ಶಿವಮೊಗ್ಗ : ಕಳೆದ ಎರಡೂ ಮುಕ್ಕಾಲು ವರ್ಷದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ವಿವಿಧ ಯೋಜನೆಯಡಿ ತಾಲ್ಲೂಕಿನ ಅಭಿವೃದ್ದಿಗೆ 667.42 ಕೋಟಿ ರೂ. ಅನುದಾನ ತಂದಿದ್ದಾರೆ. ಶಾಸಕರ ಅಭಿವೃದ್ದಿಪರ ಕೆಲಸಗಳನ್ನು ನೋಡಲಾಗದೆ ಬಿಜೆಪಿಯವರು ಹೊಟ್ಟೆಕಿಚ್ಚು ಪಟ್ಟುಕೊಂಡು, ಸುಳ್ಳು ಫ್ಲೆಕ್ಸ್ಗಳನ್ನು ಹಾಕಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಾಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ತಿಳಿಸಿದರು.
ಇಂದು ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಮಗೆ ಅಧಿಕಾರ ಸಿಕ್ಕಿದಾಗ ಅಭಿವೃದ್ದಿ ಮಾಡದೆ ಜನರಿಂದ ತಿರಸ್ಕಾರಕ್ಕೆ ಒಳಗಾಗಿ ಸೋತು ಮೂಲೆ ಸೇರಿರುವ ಹರತಾಳು ಹಾಲಪ್ಪ ತಮ್ಮ ಚೇಲಾಗಳ ಮೂಲಕ ಅನುದಾನದ ಫ್ಲೆಕ್ಸ್ಗಳನ್ನು ಹಾಕಿ ಕೀಳುಮಟ್ಟದ ರಾಜಕಾರಣ ಮಾಡುತ್ತಿರುವುದನ್ನು ಕಾಂಗ್ರೇಸ್ ಪಕ್ಷ ಪ್ರಬಲವಾಗಿ ಖಂಡಿಸುತ್ತದೆ ಎಂದು ಹೇಳಿದರು.
ತಾಲ್ಲೂಕಿನಲ್ಲಿ ಬೇಳೂರು ಶಾಸಕರಾದ ಮೇಲೆ ಬೇರೆಬೇರೆ ಯೋಜನೆಗೆ ಸರ್ಕಾರದಿಂದ ಸಾಕಷ್ಟು ಅನುದಾನ ಬಂದಿದೆ. ಅದಕ್ಕೆ ಸಂಬಂಧಿಸಿದ ಆದೇಶ ಪ್ರತಿಯನ್ನು ನಾವು ಬಿಡುಗಡೆ ಮಾಡಲು ಸಿದ್ದರಿದ್ದೇವೆ. ರಂಗಮAದಿರ ನಿರ್ಮಾಣಕ್ಕೆ 4.80 ಕೋಟಿ ರೂ. ನಗರೋತ್ಥಾನ ಯೋಜನೆಗೆ 14.50 ಕೋಟಿ ರೂ., ಗ್ರಾಮಾಂತರ ರಸ್ತೆ ಅಭಿವೃದ್ದಿಗೆ 18 ಕೋಟಿ ರೂ., ಹಸಿರುಮಕ್ಕಿ ಸೇತುವೆಗೆ 42 ಕೋಟಿ ರೂ., ಪ್ರಗತಿಪಥ ರಸ್ತೆಗಾಗಿ 22 ಕೋಟಿ ರೂ., ಕಾಲುಸಂಕ ನಿರ್ಮಾಣಕ್ಕೆ 50 ಕೋಟಿ ಸೇರಿ ನೂರಾರು ಕಾಮಗಾರಿಗೆ ಅನುದಾನ ಮಂಜೂರಾಗಿದೆ. ಇದು ಬಿಜೆಪಿಯವರಿಗೆ ಕಾಣುತ್ತಿಲ್ಲ. ಅವರಿಗೆ ನಮ್ಮ ಶಾಸಕರ ಕೆಲಸ ನೋಡಿ ಸಹಿಸಿ ಕೊಳ್ಳಲು ಆಗುತ್ತಿಲ್ಲ. ಬಿಜೆಪಿಯವರು ಅಪಪ್ರಚಾರ ಮಾಡುವ ಉದ್ದೇಶದಿಂದ ಸುಳ್ಳು ಫ್ಲೆಕ್ಸ್ಗಳನ್ನು ಅಳವಡಿಸಿ ಜನರ ದಾರಿ ತಪ್ಪಿಸಿದರೆ ಅವರ ವಿರುದ್ದ ಕೇಸ್ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಗರ ಕಾಂಗ್ರೇಸ್ ಅಧ್ಯಕ್ಷ ಐ.ಎನ್.ಸುರೇಶಬಾಬು ಮಾತನಾಡಿ, 2022ರಲ್ಲಿ ಮಂಜೂರಾದ ಅನುದಾನದ ವಿವರವನ್ನು ಈಗ ಫ್ಲೆಕ್ಸ್ ಹಾಕಿ ಪ್ರಚಾರ ಪಡೆಯುತ್ತಿರುವ ಬಿಜೆಪಿ ನಡೆ ದುರುದ್ದೇಶಪೂರಿತವಾಗಿದೆ. ಹಿಂದೆ ಕಾಗೋಡು ತಿಮ್ಮಪ್ಪ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಮಂಜೂರಾದ ಅನುದಾನದ ಕಾಮಗಾರಿಯನ್ನು ಹಾಲಪ್ಪ ಶಾಸಕರಾಗಿದ್ದಾಗ ಉದ್ಘಾಟನೆ ಮಾಡಿದರು. ಆಗ ನಾವು ಇದು ಕಾಗೋಡು ತಿಮ್ಮಪ್ಪ ತಂದ ಕಾಮಗಾರಿ ಎಂದು ಫ್ಲೆಕ್ಸ್ ಹಾಕಿ ಪ್ರಚಾರ ಪಡೆದಿರಲಿಲ್ಲ. ಇಷ್ಟು ವರ್ಷಗಳಲ್ಲಿ ಮಾರಿಕಾಂಬಾ ಜಾತ್ರೆಗೆ ವಿಶೇಷ ಅನುದಾನ ತಂದ ಶಾಸಕರು ಇದ್ದರೆ ಅದು ಬೇಳೂರು ಮಾತ್ರ. ಉತ್ತಮ ಕೆಲಸ ಮಾಡುತ್ತಿರುವ ಶಾಸಕರಿಗೆ ಅಭಿನಂದನೆ ಸಲ್ಲಿಸಿ ಫ್ಲೆಕ್ಸ್ ಹಾಕಬೇಕಾಗಿದ್ದ ಬಿಜೆಪಿಯವರು ಜನರಿಗೆ ತಪ್ಪು ಸಂದೇಶ ನೀಡುವ ಫ್ಲೆಕ್ಸ್ ಹಾಕಿರುವುದು ಅವರ ಕೀಳು ಅಭಿರುಚಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಈ ಸುದ್ದಿಗೋಷ್ಟಿಯಲ್ಲಿ ಮಧುಮಾಲತಿ, ಗಣಪತಿ ಮಂಡಗಳಲೆ, ಉಷಾ ಎನ್., ಪ್ರಭಾವತಿ, ವಿಲ್ಸನ್ ಗೋನ್ಸಾಲ್ವಿಸ್, ಚಂದ್ರಪ್ಪ ಎಲ್., ಸೋಮಶೇಖರ ಲ್ಯಾವಿಗೆರೆ, ಲಲಿತಮ್ಮ, ಡಿ.ದಿನೇಶ್, ಯಶವಂತ ಪಣಿ, ಗಿರೀಶ್ ಕೋವಿ, ಮಹಾಬಲ ಕೌತಿ ಇನ್ನಿತರರು ಹಾಜರಿದ್ದರು.
ಸಾಗರದ ಮಾರಿಕಾಂಬ ಜಾತ್ರೆ ಅಂಗವಾಗಿ ಹೆಲಿ ಟೂರಿಸಂ, ಗಣಪತಿ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ: ಶಾಸಕ ಗೋಪಾಲಕೃಷ್ಣ ಬೇಳೂರು
BJP ಅನುದಾನದ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿ ಚಿಲ್ಲರೆ ರಾಜಕಾರಣ: ಶಾಸಕ ಗೋಪಾಲಕೃಷ್ಣ ಬೇಳೂರು ಕಿಡಿ








