ಬೆಂಗಳೂರು: ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತ್ರದ ನಿಲಯಗಳಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯಗೊಳಿಸಿ, ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ವಿಚಾರ: ಆ.30ರಂದು ಅಂತಿಮ ನಿರ್ಧಾರ – ಸಚಿವ ಆರ್ ಅಶೋಕ್

ಈ ಸಂಬಂಧ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದು, ಇಲಾಖೆಯ ಎಲ್ಲಾ ಮೆಟ್ರಿಕೆ ಪೂರ್ವ ಮತ್ತು ನಂತ್ರದ ವಿದ್ಯಾರ್ಥಿ ನಿಲಯಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ಪದ್ದತಿಯನ್ನು ಕಡ್ಡಾಯಗೊಳಿಸಿದ್ದು, ಇ-ಹಾಜರಾತಿಯಂತೆ ನಿಲಯಗಳ ಆಹಾರ ವೆಚ್ಚದ ಬಿಲ್ಲುಗಳನ್ನು ತಯಾರಿಸುವಂತೆ ಸೂಚಿಸಲಾಗಿತ್ತು ಎಂದಿದ್ದಾರೆ.

BIGG NEWS : ‘Meesho’ ಉದ್ಯೋಗಿಗಳಿಗೆ ಬಿಗ್‌ ಶಾಕ್‌ ; ‘ದಿನಸಿ ವ್ಯಾಪಾರ’ ಸ್ಥಗಿತ, 300 ಮಂದಿ ಕೆಲಸದಿಂದ ವಜಾ

ಆದ್ರೇ.. ಯಾರೂ ಇದನ್ನು ಪಾಲಿಸದೇ, ಹಿಂದಿನಂತೆಯೇ ಆಹಾರ ವೆಚ್ಚದ ಬಿಲ್ಲುಗಳನ್ನು ಪಾಸ್ ಮಾಡುತ್ತಿರುವುದು ತಿಳಿದು ಬಂದಿದೆ. ಆದ್ದರಿಂದ ಇನ್ಮುಂದೆ ಎಲ್ಲಾ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯಗೊಳಿಸಿ ಆದೇಶಿಸಿದ್ದಾರೆ.

‘ಬೆಂಗಳೂರು-ಮೈಸೂರು ವಾಹನ ಸವಾರ’ರ ಗಮನಕ್ಕೆ: ಇಂದಿನಿಂದ 3 ದಿನ ಈ ‘ಪರ್ಯಾಯ ಮಾರ್ಗ’ದಲ್ಲಿ ಸಂಚರಿ

ಅಂದಹಾಗೇ ಎಲ್ಲಾ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಲ್ಲಿ ಪ್ರತಿ ದಿನ ಎರಡು ಬಾರಿ ವಿದ್ಯಾರ್ಥಿಗಳ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯಗೊಳಿಸಿದೆ. ಬೆಳಿಗ್ಗೆ 6 ರಿಂದ 6.30ರ ಒಳಗಾಗಿ ಹಾಗೂ ರಾತ್ರಿ 8.30ರ ನಂತ್ರ ವಿದ್ಯಾರ್ಥಿಗಳ ಹಾಜರಾತಿಯನ್ನು ದಾಖಲಿಸಲು ಕ್ರಮವಹಿಸುವಂತೆ ಸೂಚಿಸಿದೆ.

BREAKING NEWS: ಮುರುಘಾಮಠದ ಶ್ರೀ ವಿರುದ್ಧ ಪೋಕ್ಸೋ ಕೇಸ್: ಪ್ರಕರಣ ಮೈಸೂರಿನಿಂದ ಚಿತ್ರದುರ್ಗದ ಗ್ರಾಮಾಂತರ ಠಾಣೆಗೆ ವರ್ಗಾವಣೆ

ಇನ್ನೂ ಮೆಟ್ರಿಕ್ ನಂತ್ರದ ನಿಲಯಗಳಲ್ಲಿ ದಿನಕ್ಕೊಮ್ಮೆ ಬಯೋಮೆಟ್ರಿಕ್ ಹಾಜರಾತಿಯನ್ನು ದಾಖಲಿಸುವಂತೆ ಸೂಚಿಸಲಾಗಿದೆ. ಈ ಬಯೋಮೆಟ್ರಿಕ್ ಹಾಜರಾತಿಯನ್ನು ಜಿಲ್ಲೆಗಳ ನೋಡಲ್ ಅಧಿಕಾರಿಗಳು ಖಚಿತಪಡಿಸಿಕೊಂಡು, ಆಹಾರ ಪದಾರ್ಥಗಳ ವೆಚ್ಚದ ಬಿಲ್ಲುಗಳನ್ನು ತಯಾರು ಮಾಡುವುದು ಎಂದು ತಿಳಿಸಿದ್ದಾರೆ.

ವರದಿ : ವಸಂತ ಬಿ ಈಶ್ವರಗೆರೆ

Share.
Exit mobile version