ಬೆಳಗಾವಿ : ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬೆನ್ನಲ್ಲೇ ಮಹಾರಾಷ್ಟ್ರದ ಸಚಿವರು ಉದ್ಧಟತನ ಮುಂದುವರೆಸಿದ್ದು, ಡಿಸೆಂಬರ್ 6 ರಂದು ನಾವು ಬೆಳಗಾವಿಗೆ ಹೋಗುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಸವಾಲು ಹಾಕಿದ್ದಾರೆ.
ತಹಶೀಲ್ದಾರರಿಗೆ ಜೀವ ಬೆದರಿಕೆ ಆರೋಪ: ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸೇರಿ 27 ಜನರ ವಿರುದ್ಧ FIR ದಾಖಲು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವ ಚಂದ್ರಕಾಂತ್ ಪಾಟೀಲ್, ಡಿಸೆಂಬರ್ 6 ರಂದು ನಾವು ಬೆಳಗಾವಿಗೆ ಹೋಗಿಯೇ ತೀರುತ್ತೇವೆ. ನನಗೆ ಯಾವುದೇ ಫ್ಯಾಕ್ಸ್ ಆಗಲಿ, ಬೊಮ್ಮಾಯಿಯ ಪತ್ರವಾಗಲಿ ತಲುಪಿಲ್ಲ. ನಾನು ಡಿಸೆಂಬರ್ 3 ರಂದು ಹೋಗಬೇಕಿತ್ತು. ಆದ್ರೆ ಡಿಸೆಂಬರ್ 6 ರಂದು ಡಾ.ಬಿ.ಆರ್.ಅಂಬೇಡ್ಕರ್ ಮಹಾಪರಿನಿರ್ವಾಹಣ ದಿನ ಇದೆ. ಅಂದು ಬೆಳಗಾವಿಯಲ್ಲಿ ಹಲವು ಕಾರ್ಯಕ್ರಮಗಳು ಇರುತ್ತವೆ. ಹೀಗಾಗಿ ನಾನು ಡಿ.6ರಂದು ಬೆಳಗಾವಿಗೆ ಭೇಟಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಎರಡೂ ರಾಜ್ಯಗಳ ಹಿತದೃಷ್ಟಿಯಿಂದ ಸಚಿವರು ಬೆಳಗಾವಿಗೆ ಭೇಟಿ ನೀಡಬಾರದು ಎಂದು ಮುಖ್ಯ ಕಾರ್ಯದರ್ಶಿಗಳು ಪತ್ರದಲ್ಲಿ ತಿಳಿಸಿದ್ದಾರೆ. ಅವರು ಭೇಟಿ ನೀಡಿದರೆ, ಕರ್ನಾಟಕವು ಹಿಂದಿನ ಸಂದರ್ಭಗಳಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಈ ಹಿಂದೆ ಮಹಾರಾಷ್ಟ್ರದ ಸಚಿವರ ವಿರುದ್ಧ ಶಾಂತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಉಲ್ಲಂಘನೆಗಾಗಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.