ಬೆಂಗಳೂರು : ವೀರ ಸಾವರ್ಕರ್ ಅವರು ಭಾರತ ದೇಶ ವಿಭಜನೆಯನ್ನು ತಡೆಯಲು ಯತ್ನಿಸಿದ್ದರು ಆದರೂ ದೇಶ ವಿಭಜನೆಯನ್ನು ತಡೆಯಲಾಗಲಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
BIGG NEWS : ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ : ಭಾರತ-ಪಾಕ್ ಸೈನಿಕರಿಂದ ಸಿಹಿಹಂಚಿಕೆ
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಬಿಜೆಪಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾವರ್ಕರ್ ಅವರು ದೇಶವಿಭಜನೆಯನ್ನು ತಡೆಯಲು ಯತ್ನಿಸಿದ್ದರು. ಆದರೂ ಸ್ವಾತಂತ್ರ್ಯ ಸಿಕ್ಕದಿನವೇ ದೇಶ ವಿಭಜನೆಯಾಯಿತು. ಇದಕ್ಕಿಂತ ದುರ್ದೈವ ಬೇರೆ ಇಲ್ಲ. ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸ ಬದಲಾಗುವುದಿಲ್ಲ ಎಂದು ಹೇಳಿದ್ದಾರೆ.
ಇದೀಗ ಸತ್ಯವನ್ನು ಹೇಳುವ ಕಾಲ ಬಂದಿದೆ. ಕೆಲವರು ಸತ್ಯ ಮರೆಮಾಚುವ ಕೆಲಸವನ್ನು ಮಾಡಿದರು. ಕೆಲವರ ಹೆಸರುಗಳು ಇತಿಹಾಸದಲ್ಲಿ ಬರೆದಿಲ್ಲ. ಸ್ವಾತಂತ್ರ್ಯ ಬಂದ ದಿನವೇ ಭಾರತ ವಿಭಜನೆ ಇದಕ್ಕಿಂತ ದುರ್ದೈವ ಬೇರೆ ಇಲ್ಲ ಎಂದರು.