ಶಿರಾ: ರಾಜ್ಯದಲ್ಲಿ ರಸ್ತೆಗಳು ನಾಶ ಆಗಿವೆ. ಅದರಲ್ಲೂ 40% ಕಮೀಷನ್ ಕಾರಣಕ್ಕೆ ಹೀಗೆ ಆಗಿದೆ. ರಸ್ತೆಗಳು ಸಂಪೂರ್ಣ ಕಳಪೆ ಗುಣಮಟ್ಟದವು ಆಗಿದ್ದಾವೆ. ಇದಕ್ಕೆ ಕಾರಣ ಬಿಜೆಪಿ ಸರ್ಕಾರದಲ್ಲಿ ( BJP Government ) ಶೇ.40ರಷ್ಟು ಹಣ ಖರ್ಚು ಮಾಡಿ, ಶೇ.60ರಷ್ಟು ಜೇಬಿಗೆ ಇಳಿ ಬಿಟ್ಟಿರುವುದೇ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ( Farmer CM HD Kumaraswamy ) ಗಂಭೀರ ಆರೋಪ ಮಾಡಿದ್ದಾರೆ.
BREAKING NEWS: ಚಿತ್ರರಂಗದಲ್ಲಿ ಮತ್ತೊಂದು ಅವಘಡ; ಶೂಟಿಂಗ್ ವೇಳೆ ಕ್ರೇನ್ ವೈಫಲ್ಯದಿಂದ ಸ್ಟಂಟ್ ಮಾಸ್ಟರ್ ನಿಧನ
ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದ ಚಿರತಹಳ್ಳಿ ಗೇಟ್ ನಲ್ಲಿ ಪಂಚರತ್ನ ರಥಯಾತ್ರೆಗೆ ಭವ್ಯ ಸ್ವಾಗತ ನೀಡಲಾಯಿತು. ಈ ವೇಳೆ ಕಾರ್ಯಕರ್ತರ ದಂಡು, ಬೈಕ್ ಜಾಥಾ, ಪುಷ್ಪ ವೃಷ್ಟಿ ಮಾಡಲಾಯಿತು. ಸುಡುಬಿಸಿಲಿನಲ್ಲಿಯೇ ಚಿತ್ರಹಳ್ಳಿ ಗೇಟ್ ನಲ್ಲಿಯೇ ಭಾಷಣ ಮಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು, ರಾಜ್ಯದಲ್ಲಿನ ರಸ್ತೆ ಕಾಮಾಗಾರಿ ಸಂಪೂರ್ಣ ಕಳಪೆ ಗುಣಮಟ್ಟದ್ದಾಗಿದೆ. 40% ಹಣ ಖರ್ಚು ಮಾಡಿ, 60% ಜೇಬಿಗೆ ಇಳಿಸಿರೋದೆ ಕಾರಣ ಎಂಬುದಾಗಿ ಬಿಜೆಪಿ ಸರಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.
ನನ್ನ ಸರಕಾರ ಇದ್ದಾಗ ಹೀಗೆ ಆಗಿರಲಿಲ್ಲ. ನನ್ನ ಸರಕಾರ 25000 ಕೋಟಿ ಸಾಲ ಮನ್ನಾ ಮಾಡಿತು. ನಾನು ಸಾಲ ಮನ್ನಾ ಹಣವನು ತೆಗೆದಿರಿಸಿ ಆದೇಶ ಹೊರಡಿಸಿದೆ. ನನ್ನ ಸರಕಾರ ಬಿದ್ದ ಕೂಡಲೇ ಸಾಲ ಮನ್ನಾ ಯೋಜನೆಯ ದಾರಿ ತಪ್ಪಿಸಲಾಯಿತು. ಸಾಲ ಮನ್ನಾದಲ್ಲಿ ಬಿಜೆಪಿ ಸರಕಾರ ದೊಡ್ಡ ಅಕ್ರಮ ನಡೆಸಿದೆ. ಎರಡು ಲಕ್ಷ ಕುಟುಂಬಗಳಿಗೆ ಸಾಲ ಮನ್ನಾ ಆಗಿಲ್ಲ. 25000 ಕೋಟಿಯಲ್ಲಿ 7000 ಕೋಟಿ ಹಣವನ್ನು ಬಿಜೆಪಿ ಸರಕಾರ ಬೇರೆ ಕಡೆ ಡೈವೋರ್ಟ್ ಮಾಡಿದೆ. ಇದರಲ್ಲಿ ಬಿಜೆಪಿ ಸರಕಾರ ದೊಡ್ಡ ಅಕ್ರಮ ನಡೆಸಿದೆ ಎಂದು ಆರೋಪಿಸಿದರು.
BIG NEWS: ಬೆಂಗಳೂರು ವೋಟರ್ ಐಡಿ ಪರಿಷ್ಕರಣೆ ಅಕ್ರಮ: ಸಿಎಂ ಬೊಮ್ಮಾಯಿ, ಸಚಿವ ಅಶ್ವತ್ಥನಾರಾಯಣಗೆ ಸಂಕಷ್ಟ
ನನ್ನ ಸರಕಾರವನ್ನು ತೆಗೆದು ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಸಾಲ ಮನ್ನಾದಲ್ಲಿ ಅಕ್ರಮ ನಡೆಸಿದೆ. ಇದೊಂದು ದೊಡ್ಡ ಹಗರಣವಾಗಿದೆ. ಈ ಬಗ್ಗೆ ತನಿಖೆಯಾಗಬೇಕು ಎಂಬುದಾಗಿ ಯಡಿಯೂರಪ್ಪ ಸರಕಾರದ ಮೇಲೆ ನೇರ ಆರೋಪವನ್ನು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಾಡಿದರು.