ಬೆಂಗಳೂರು: ನಗರದ ಚಾಮರಾಜಪೇಟೆಯಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಲಾಗಿತ್ತು. ಈ ಬೆನ್ನಲ್ಲೇ, ಆಗಸ್ಟ್ 31ರಂದು ಗಣೇಶ ಹಬ್ಬ ಆಚರಣೆ ಕುರಿತಂತೆ ನಿರ್ಧಾರ ಕೈಗೊಳ್ಳಲು ಆಗಸ್ಟ್ 30ರಂದು ಅಂತಿಮ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

BREAKING NEWS: ಮುರುಘಾಮಠದ ಶ್ರೀ ವಿರುದ್ಧ ಪೋಕ್ಸೋ ಕೇಸ್: ಪ್ರಕರಣ ಮೈಸೂರಿನಿಂದ ಚಿತ್ರದುರ್ಗದ ಗ್ರಾಮಾಂತರ ಠಾಣೆಗೆ ವರ್ಗಾವಣೆ

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಕೂರಿಸೋದಕ್ಕಾಗಿ ನಾಗರೀಕರ ಒಕ್ಕೂಟ ಕೋರಿತ್ತು. ಆ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಕೋರ್ಟ್ ಈದ್ಗಾ ಮೈದಾನದಲ್ಲಿ ವರ್ಷದಲ್ಲಿ ಎರಡು ಬಾರಿ ಪ್ರಾರ್ಥನೆ ಸಲ್ಲಿಸೋದಕ್ಕೆ ಅವಕಾಶ ನೀಡಿದೆ ಎಂದರು.

BIGG NEWS : ‘Meesho’ ಉದ್ಯೋಗಿಗಳಿಗೆ ಬಿಗ್‌ ಶಾಕ್‌ ; ‘ದಿನಸಿ ವ್ಯಾಪಾರ’ ಸ್ಥಗಿತ, 300 ಮಂದಿ ಕೆಲಸದಿಂದ ವಜಾ

ಈಗಾಗಲೇ ಗಣೇಶೋತ್ಸವಕ್ಕೆ ಅವಕಾಶ ಕೋರಿಕೆ ಸಲ್ಲಿಸಲಾಗಿದ್ದಂತ ಸಂಘಟನೆಗಳೊಂದೆಗೆ ಮಾತುಕತೆ ನಡೆಸಲಾಗಿದೆ. ಸಾರ್ವಜನಿಕರ ಜಾಗವಾದ ಕಾರಣ, ಗಣೇಶೋತ್ಸವ ಕೂರಿಸೋ ಉದ್ದೇಶ ಸರಿ ಇದೆ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ. ಈ ಸಂಬಂಧ ಆಗಸ್ಟ್ 30ರಂದು ಅಂತಿಮ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದು ಹೇಳಿದರು.

‘ಬೆಂಗಳೂರು-ಮೈಸೂರು ವಾಹನ ಸವಾರ’ರ ಗಮನಕ್ಕೆ: ಇಂದಿನಿಂದ 3 ದಿನ ಈ ‘ಪರ್ಯಾಯ ಮಾರ್ಗ’ದಲ್ಲಿ ಸಂಚರಿ

Share.
Exit mobile version