ಬೆಂಗಳೂರು: ದಿನದಿಂದ ದಿನಕ್ಕೆ ಸೈಬರ್ ವಂಚಕರ ಹಾವಳಿ ಹಚ್ಚುತ್ತಿದ್ದರು ಕೂಡ ಜನತೆ ಬುದ್ದಿ ಕಲಿಯುತ್ತಿಲ್ಲ, ಅದರಲ್ಲೂ ಪೊಲೀಸ್ ಇಲಾಖೆ ಈ ಬಗ್ಗೆ ಎಚ್ಚರಿಂದ ಇರುವಂತೆ ಹೇಳುತ್ತಿದ್ದರು ಕೂಡ ಜನತೆ ಮೋಸ ಹೋಗುವುದು ಹೆಚ್ಚುತ್ತಿದೆ. ಈ ನಡುವೆ ಇನ್‌ಸ್ಟಾದಲ್ಲಿ ಸಾಲ ನೀಡುವ ಆಪ್ ನೋಡಿ ಸಾಲದ ಸಲುವಾಗಿ ಹಣವನ್ನು ಸೈಬರ್ ವಂಚಕನಿಗೆ ಸಿಲುಕಿಕೊಂಡು ಹಣವನ್ನು ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಯುವತಿಯೊಬ್ಬಳು ಸಾಲವನ್ನು ಪಡೆದುಕೊಳ್ಳುವ ಸಲುವಾಗಿ ಬರೋಬ್ಬರಿ 39750ರೂಗಳನ್ನು ಕಳೆದುಕೊಂಡು ಈಗ ಪೊಲೀಸರ ಮೊರೆ ಹೋಗಿದ್ದಾಳೆ. ಆಗಿರುವುದು ಏನು? ಇನ್‌ಸ್ಟಾದಲ್ಲಿ ಇಂಡಿಯಾ ಬುಲ್ಸ್ ಎನ್ನುವ ಜಾಹೀರಾತನ್ನು ನೋಡಿದ ಯುವತಿ 98393 52034 ನಂಬರ್‌ಗೆ ಕರೆ ಮಾಡಿದ್ದಾಳೆ. ಅತ್ತ ಕಡೆಯಿಂದ ಸೈಬರ್ ವಂಚಕ ನಿಮಗೆ 10 ಲಕ್ಷ ಸಾಲವನ್ನು ನೀಡುವುದಾಗಿ ಅಂತ ಹೇಳಿ, ಸಾಲ ನೀಡಬೇಕಾದ್ರೆ ಪ್ರೋಸೆಸಿಂಗ್ ಫೀಸ್ ಅಂತ ಹಣ ನೀಡಬೇಕು ಅಂತ 17500 ಹಾಕಿಸಿಕೊಂಡಿದ್ದಾನೆ, ನಂತರ ವಿಮೆ ಎನ್ನುವ ಸಲುವಾಗಿ 16750 ಹಾಕಿಸಿಕೊಂಡಿದ್ದಾನೆ, ನಂತರ 5500 ದುಡ್ಡು ಹಾಕಿಸಿಕೊಂಡಿದ್ದಾನೆ.
ಮತ್ತೆ ಸೈಬರ್ ವಂಚಕ ಯುವತಿಗೆ ಕರೆ ಮಾಡಿ 40000ರೂಗಳಿಗೆ ಬೇಡಿಕೆ ಇಟ್ಟಿದ್ದಾಳೆ. ಅನುಮಾನದಿಂದ ಯುವತಿ ನನಗೆ ಸಾಲ ಬೇಡ ನನಗೆ ಹಣವನ್ನು ವಾಪಸ್ಸು ಕೊಡುವಂತೆ ಕೇಳಿದಾಗ ಇಲ್ಲದೇ ಇರೋ ಸಾಬೂಬು ಹೇಳಿ, ಮತ್ತೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಇನ್ನೂ ಆ ಯುವತಿ ಹಣ ನೀಡದೇ ಹೋದರೆ ನಿನ್ನ ವಿರುದ್ದ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದರೆ, ಸೈಬರ್ ವಂಚಕ ಪೋಲಿಸರ ಬಗ್ಗೆ ತೀರ ಕೊಳಕಾಗಿ ಮಾತನಾಡಿದ್ದು, ನನಗೆ ಯಾರು ಏನು ಮಾಡಲು ಸಾಧ್ಯವಿಲ್ಲ, ಎಲ್ಲರೂ ನನಗೆ ಗೊತ್ತಿದೆ ಅಂತ ಹೇಳಿದ್ದಾನೆ. ಇನ್ನೂ ಸಮಸ್ಯೆ ನಮ್ಮ ನಮ್ಮ ತಂಡವನ್ನು ಸಂರ್ಪಕಿಸಿದ ವೇಳೆ ನಮ್ಮ ತಂಡದ ಸಿಬ್ಬಂದಿ ಸೈಬರ್ ವಂಚಕನ ಜೊತೆಗೆ ಮಾತನಾಡಿದಾಗಲೂ ಕೂಡ ಸೈಬರ್ ದೂರು ನೀಡಿದರು ಕೂಡ ಏನು ಮಾಡಲು ಸಾಧ್ಯವಿಲ್ಲ, ನಿನಗೆ ಒಂದು ಗತಿ ಕಾಣಿಸುವೆ ಅಂತ ಹೇಳಿದ.
ಸದ್ಯ ನೊಂದ ಯುವತಿ ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ನಡೆದ ಘಟನೆಯನ್ನು ವಿವರಿಸಿದ ವೇಳೇಯಲ್ಲಿ ಪೋಲಿಸ್ ಸಿಬ್ಬಂದಿ ಯುವತಿಗೆ ಧೈರ್ಯ ತುಂಬಿ ಮುಂದಿನ ಕಾನೂನು ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದ್ದಾರೆ. ಇದಲ್ಲದೇ ಮಾರತ್ತಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ಕೂಡ ಸೈಬರ್ ವಂಚಕನ ಜೊತೆಗೆ ಮಾತನಾಡಿದ ವೇಳೇಯಲ್ಲಿ ಸೈಬರ್ ವಂಚಕ ಪೊಲೀಸರೊಂದಿಗೆ ಅನುಚಿತವಾಗಿ ವರ್ತನೆ ಮಾಡಿದ್ದು, ಸದ್ಯ ಮಾರತ್ತಹಳ್ಳಿ ಪೊಲೀಸ್ ಠಾಣೆ ಪೊಲೀಸರು ಹಾಗೂ ಬೆಂಗಳೂರು ಪೊಲೀಸರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ








