Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಮ್ಯಾನ್ಮಾರ್‌ನಲ್ಲಿ ಭೀಕರ ಸ್ಫೋಟ: ಗಣಿಗಾರಿಕೆಯ ಸ್ಫೋಟಕಗಳಿದ್ದ ಉಗ್ರಾಣದಲ್ಲಿ ಅವಘಡ, 45ಕ್ಕೂ ಹೆಚ್ಚು ಮಂದಿ ಸಾವು!

Wi-Fi Radiation: ವೈ-ಫೈ ವಿಕಿರಣ ನಿಮ್ಮ ಆರೋಗ್ಯಕ್ಕೆ ಕಣ್ಣಿಗೆ ಕಾಣದ ಆಪತ್ತೇ? ಇಲ್ಲಿದೆ ಆಘಾತಕಾರಿ ಮಾಹಿತಿ

Oral Sex: ಓರಲ್ ಸೆಕ್ಸ್ ನಿಜಕ್ಕೂ ಸುರಕ್ಷಿತವೇ? ಇಲ್ಲಿದೆ ಬೆಂಗಳೂರಿನ ವೈದ್ಯರು ನೀಡಿದ ಎಚ್ಚರಿಕೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಬಯೋಕಾನ್‌ ಸಂಸ್ಥೆಯ ಸೇವೆ ಅವಿಸ್ಮರಣೀಯ: ಸಂಸದ ಡಾ.ಸಿ.ಎನ್‌.ಮಂಜುನಾಥ್‌
KARNATAKA

ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಬಯೋಕಾನ್‌ ಸಂಸ್ಥೆಯ ಸೇವೆ ಅವಿಸ್ಮರಣೀಯ: ಸಂಸದ ಡಾ.ಸಿ.ಎನ್‌.ಮಂಜುನಾಥ್‌

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಶಿಕ್ಷಣ, ಆರೋಗ್ಯ ಮತ್ತು ಪರಿಸರ ಸಂರಕ್ಷಣಾ ಕ್ಷೇತ್ರದಲ್ಲಿ ಹಾಗೂ ಸ್ತ್ರೀಸಬಲೀಕರಣಕ್ಕಾಗಿ ಬಯೋಕಾನ್‌ ಸಂಸ್ಥೆಯ ಸೇವೆ ಶ್ಲಾಘನೀಯ ಎಂದು ಸಂಸದ ಡಾ.ಸಿ.ಎನ್‌. ಮಂಜುನಾಥ್‌ ಅವರು ಹೇಳಿದರು.

ಬಯೋಕಾನ್‌ ಫೌಂಡೇಷನ್‌ನ 20ನೇ ವಾರ್ಷಿಕೋತ್ಸವದ ಪ್ರಯುಕ್ತ ಬಯೋಕಾನ್‌ ಪಾರ್ಕ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಫೌಂಡೇಷನ್‌ ಸ್ಮರಣಿಕೆ ಬಿಡುಗಡೆ ಮಾಡಿ ಮಾತನಾಡಿದರು.

ಆರೋಗ್ಯ ಕ್ಷೇತ್ರ ಅತ್ಯಂತ ಪವಿತ್ರವಾದ ಕ್ಷೇತ್ರವಾಗಿದ್ದು, ಇಲ್ಲಿ ವ್ಯಾಪಾರೀಕರಣವಾಗದೇ ಸೇವಾ ಮನೋಭಾವವನ್ನು ಹೊಂದಿರಬೇಕು. ರೋಗಿಯ ಪ್ರಾಣ ಉಳಿಸುವುದು ಮೊದಲ ಆದ್ಯತೆ ಆಗಬೇಕು, ಇದರಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಬಯೋಕಾನ್‌ 20 ವರ್ಷದಿಂದ ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಬಯೋಕಾನ್ ಸಂಸ್ಥೆಯು ಸಂಶೋಧನೆ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿಯೂ ತನ್ನ ಛಾಪನ್ನು ಮೂಡಿಸಿದೆ. ಅಷ್ಟೇ ಅಲ್ಲದೆ, ದೇಶದಲ್ಲಿ ಸಾಕಷ್ಟು ಜೀವರಕ್ಷಕ ಔಷಧಿಗಳ ಬೆಲೆ ಕಡಿಮೆಗೊಳಿಸುವಲ್ಲಿಯೂ ಬಯೋಕಾನ್ ಪಾತ್ರ ಅನನ್ಯವಾದದ್ದು. ಅದರ ಜೊತೆಗೆ ಆರೋಗ್ಯ ಸೇವೆ, ಶಿಕ್ಷಣ, ಮೂಲಸೌಕರ್ಯ ಮತ್ತು ಪರಿಸರದ ಸುಸ್ಥಿರತೆ ಸೇರಿದಂತೆ ಸಮಾಜದ ಹಿತ ಕಾಪಾಡುವ ನಿಟ್ಟಿನಲ್ಲಿ ಸಿಎಸ್‌ಆರ್‌ ಅಡಿಯಲ್ಲಿ ಈಗಾಗಲೇ ಸಾಕಷ್ಟು ಸೇವೆ ಸಲ್ಲಿಸುತಾ ಬಂದಿದೆ ಎಂದರು.

ಬಯೋಕಾನ್ ಸಮೂಹ ಸಂಸ್ಥೆಗಳ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಮಾತನಾಡಿ, ಕಳೆದ ಎರಡು ದಶಕಗಳಿಂದ ಬಯೋಕಾನ್‌ ಫೌಂಡೇಷನ್‌ ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸುತ್ತಾ ಬಂದಿದೆ. ಬಡವರಿಗೆ ಆರೋಗ್ಯ ಸೇವೆ ನೀಡಲು ಇಲಾಜ್ ಸ್ಮಾರ್ಟ್ ಕ್ಲಿನಿಕ್ ಗಳು ಪ್ರಾರಂಭಿಸಿದ್ದು, ಪ್ರಾಥಮಿಕ ಆರೋಗ್ಯ ರಕ್ಷಣೆಯಲ್ಲಿ ಕ್ರಾಂತಿಯನ್ನುಂಟು ಮಾಡಿವೆ, ಇದರಿಂದ ಕರ್ನಾಟಕದಾದ್ಯಂತ ಒಂದು ದಶಲಕ್ಷಕ್ಕೂ ಹೆಚ್ಚು ಜನರಿಗೆ ಆರೋಗ್ಯ ಸೇವೆಯನ್ನು ಕಲ್ಪಿಸಿಕೊಡಲಾಗಿದೆ ಎಂದರು.

2004ರಲ್ಲಿ ಸ್ಥಾಪನೆಯಾದ ಬಯೋಕಾನ್ ಫೌಂಡೇಶನ್, ಆರೋಗ್ಯ, ಶಿಕ್ಷಣ, ಪರಿಸರ ಸಂರಕ್ಷಣೆ, ಗ್ರಾಮೀಣ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಭಾರತದಾದ್ಯಂತ 2.8 ದಶಲಕ್ಷಕ್ಕೂ ಹೆಚ್ಚು ಜನರ ಜೀವನದಲ್ಲಿ ಸುಧಾರಣೆಯನ್ನು ತರಲು ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳುವ ನಿರ್ಧಾರವನ್ನು ಸಹ ಈ ಸಮಾರಂಭದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಸಮಾರಂಭದಲ್ಲಿ ಫೌಂಡೇಶನ್ ತನ್ನ 20 ನೇ ವಾರ್ಷಿಕ ವರದಿಯನ್ನು ಅನಾವರಣಗೊಳಿಸಿತು. ಸಮಾಜದ ಮೇಲೆ ಅರ್ಥಪೂರ್ಣ ಪರಿಣಾಮ ಬೀರುವ 20 ವರ್ಷಗಳ ಪ್ರಯಾಣವನ್ನು ಎತ್ತಿ ತೋರಿಸುವ ವಿಶೇಷ ಚಲನಚಿತ್ರವನ್ನು ಪ್ರದರ್ಶಿಸಿತು.

ಬಯೋಕಾನ್‌ ಫೌಂಡೇಷನ್‌ನ 20ನೇ ವಾರ್ಷಿಕೋತ್ಸವದ ಪ್ರಯುಕ್ತ ಬಯೋಕಾನ್‌ ಪಾರ್ಕ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಂಸದರಾದ ಡಾ. ಸಿ.ಎನ್. ಮಂಜುನಾಥ್, ಬಯೋಕಾನ್ ಸಮೂಹದ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ, ಬಯೋಕಾನ್ ಫೌಂಡೇಶನ್ನ ಮಿಷನ್ ಡೈರೆಕ್ಟರ್ ಡಾ. ಅನುಪಮಾ ಶೆಟ್ಟಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ನೈಋತ್ಯ ರೈಲ್ವೆ ವಲಯದ ನೂತನ ಪ್ರಧಾನ ವ್ಯವಸ್ಥಾಪಕರಾಗಿ ‘ಮುಕುಲ್ ಸರನ್ ಮಾಥೂರ್’ ಅಧಿಕಾರ ಸ್ವೀಕಾರ

BIG NEWS: ಸಾಗರದ ‘ಹೈವೇ ರಸ್ತೆ ಕಾಮಗಾರಿ ಕಳಪೆ’ಯಿಂದ ಕೂಡಿದ್ದರೇ ‘ಡೆಮಾಲಿಷ್’: ಮುಖ್ಯ ಇಂಜಿನಿಯರ್ ಜಗದೀಶ್

Share. Facebook Twitter LinkedIn WhatsApp Email

Related Posts

ವಿಜಯಪುರದ ಸಿಂದಗಿ, ತಾಳಿಕೋಟೆಯ ಶಂಕಿತರ ನೆಲೆಗಳ ಮೇಲೆ NIA ಅಧಿಕಾರಿಗಳ ದಾಳಿ

1 Min Read

Rain In Bengaluru: ಬೆಂಗಳೂರಲ್ಲಿ ಮುಂದಿನ 3 ಗಂಟೆ ಭಾರೀ ಮಳೆ ಮುನ್ಸೂಚನೆ: ಯೆಲ್ಲೋ ಅಲರ್ಟ್‌ ಘೋಷಣೆ!

1 Min Read

ಕರ್ತವ್ಯನಿಷ್ಠೆ, ಮಾನವೀಯತೆಯ ಪ್ರತೀಕ ಇನ್ಸ್‌ಪೆಕ್ಟರ್ ಮಹಾಬಲೇಶ್ವರ ನಾಯಕ್: ಸಾಗರದಲ್ಲಿ ಹೃದಯ ಸ್ಪರ್ಶಿ ಬೀಳ್ಕೊಡುಗೆ

2 Mins Read
Recent News

BREAKING: ಮ್ಯಾನ್ಮಾರ್‌ನಲ್ಲಿ ಭೀಕರ ಸ್ಫೋಟ: ಗಣಿಗಾರಿಕೆಯ ಸ್ಫೋಟಕಗಳಿದ್ದ ಉಗ್ರಾಣದಲ್ಲಿ ಅವಘಡ, 45ಕ್ಕೂ ಹೆಚ್ಚು ಮಂದಿ ಸಾವು!

Wi-Fi Radiation: ವೈ-ಫೈ ವಿಕಿರಣ ನಿಮ್ಮ ಆರೋಗ್ಯಕ್ಕೆ ಕಣ್ಣಿಗೆ ಕಾಣದ ಆಪತ್ತೇ? ಇಲ್ಲಿದೆ ಆಘಾತಕಾರಿ ಮಾಹಿತಿ

Oral Sex: ಓರಲ್ ಸೆಕ್ಸ್ ನಿಜಕ್ಕೂ ಸುರಕ್ಷಿತವೇ? ಇಲ್ಲಿದೆ ಬೆಂಗಳೂರಿನ ವೈದ್ಯರು ನೀಡಿದ ಎಚ್ಚರಿಕೆ

ಧೂಮಪಾನ ತ್ಯಜಿಸುವ ನಿರ್ಧಾರ ಮಾಡಿದ್ದೀರಾ? ಕೇವಲ 20 ನಿಮಿಷಗಳಲ್ಲಿ ನಿಮ್ಮ ದೇಹದಲ್ಲಿ ಶುರುವಾಗಲಿದೆ ಅದ್ಭುತ ಚೇತರಿಕೆ : ವರದಿ

State News
KARNATAKA

ವಿಜಯಪುರದ ಸಿಂದಗಿ, ತಾಳಿಕೋಟೆಯ ಶಂಕಿತರ ನೆಲೆಗಳ ಮೇಲೆ NIA ಅಧಿಕಾರಿಗಳ ದಾಳಿ

By ವಸಂತ ಬಿ ಈಶ್ವರಗೆರೆ KARNATAKA 1 Min Read

ವಿಜಯಪುರ: ಜಿಲ್ಲೆಯ ಸಿಂದಗಿ ಹಾಗೂ ತಾಳಿಕೋಟೆ ಪಟ್ಟಣಗಳಲ್ಲಿ ಇಂದು ಮುಂಜಾನೆಯೇ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ದಿಢೀರ್ ದಾಳಿ…

Rain In Bengaluru: ಬೆಂಗಳೂರಲ್ಲಿ ಮುಂದಿನ 3 ಗಂಟೆ ಭಾರೀ ಮಳೆ ಮುನ್ಸೂಚನೆ: ಯೆಲ್ಲೋ ಅಲರ್ಟ್‌ ಘೋಷಣೆ!

ಕರ್ತವ್ಯನಿಷ್ಠೆ, ಮಾನವೀಯತೆಯ ಪ್ರತೀಕ ಇನ್ಸ್‌ಪೆಕ್ಟರ್ ಮಹಾಬಲೇಶ್ವರ ನಾಯಕ್: ಸಾಗರದಲ್ಲಿ ಹೃದಯ ಸ್ಪರ್ಶಿ ಬೀಳ್ಕೊಡುಗೆ

ಸಾಗರದಲ್ಲಿ ಲೋಕಾಯುಕ್ತ ಮೆಟ್ಟಿಲೇರಿದ್ದ ಯುವಕನಿಗೆ ಜೀವಬೆದರಿಕೆ: ಈ ಸವಾಲು ಹಾಕಿದ ತಾಳಗುಪ್ಪ ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಬ್ಯಾಕೋಡು

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.