ರಾಮನಗರ: ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದಂತ ಭಾರೀ ಮಳೆಯಿಂದಾಗಿ ಹಲವು ಕೆರೆ, ಕಟ್ಟೆಗಳು ತುಂಬಿ ಕೋಡಿ ಬಿದ್ದಿವೆ. ಈ ಪರಿಣಾಮ ರಾಷ್ಟ್ರೀಯ ಹೆದ್ದಾರಿಯ ಅನೇಕ ಕಡೆಯಲ್ಲಿ ನೀರು ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಹೀಗಾಗಿ ಬಂಗಳೂರು ಟು ಮೈಸೂರು ಪ್ರಯಾಣಿಸುವಂತ ವಾಹನ ಸವಾರರು ಪರ್ಯಾಯ ಮಾರ್ಗದ ಮೂಲಕ ಸಂಚರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

BIG BREAKING NEWS: ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ ಆರೋಪ: ಚಿತ್ರದುರ್ಗದ ಮಾಜಿ ಶಾಸಕ ಎಸ್.ಕೆ ಬಸವರಾಜನ್ ವಿರುದ್ಧ FIR ದಾಖಲು

ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ರಾಮನಗರ ಜಿಲ್ಲಾಡಳಿತವು, ಜಿಲ್ಲೆಯಲ್ಲಿ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹಲವು ಕೆರೆ ಕಟ್ಟೆಗಳು ತುಂಬಿದ ಪರಿಣಾಮ, ಕೋಡಿಗಳು ಬಿದ್ದು, ನೀರು ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರವಾಹದಂತೆ ಉಂಟಾಗಿದೆ ಎಂದು ಹೇಳಿದೆ.

BIGG NEWS : ‘Meesho’ ಉದ್ಯೋಗಿಗಳಿಗೆ ಬಿಗ್‌ ಶಾಕ್‌ ; ‘ದಿನಸಿ ವ್ಯಾಪಾರ’ ಸ್ಥಗಿತ, 300 ಮಂದಿ ಕೆಲಸದಿಂದ ವಜಾ

ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ಹರಿಯುತ್ತಿರೋ ಪರಿಣಾಮ, ಸಂಚಾರ ದಟ್ಟಣೆ ಉಟ್ಟಾಗಿದ್ದು, ಸುಗಮ ಪ್ರಯಾಣಕ್ಕೆ ತೊಂದರೆಯಾಗುವ ಸಂಭವವಿದೆ. ಹೀಗಾಗಿ ವಾಹನ ಸವಾರರು ಇಂದಿನಿಂದ ಮೂರು ದಿನಗಳವರೆಗೆ ಬೆಂಗಳೂರು –ಮೈಸೂರು ಮಾರ್ಗವಾಗಿ ಪ್ರಯಾಣಿಸುವವರು, ಬೆಂಗಳೂರು – ಕನಕಪುರ – ಮೈಸೂರು ಮಾರ್ಗವಾಗಿ ಅಥವಾ ಬೆಂಗಳೂರು, ಕುಣಿಗಲ್, ಮೈಸೂರು ಮಾರ್ಗವಾಗಿ ಪ್ರಯಾಣ ಮಾಡಲು ಮನವಿ ಮಾಡಿದೆ.

ವರದಿ: ಗಿರೀಶ್ ರಾಜ್

BIGG NEWS : ಮುರುಘ ಮಠದ ವಿರೋಧಿಗಳು ‘ ಮಕ್ಕಳ ಬುದ್ಧಿ ಕೆಡಿಸಿ ದೂರು’ ನೀಡಿದ್ದಾರೆ : ಮುರುಘಾ ಮಠದ ವಕೀಲ ವಿಶ್ವನಾಥಯ್ಯ

Share.
Exit mobile version