ಬೀದರ್: ಬಿಜೆಪಿ ನಾಯಕರು ಹಿಂದುತ್ವದ ಹೆಸರಿನಲ್ಲಿ ಯುವಕರನ್ನು ಗುಲಾಮರನ್ನಾಗಿ ಮಾಡುತ್ತಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಯಾವುದೇ ಕೊಲೆ ನಡೆಯಲಿಲ್ಲ. ಬಿಜೆಪಿ ಅವಧಿಯಲ್ಲಿ ಯಾಕೆ ಕೊಲೆಗಳಾಗುತ್ತಿವೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕರಾವಳಿ ಭಾಗದಲ್ಲಿ ಕೊಲೆಯಾದವರ ಮೂವರ ನಿವಾಸಕ್ಕೆ ಭೇಟಿ ನೀಡುತ್ತೇನೆ. ಹಿಂದುತ್ವದ ಹೆಸರಿನಲ್ಲಿ ಯುವಕರನ್ನು ಬಿಜೆಪಿ ನಾಯಕರು ಗುಲಾಮರನ್ನಾಗಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ಎನ್ಐಎಗೆ ಹಸ್ತಾಂತರ ಮಾಡಲಾಗಿದೆ. ಆದರೆ ಅವರಿಗೆ ಕೊಟ್ಟಿರುವ ಈ ಹಿಂದಿನ ಪ್ರಕರಣಗಳು ಐದಾರು ವರ್ಷ ಕಳೆದರೂ ಏನಾಗಿದೆ ಎಂದು ಗೊತ್ತಾಗಿಲ್ಲ. ಹೀಗಿದ್ದಾಗ ಎನ್ಐಎ ಅಧಿಕಾರಿಗಳಿಗೆ ಪ್ರವೀಣ್ ಕೊಲೆ ಪ್ರಕರಣವನ್ನು ಕೊಟ್ಟರೆ ಅದರ ತನಿಖೆ ಮುಗಿಸಲು ಎಷ್ಟು ವರ್ಷಗಳು ಬೇಕು ಎಂದು ಪ್ರಶ್ನಿಸಿದ್ದಾರೆ.
KCET Results 2022 : ಯಲಹಂಕ ನ್ಯಾಷನಲ್ ಕಾಲೇಜಿನ ಅಪೂರ್ವ ` First Rank’ : ಇಲ್ಲಿದೆ `Rank’ ಪಡೆದವರ ಪಟ್ಟಿ!