ಇನ್ನೊಬ್ಬರತ್ತ ತಿರುಗಿಯೂ ನೋಡ್ತಿಲ್ಲ. ತಿಂಗಳಿಗೊಮ್ಮೆ ದೆಹಲಿಗೆ ಹೋದರೂ ಸಂಪುಟ ವಿಸ್ತರಣೆ ಮಾಡಲಾಗದ್ದೇ ಬಸವರಾಜ ಬೊಮ್ಮಾಯಿ ಅವರ ಅಸಾಮರ್ಥ್ಯಕ್ಕೆ ಸಾಕ್ಷಿ. ಬಿಜೆಪಿ ಈಗ ಸೂತ್ರವಿಲ್ಲದ ಗಾಳಿಪಟದಂತಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ( Karnataka Congress ) ಟ್ವಿಟ್ಟರ್ ನಲ್ಲಿ ಬಿಜೆಪಿಯನ್ನು ಕುಟುಕಿದೆ.
ಅತೃಪರಿಂದ ಸರ್ಕಾರ ರಚಿಸಿದ @BJP4Karnatakaಗೆ ಈಗ ಅದೇ ಅತೃಪ್ತಿಯ ಭೂತ ಹೆಗಲೇರಿದೆ!
ಮದುವೆ ಗಂಡಿಗೆ ಬಿಜೆಪಿ ಮದುವೆ ಮಾಡ್ತಿಲ್ಲ, ಇನ್ನೊಬ್ಬರತ್ತ ತಿರುಗಿಯೂ ನೋಡ್ತಿಲ್ಲ.ತಿಂಗಳಿಗೊಮ್ಮೆ ದೆಹಲಿಗೆ ಹೋದರೂ ಸಂಪುಟ ವಿಸ್ತರಣೆ ಮಾಡಲಾಗದ್ದೇ @BSBommai ಅವರ ಅಸಾಮರ್ಥ್ಯಕ್ಕೆ ಸಾಕ್ಷಿ.
ಬಿಜೆಪಿ ಈಗ ಸೂತ್ರವಿಲ್ಲದ
ಗಾಳಿಪಟದಂತಾಗಿದೆ.#BJPvsBJP pic.twitter.com/G4wWFxwDpq— Karnataka Congress (@INCKarnataka) November 16, 2022
ಈ ಬಗ್ಗೆ ಸರಣಿ ಟ್ವಿಟ್ ಮಾಡಿದ್ದು, ಮನೆಯೊಂದು ಮುನ್ನೂರು ಬಾಗಿಲಂತಾಗಿರುವ ಬಿಜೆಪಿಯಲ್ಲಿ ಪ್ರತಿ ಕ್ಷೇತ್ರದಲ್ಲೂ #BJPvsBJP ಕಾಳಗ ನಡೆಯುತ್ತಿದೆ ಮೈಸೂರಿನ ಕಾಳಗದ ಜೊತೆ ಸಂಸದ ಶ್ರೀನಿವಾಸ್ ಪ್ರಸಾದ್vs ಸಿ ರಮೇಶ್ ಕಾಳಗ! ಸದಾ ಕಾಂಗ್ರೆಸ್ ಕಿಟಕಿಗೆ ಕಣ್ಣಿಟ್ಟು ಕೂರುವ ಬಿಜೆಪಿ ಪಕ್ಷ ( BJP Party ) ಈಗ ತಮ್ಮಲ್ಲಿನ ಕಲಹಕ್ಕೆ ಬಿಜೆಪಿ ಜೋಡೊ ಯಾತ್ರೆ ಮಾಡಿದರೂ ಒಂದಾಗದ ಸ್ಥಿತಿ ತಲುಪಿದೆ ಎಂದು ವಾಗ್ಧಾಳಿ ನಡೆಸಿದೆ.
ಮನೆಯೊಂದು ಮುನ್ನೂರು ಬಾಗಿಲಂತಾಗಿರುವ ಬಿಜೆಪಿಯಲ್ಲಿ ಪ್ರತಿ ಕ್ಷೇತ್ರದಲ್ಲೂ #BJPvsBJP ಕಾಳಗ ನಡೆಯುತ್ತಿದೆ
ಮೈಸೂರಿನ ಕಾಳಗದ ಜೊತೆ
ಸಂಸದ ಶ್ರೀನಿವಾಸ್ ಪ್ರಸಾದ್vs ಸಿ ರಮೇಶ್ ಕಾಳಗ!ಸದಾ ಕಾಂಗ್ರೆಸ್ ಕಿಟಕಿಗೆ ಕಣ್ಣಿಟ್ಟು ಕೂರುವ @BJP4Karnataka ಪಕ್ಷ ಈಗ ತಮ್ಮಲ್ಲಿನ ಕಲಹಕ್ಕೆ ಬಿಜೆಪಿ ಜೋಡೊ ಯಾತ್ರೆ ಮಾಡಿದರೂ ಒಂದಾಗದ ಸ್ಥಿತಿ ತಲುಪಿದೆ! pic.twitter.com/hyDXbchsrf
— Karnataka Congress (@INCKarnataka) November 16, 2022
ಯೂಟರ್ನ್ ವೃತ್ತಾಂತಗಳಿಗೆ ಮತ್ತೊಂದು ಸೇರ್ಪಡೆ! ಈ ಸರ್ಕಾರಕ್ಕೆ ದೃಢತೆ, ಪ್ರಬುದ್ಧತೆ, ಪ್ರಜ್ಞಾವಂತಿಕೆ ಎಂಬುದು ಲವಲೇಶವೂ ಇಲ್ಲ ಎನ್ನಲು ಇವರ ಯೂಟರ್ನ್ ನಿರ್ಧಾರಗಳೇ ಸಾಕ್ಷಿ. ಶಿಕ್ಷಣ ಇಲಾಖೆ ಮತ್ತೊಂದು ಆದೇಶವನ್ನು ವಾಪಾಸ್ ಪಡೆದಿದೆ. ಸ್ಪಷ್ಟತೆ ಇಲ್ಲದ ಅರೆಬೆಂದ ತಲೆಗಳ ಕೈಗೆ ಅಧಿಕಾರ ಸಿಕ್ಕರೆ ಹೀಗೆಯೇ ದಿನಕ್ಕೊಂದು ನಿರ್ಧಾರಗಳಗುತ್ತವೆ ಎಂದಿದೆ.
ಯೂಟರ್ನ್ ವೃತ್ತಾಂತಗಳಿಗೆ ಮತ್ತೊಂದು ಸೇರ್ಪಡೆ!
ಈ ಸರ್ಕಾರಕ್ಕೆ ದೃಢತೆ, ಪ್ರಬುದ್ಧತೆ, ಪ್ರಜ್ಞಾವಂತಿಕೆ ಎಂಬುದು ಲವಲೇಶವೂ ಇಲ್ಲ ಎನ್ನಲು ಇವರ ಯೂಟರ್ನ್ ನಿರ್ಧಾರಗಳೇ ಸಾಕ್ಷಿ.ಶಿಕ್ಷಣ ಇಲಾಖೆ ಮತ್ತೊಂದು ಆದೇಶವನ್ನು ವಾಪಾಸ್ ಪಡೆದಿದೆ.
ಸ್ಪಷ್ಟತೆ ಇಲ್ಲದ ಅರೆಬೆಂದ ತಲೆಗಳ ಕೈಗೆ ಅಧಿಕಾರ ಸಿಕ್ಕರೆ ಹೀಗೆಯೇ ದಿನಕ್ಕೊಂದು ನಿರ್ಧಾರಗಳಗುತ್ತವೆ. pic.twitter.com/7aMNevp8Hu
— Karnataka Congress (@INCKarnataka) November 16, 2022