Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

’10 ನಿಮಿಷಗಳ ವಿತರಣೆ’ ಗಡುವನ್ನು ಕೈಬಿಡುವಂತೆ ತ್ವರಿತ ವಾಣಿಜ್ಯ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ

14/01/2026 7:12 AM

‘ನ್ಯಾಯದ ದೇವಾಲಯಗಳು ಭ್ರಷ್ಟಾಚಾರಕ್ಕೆ ಫಲವತ್ತಾದ ನೆಲವಾಗಲು ಸಾಧ್ಯವಿಲ್ಲ’: ಸುಪ್ರೀಂಕೋರ್ಟ್

14/01/2026 7:08 AM

BREAKING : ಕರ್ನಾಟಕ ‘TET’ ಪರೀಕ್ಷೆಯ ಸರ್ಟಿಫಿಕೇಟ್ ಬಿಡುಗಡೆ : ಈ ರೀತಿ ಡೌನ್ ಲೋಡ್ ಮಾಡಿಕೊಳ್ಳಿ | K-TET

14/01/2026 6:59 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BJP ಅನುದಾನದ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿ ಚಿಲ್ಲರೆ ರಾಜಕಾರಣ: ಶಾಸಕ ಗೋಪಾಲಕೃಷ್ಣ ಬೇಳೂರು ಕಿಡಿ
KARNATAKA

BJP ಅನುದಾನದ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿ ಚಿಲ್ಲರೆ ರಾಜಕಾರಣ: ಶಾಸಕ ಗೋಪಾಲಕೃಷ್ಣ ಬೇಳೂರು ಕಿಡಿ

By kannadanewsnow0910/01/2026 9:07 PM

ಶಿವಮೊಗ್ಗ : ಬಿಜೆಪಿಯವರು ಅತ್ಯಂತ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಅನುದಾನದ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿ ಚಿಲ್ಲರೆ ರಾಜಕಾರಣ ಮಡುವ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಜೋಸೆಫ್ ನಗರದಲ್ಲಿ ನಗರೋತ್ಥಾನ ಯೋಜನೆಯಡಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದಂತ ಅವರು, ನಗರವ್ಯಾಪ್ತಿಯಲ್ಲಿ 60ಕ್ಕೂ ಹೆಚ್ಚು ರಸ್ತೆ ಕಾಮಗಾರಿಗಳು ನಡೆಯುತ್ತಿದೆ. ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ವಿಶೇಷ ಅನುದಾನ ತಂದಿದ್ದೇನೆ. ಹಣ ಬಂದಿಲ್ಲ ಎಂದು ಬಿಜೆಪಿಯವರು ಬೊಗಳೆ ಬಿಡುತ್ತಿದ್ದಾರೆ. ಯಾರು ಶಾಸಕರು ಇರುತ್ತಾರೋ ಅವರ ಅವಧಿಯಲ್ಲಿ ಒಂದಷ್ಟು ಅನುದಾನ ಬಿಡುಗಡೆಯಾಗಿರುತ್ತದೆ. ಅವರ ನಂತರ ಬರುವ ಮತ್ತೊಬ್ಬ ಶಾಸಕರು ಅದನ್ನು ವಿನಿಯೋಗ ಮಾಡುತ್ತಾರೆ. ಕಾಗೋಡು ತಿಮ್ಮಪ್ಪ ಅವರು 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಆಡಳಿತ ಸೌಧವನ್ನು ಹಾಲಪ್ಪ ಶಾಸಕರಾಗಿದ್ದಾಗ ಉದ್ಘಾಟನೆ ಮಾಡಿದ್ದಾರೆ. ಅವರ ಅವಧಿಯಲ್ಲಿ ಉಳಿದ ಸಣ್ಣಪುಟ್ಟ ಅನುದಾನದ ಕಾಮಗಾರಿ ಈಗ ನಡೆಯುತ್ತಿದೆ. ಅದನ್ನೇ ಫ್ಲೆಕ್ಸ್ ಹಾಕಿ ಪ್ರಚಾರ ಪಡೆದು ನಾನು ಅನುದಾನ ತಂದೆ ಇಲ್ಲ ಎನ್ನುವಂತೆ ಬಿಂಬಿಸಲು ಹೊರಟಿದ್ದು ಬಿಜೆಪಿ ಮೂರ್ಖತನಕ್ಕೆ ಸಾಕ್ಷಿಯಾಗಿದೆ ಎಂದು ವಾಗ್ಧಾಳಿ ನಡೆಸಿದರು.

ಬಿಜೆಪಿಯವರಿಗೆ ಫ್ಲೆಕ್ಸ್ ಹಾಕುವ ಹುಚ್ಚು ಇದ್ದರೆ ತಮ್ಮ ಮನೆ ಮುಂದೆ ಹಾಕಿಕೊಳ್ಳಲಿ. ವೃತ್ತಗಳಲ್ಲಿ ಹಾಕಿ ಜನರಿಗೆ ತಪ್ಪು ಸಂದೇಶ ಕೊಡುವುದು ಬೇಡ. ಎಲ್ಲಿಂದ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ದಿ ಮಾಡಬೇಕು ಎಂದು ನನಗೂ ಗೊತ್ತಿದೆ. ಮೂರು ಬಾರಿ ಶಾಸಕನಾಗಿದ್ದೇನೆ. ನಿಮ್ಮ ಸಾಧನೆ ಏನು ಎಂದು ಜನರಿಗೆ ತಿಳಿಸಿ, ಅದನ್ನು ಬಿಟ್ಟು ಫ್ಲೆಕ್ಸ್ ರಾಜಕಾರಣ ಮಾಡುವುದನ್ನು ಬಿಡಿ ಎಂದ ಶಾಸಕರು, ಬಿಜೆಪಿಯವರ ಮನೆಯಿಂದ ಹಣ ತಂದು ಕೊಟ್ಟಿಲ್ಲ. ಸರ್ಕಾರದ ಹಣ ಬಂದಿದೆ. ಅಭಿವೃದ್ದಿ ನಾನು ಮುಂದುವರೆಸಿದ್ದೇನೆ. ಆಸ್ಪತ್ರೆ ಅಭಿವೃದ್ದಿಗೆ ಹಣ ಬಂದಿಲ್ಲ ಎಂದು ಬಿಜೆಪಿ ನಗರ ಅಧ್ಯಕ್ಷ ಪದೇಪದೇ ಹೇಳುತ್ತಿದ್ದಾರೆ. ನಾನು ದಾಖಲೆ ನೀಡಿದರೆ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಡುತ್ತಾರಾ ಎಂದು ಪ್ರಶ್ನಿಸಿದರು.

ಈ ವೇಳೆ ಸಾಗರ ನಗರಸಭೆಯ ಪೌರಾಯುಕ್ತ ಎಚ್.ಕೆ.ನಾಗಪ್ಪ, ನಗರಸಭೆ ಅಧಿಕಾರಿಗಳಾದ ಮದನ್, ವಿಠ್ಠಲ್ ಹೆಗಡೆ, ರಾಜೇಶ್, ಕಾಂಗ್ರೇಸ್ ಪ್ರಮುಖರಾದ ಸುರೇಶಬಾಬು, ಕಲಸೆ ಚಂದ್ರಪ್ಪ, ಗಣಪತಿ ಮಂಡಗಳಲೆ, ದಿನೇಶ್ ಡಿ., ಇಂಧೂಮತಿ ಇನ್ನಿತರರು ಹಾಜರಿದ್ದರು.

BREAKING: ಅಮೆರಿಕದ ಮಿಸಿಸಿಪ್ಪಿಯಲ್ಲಿ ಭೀಕರ ಗುಂಡಿನ ದಾಳಿ: 6 ಮಂದಿ ಸಾವು

Share. Facebook Twitter LinkedIn WhatsApp Email

Related Posts

BREAKING : ಕರ್ನಾಟಕ ‘TET’ ಪರೀಕ್ಷೆಯ ಸರ್ಟಿಫಿಕೇಟ್ ಬಿಡುಗಡೆ : ಈ ರೀತಿ ಡೌನ್ ಲೋಡ್ ಮಾಡಿಕೊಳ್ಳಿ | K-TET

14/01/2026 6:59 AM1 Min Read

`ಆಸ್ತಿ’ ಮಾಲೀಕರೇ ಗಮನಿಸಿ : ಇ-ಸ್ವತ್ತು ತಂತ್ರಾಂಶದ ಸಂಬಂಧ ಸಹಾಯವಾಣಿ ಸ್ಥಾಪನೆ

14/01/2026 6:49 AM1 Min Read

BIG NEWS : ಮಕ್ಕಳ ಮೇಲೆ ಲೈಂಗಿಕ ಶೋಷಣೆ ನಡೆಸಿದ್ರೆ ಇರುವ ಶಿಕ್ಷೆಗಳೇನು ಗೊತ್ತೇ.? ಇಲ್ಲಿದೆ ಮಾಹಿತಿ

14/01/2026 6:45 AM2 Mins Read
Recent News

’10 ನಿಮಿಷಗಳ ವಿತರಣೆ’ ಗಡುವನ್ನು ಕೈಬಿಡುವಂತೆ ತ್ವರಿತ ವಾಣಿಜ್ಯ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ

14/01/2026 7:12 AM

‘ನ್ಯಾಯದ ದೇವಾಲಯಗಳು ಭ್ರಷ್ಟಾಚಾರಕ್ಕೆ ಫಲವತ್ತಾದ ನೆಲವಾಗಲು ಸಾಧ್ಯವಿಲ್ಲ’: ಸುಪ್ರೀಂಕೋರ್ಟ್

14/01/2026 7:08 AM

BREAKING : ಕರ್ನಾಟಕ ‘TET’ ಪರೀಕ್ಷೆಯ ಸರ್ಟಿಫಿಕೇಟ್ ಬಿಡುಗಡೆ : ಈ ರೀತಿ ಡೌನ್ ಲೋಡ್ ಮಾಡಿಕೊಳ್ಳಿ | K-TET

14/01/2026 6:59 AM

ಇರಾನ್ ನಲ್ಲಿ ಮಸ್ಕ್ ಸ್ಪೇಸ್ ಎಕ್ಸ್ ನಿಂದ ಉಚಿತ ಸ್ಟಾರ್ ಲಿಂಕ್ ಇಂಟರ್ನೆಟ್ ಸೇವೆ : ವರದಿ

14/01/2026 6:56 AM
State News
KARNATAKA

BREAKING : ಕರ್ನಾಟಕ ‘TET’ ಪರೀಕ್ಷೆಯ ಸರ್ಟಿಫಿಕೇಟ್ ಬಿಡುಗಡೆ : ಈ ರೀತಿ ಡೌನ್ ಲೋಡ್ ಮಾಡಿಕೊಳ್ಳಿ | K-TET

By kannadanewsnow5714/01/2026 6:59 AM KARNATAKA 1 Min Read

ಬೆಂಗಳೂರು : ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ 2025ರ ಫಲಿತಾಂಶವನ್ನು ಈಗಾಗಲೇ ಇಲಾಖಾ ವೆಬ್ ಸೈಟ್ https://sts.karnataka.gov.in/TET ರಲ್ಲಿ ಪ್ರಕಟಿಸಲಾಗಿದೆ.…

`ಆಸ್ತಿ’ ಮಾಲೀಕರೇ ಗಮನಿಸಿ : ಇ-ಸ್ವತ್ತು ತಂತ್ರಾಂಶದ ಸಂಬಂಧ ಸಹಾಯವಾಣಿ ಸ್ಥಾಪನೆ

14/01/2026 6:49 AM

BIG NEWS : ಮಕ್ಕಳ ಮೇಲೆ ಲೈಂಗಿಕ ಶೋಷಣೆ ನಡೆಸಿದ್ರೆ ಇರುವ ಶಿಕ್ಷೆಗಳೇನು ಗೊತ್ತೇ.? ಇಲ್ಲಿದೆ ಮಾಹಿತಿ

14/01/2026 6:45 AM

ALERT : ಕಾರಿನಲ್ಲಿಟ್ಟಿರುವ ಹಳೆಯ `ಬಾಟಲಿ ನೀರು’ ಕುಡಿಯುವವರೇ ಎಚ್ಚರ : ಈ ಗಂಭೀರ ಸಮಸ್ಯೆಗಳು ಕಾಡಬಹುದು.!

14/01/2026 6:35 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.