ರಾಯಚೂರು: ಊಬರ್, ಓಲಾ ಆಟೋಗಳಿಗೆ ಯಾವುದೇ ಅನುಮತಿ ನೀಡಿಲ್ಲ. ಆದರೆ ಕಾರ್-ಟ್ಯಾಕ್ಸಿಗಳಿಗೆ ಅನುಮತಿ ನೀಡಲಾಗಿದೆ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು (B Sriramulu) ಸ್ಪಷ್ಟನೆ ನೀಡಿದ್ದಾರೆ.
ಚಾಮರಾಜನಗರ ಎಸ್ಪಿ ಕಚೇರಿ ಮುಂದೆಯೇ ವ್ಹೀಲಿಂಗ್ ಅಟ್ಟಹಾಸ, ನಿದ್ರಾವಸ್ಥೆಯಲ್ಲಿ ಪೊಲೀಸ್ ಇಲಾಖೆ!
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಊಬರ್, ಓಲಾ ಆಟೋಗಳಿಗೆ ಯಾವುದೇ ಅನುಮತಿ ನೀಡಿಲ್ಲ. ಆದರೆ ಕಾರ್-ಟ್ಯಾಕ್ಸಿಗಳಿಗೆ ಅನುಮತಿ ನೀಡಲಾಗಿದೆ, ಊಬರ್, ಓಲಾ ಆಟೋಗಳಿಂದ ಹೆಚ್ಚು ಹಣ ವಸೂಲಿ ಬಗ್ಗೆ ದೂರು ಬಂದಿವೆ. ಸಾರ್ವಜನಿಕರಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗಬಾರದು. ಸಾಮಾನ್ಯ ಆಟೋಗಳ ಮಾದರಿಯಲ್ಲೇ ಹಣ ಪಡೆಯಬೇಕು. ಇದು ಮತ್ತೆ ಪುನರಾವರ್ತನೆಯಾದರೆ ಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ಟ್ಯೂನ್ ಕದ್ದು ಬಿಲ್ಡಪ್ಕೊಟ್ಟ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಕಾಂತಾರದ ಹಾಡುಗಳಿಗೆ ನೆಟ್ಟಿಗರಿಂದ ತರಾಟೆ
ಓಲಾ, ಊಬರ್ ಆಟೋ ಚಾಲಕರು ಒಂದು ಕಿಮೀಗೆ 300, 400, 500 ರೂ, ಎರಡು ಕಿಮೀ ಗೆ 700 ರೂ. ಬಾಡಿಗೆ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದರು . ಊಬರ್ ಓಲಾ , ಆಟೋಗಳಿಂದ ಹೆಚ್ಚು ಹಣ ವಸೂಲಿ ವಿಚಾರವಾಗಿ ಊಬರ್, ಓಲಾ ಕಂಪನಿಯವರನ್ನು ಕರೆದು ಸಭೆ ಮಾಡುತ್ತೇವೆ. ತಪ್ಪು ಇದ್ದರೆ ಸರಿ ಮಾಡಿಕೊಳ್ಳಲು ಸೂಚನೆ ನೀಡುತ್ತೇವೆ ಎಂದರು.