ಬೆಂಗಳೂರು: ಕಳಬೇಡ ಎಂದವರು ಬಸವಣ್ಣ 40% ಕಳವು ಮಾಡುವುದು – ಬಿಜೆಪಿ. ಕೊಲಬೇಡ ಎಂದರು, ದ್ವೇಷ ಹರಡುವುದು – ಬಿಜೆಪಿ. ಹುಸಿಯ ನುಡಿಯಬೇಡ ಎಂದರು, ಸುಳ್ಳೇ ಜೀವಾಳ – ಬಿಜೆಪಿಗೆ. ಅನ್ಯರಿಗೆ ಅಸಹ್ಯಪಡಬೇಡ ಎಂದರು, ಕೋಮುದ್ವೇಷ ಹರಡುವುದು – ಬಿಜೆಪಿ. ಬಸ್ವತತ್ವ ವಿರೋಧಿಸುವ ಬಿಜೆಪಿಗೆ ಬಸವಣ್ಣನನ್ನು ಸಹಿಸಲು ಸಾಧ್ಯವೇ ಎಂಬುದಾಗಿ ಕಾಂಗ್ರೆಸ್ ( Congress ) ಪ್ರಶ್ನಿಸಿದೆ.
◆ಕಳಬೇಡ ಎಂದವರು ಬಸವಣ್ಣ
40% ಕಳವು ಮಾಡುವುದು – ಬಿಜೆಪಿ◆ಕೊಲಬೇಡ ಎಂದರು,
ದ್ವೇಷ ಹರಡುವುದು – ಬಿಜೆಪಿ◆ಹುಸಿಯ ನುಡಿಯಬೇಡ ಎಂದರು,
ಸುಳ್ಳೇ ಜೀವಾಳ – ಬಿಜೆಪಿಗೆ◆ಅನ್ಯರಿಗೆ ಅಸಹ್ಯಪಡಬೇಡ ಎಂದರು,
ಕೋಮುದ್ವೇಷ ಹರಡುವುದು – ಬಿಜೆಪಿಬಸ್ವತತ್ವ ವಿರೋಧಿಸುವ ಬಿಜೆಪಿಗೆ ಬಸವಣ್ಣನನ್ನು ಸಹಿಸಲು ಸಾಧ್ಯವೇ!#BJPBrashtotsava pic.twitter.com/ppxvueiShf
— Karnataka Congress (@INCKarnataka) September 9, 2022
ಈ ಕುರಿತು ಸರಣಿ ಟ್ವಿಟ್ ( Twitter ) ಮಾಡಿದ್ದು, ಮನುಜ ಮತ, ವಿಶ್ವ ಪಥ, ವಿಜ್ಞಾನ ದೃಷ್ಟಿ, ವಿಚಾರ ಬುದ್ಧಿ ಇವು ನಮ್ಮ ಹೃದಯದ ನಿತ್ಯ ಮಂತ್ರಗಳಾಗಬೇಕು. – ಕುವೆಂಪು ದ್ವೇಷ ಬಿತ್ತುವ, ಮೌಢ್ಯ ಸ್ಥಾಪಿಸುವ ಹುನ್ನಾರ ಹೊಂದಿರುವ ಬಿಜೆಪಿಗೆ ಕುವೆಂಪು ಅವರ ವಿಶ್ವಮಾನವ ತತ್ವಗಳು ಅಪಥ್ಯ. ಹಾಗಾಗಿಯೇ ಪಠ್ಯದಲ್ಲಿ ಕುವೆಂಪುರವರ ಘನತೆ ಕುಂದಿಸುವ ಕೆಲಸ ಮಾಡಿತ್ತು ಸರ್ಕಾರ ಎಂದು ವಾಗ್ಧಾಳಿ ನಡೆಸಿದೆ.
ಮನುಜ ಮತ, ವಿಶ್ವ ಪಥ,
ವಿಜ್ಞಾನ ದೃಷ್ಟಿ, ವಿಚಾರ ಬುದ್ಧಿ
ಇವು ನಮ್ಮ ಹೃದಯದ ನಿತ್ಯ ಮಂತ್ರಗಳಾಗಬೇಕು.
– ಕುವೆಂಪುದ್ವೇಷ ಬಿತ್ತುವ, ಮೌಢ್ಯ ಸ್ಥಾಪಿಸುವ ಹುನ್ನಾರ ಹೊಂದಿರುವ ಬಿಜೆಪಿಗೆ ಕುವೆಂಪು ಅವರ ವಿಶ್ವಮಾನವ ತತ್ವಗಳು ಅಪಥ್ಯ.
ಹಾಗಾಗಿಯೇ ಪಠ್ಯದಲ್ಲಿ ಕುವೆಂಪುರವರ ಘನತೆ ಕುಂದಿಸುವ ಕೆಲಸ ಮಾಡಿತ್ತು ಸರ್ಕಾರ.#BJPBrashtotsava pic.twitter.com/D6rHcssHf2
— Karnataka Congress (@INCKarnataka) September 9, 2022
ಮಹಿಳೆಯರಿಗೆ, ಶೋಷಿತರಿಗೆ ಅಕ್ಷರದ ದಾಸೋಹ ನಡೆಸಿದ, “ಅಕ್ಷರದವ್ವ” ಎಂದೇ ಖ್ಯಾತರಾದ ಸಾವಿತ್ರಿ ಬಾ ಪುಲೆ ಅವರ ಪಠ್ಯವನ್ನು ಕೈಬಿಟ್ಟ ಸರ್ಕಾರ ಪಠ್ಯಪುಸ್ತಕಗಳಲ್ಲಿ ಬುಲ್ ಬುಲ್ ಹಕ್ಕಿ ಹಾರಿಸುತ್ತಿದೆ! ಶಿಕ್ಷಣ ( Education ) ವಿರೋಧಿಯಾಗಿ ವರ್ತಿಸಿದ್ದು, ಮಹನೀಯರಿಗೆ ಅವಮಾನಿಸಿದ್ದು ನಿಮ್ಮ ಒಂದು ವರ್ಷದ ಸಾಧನೆಯೇ ಬಸವರಾಜ ಬೊಮ್ಮಾಯಿ ( CM Basavaraj Bommai ) ಅವರೇ? ಎಂದು ಪ್ರಶ್ನಿಸಿದೆ.
ಮಹಿಳೆಯರಿಗೆ, ಶೋಷಿತರಿಗೆ ಅಕ್ಷರದ ದಾಸೋಹ ನಡೆಸಿದ, "ಅಕ್ಷರದವ್ವ" ಎಂದೇ ಖ್ಯಾತರಾದ ಸಾವಿತ್ರಿ ಬಾ ಪುಲೆ ಅವರ ಪಠ್ಯವನ್ನು ಕೈಬಿಟ್ಟ ಸರ್ಕಾರ ಪಠ್ಯಪುಸ್ತಕಗಳಲ್ಲಿ ಬುಲ್ ಬುಲ್ ಹಕ್ಕಿ ಹಾರಿಸುತ್ತಿದೆ!
ಶಿಕ್ಷಣ ವಿರೋಧಿಯಾಗಿ ವರ್ತಿಸಿದ್ದು,
ಮಹನೀಯರಿಗೆ ಅವಮಾನಿಸಿದ್ದು ನಿಮ್ಮ ಒಂದು ವರ್ಷದ ಸಾಧನೆಯೇ @BSBommai ಅವರೇ?#BJPBrashtotsava pic.twitter.com/nzXI5WbYvz— Karnataka Congress (@INCKarnataka) September 9, 2022
ಸಾಹಿತ್ಯವನ್ನೇ ಅರಿಯದ, ಸುಳ್ಳು ಹೇಳುವುದನ್ನು, ಇತಿಹಾಸ ( History ) ತಿರುಚುವುದನ್ನು ಕಾಯಕ ಮಾಡಿಕೊಂಡಿರುವ ಬಿಜೆಪಿಯ ಬಾಡಿಗೆ ಭಾಷಣಕಾರನೂ ಮಕ್ಕಳ ಭವಿಷ್ಯ ರೂಪಿಸುವ ಪಠ್ಯದಲ್ಲಿ ಜಾಗ ಪಡೆದದ್ದಕ್ಕಿಂತ ದುರಂತ ಬೇರೊಂದಿಲ್ಲ. ಪಠ್ಯ ಪುಸ್ತಕ ರಚನೆಗೆ ಅಪ್ರಬುದ್ಧರನ್ನು ಕೂರಿಸಿ ಅವಾಂತರ ಎಬ್ಬಿಸಿದ್ದು ಸರ್ಕಾರದ ಮಹಾ ಸಾಧನೆಗಳಲ್ಲೊಂದು ಎಂದು ಕಿಡಿಕಾರಿದೆ.
ಸಾಹಿತ್ಯವನ್ನೇ ಅರಿಯದ, ಸುಳ್ಳು ಹೇಳುವುದನ್ನು, ಇತಿಹಾಸ ತಿರುಚುವುದನ್ನು ಕಾಯಕ ಮಾಡಿಕೊಂಡಿರುವ ಬಿಜೆಪಿಯ ಬಾಡಿಗೆ ಭಾಷಣಕಾರನೂ ಮಕ್ಕಳ ಭವಿಷ್ಯ ರೂಪಿಸುವ ಪಠ್ಯದಲ್ಲಿ ಜಾಗ ಪಡೆದದ್ದಕ್ಕಿಂತ ದುರಂತ ಬೇರೊಂದಿಲ್ಲ.
ಪಠ್ಯ ಪುಸ್ತಕ ರಚನೆಗೆ ಅಪ್ರಬುದ್ಧರನ್ನು ಕೂರಿಸಿ ಅವಾಂತರ ಎಬ್ಬಿಸಿದ್ದು ಸರ್ಕಾರದ ಮಹಾ ಸಾಧನೆಗಳಲ್ಲೊಂದು!#BJPBrashtotsava pic.twitter.com/zWaKmvWukQ
— Karnataka Congress (@INCKarnataka) September 9, 2022
#PuppetCM ಅವರ ಒಂದು ವರ್ಷದ ವಾರ್ಷಿಕೋತ್ಸವಕ್ಕೆ ಸಜ್ಜಾಗಿರುವ ಸರ್ಕಾರ ತಮ್ಮ ಸಾಧನೆ ಏನು ಎಂದು ನಾಡಿನ ಜನತೆಗೆ ಉತ್ತರಿಸಬೇಕು. ಪಠ್ಯಪುಸ್ತಕಗಳಲ್ಲಿ ಅವಾಂತರ ಸೃಷ್ಟಿಸಿದ ಸರ್ಕಾರ ಇನ್ನೂ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಗಲಿಲ್ಲ. ದೇಶದ್ರೋಹಿಗಳನ್ನು ದೇಶಭಕ್ತರನ್ನಾಗಿ ಬಿಂಬಿಸಿದ್ದೇ ಸಾಧನೆಯೇ? ಎಂದು ವಾಗ್ಧಾಳಿ ನಡೆಸಿದೆ.
#PuppetCM ಅವರ ಒಂದು ವರ್ಷದ ವಾರ್ಷಿಕೋತ್ಸವಕ್ಕೆ ಸಜ್ಜಾಗಿರುವ ಸರ್ಕಾರ ತಮ್ಮ ಸಾಧನೆ ಏನು ಎಂದು ನಾಡಿನ ಜನತೆಗೆ ಉತ್ತರಿಸಬೇಕು.
ಪಠ್ಯಪುಸ್ತಕಗಳಲ್ಲಿ ಅವಾಂತರ ಸೃಷ್ಟಿಸಿದ ಸರ್ಕಾರ ಇನ್ನೂ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಗಲಿಲ್ಲ.
ದೇಶದ್ರೋಹಿಗಳನ್ನು ದೇಶಭಕ್ತರನ್ನಾಗಿ ಬಿಂಬಿಸಿದ್ದೇ ಸಾಧನೆಯೇ?#BJPBrashtotsava pic.twitter.com/iXFk5yu0qx
— Karnataka Congress (@INCKarnataka) September 9, 2022
ರಾಜ್ಯದ ಜನತೆಗೆ ಯಾವ ಸಾಧನೆ, ಯೋಜನೆ, ಸ್ಪಂದನೆ ಮಾದಿದ್ದರೆಂದು ಸರ್ಕಾರ ಸಮಾವೇಶ ಮಾಡುತ್ತಿದೆ? ಬಿಜೆಪಿ ಸರ್ಕಾರ ಕರ್ನಾಟಕದ ಜನತೆಗೆ, ಕನ್ನಡ ನಾಡುನುಡಿಗೆ ಮಾಡಿದ್ದು ಬಿಟ್ಟರೆ ಬೇರೇನು ಮಾಡಿದೆ? ಪಠ್ಯಪುಸ್ತಕ ಪರಿಷ್ಕರಣೆ ಹೆಸರಲ್ಲಿ ನಾಡಿನ ಸಾಹಿತಿಗಳಿಗೆ ಅವಮಾನಿಸಿದ್ದೇ ನಿಮ್ಮ ಸಾಧನೆಯೇ ಬೊಮ್ಮಾಯಿ ಅವರೇ? ಎಂದು ಪ್ರಶ್ನಿಸಿದೆ.
ರಾಜ್ಯದ ಜನತೆಗೆ ಯಾವ ಸಾಧನೆ, ಯೋಜನೆ, ಸ್ಪಂದನೆ ಮಾದಿದ್ದರೆಂದು ಸರ್ಕಾರ ಸಮಾವೇಶ ಮಾಡುತ್ತಿದೆ?@BJP4Karnataka ಸರ್ಕಾರ ಕರ್ನಾಟಕದ ಜನತೆಗೆ, ಕನ್ನಡ ನಾಡುನುಡಿಗೆ ಮಾಡಿದ್ದು ಬಿಟ್ಟರೆ ಬೇರೇನು ಮಾಡಿದೆ?
ಪಠ್ಯಪುಸ್ತಕ ಪರಿಷ್ಕರಣೆ ಹೆಸರಲ್ಲಿ ನಾಡಿನ ಸಾಹಿತಿಗಳಿಗೆ ಅವಮಾನಿಸಿದ್ದೇ ನಿಮ್ಮ ಸಾಧನೆಯೇ @BSBommai ಅವರೇ?#BJPBrashtotsava pic.twitter.com/QhJmFsGsRE
— Karnataka Congress (@INCKarnataka) September 9, 2022