ಬೆಂಗಳೂರು : ಹಿಜಾಬ್ ಕುರಿತ ಸುಪ್ರೀಂಕೋರ್ಟ್ ತೀರ್ಪು ಬಂದಿದ್ದು, ಹಿಜಾಬ್ ವಿಚಾರದಲ್ಲಿ ಸರ್ಕಾರದ ನಿಲುವು ಬದಲಾವಣೆ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಚಾರದಲ್ಲಿ ಸರ್ಕಾರದ ನಿಲುವು ಬದಲಾವಣೆ ಇಲ್ಲ. ಸರ್ಕಾರಿ ಶಾಲೆಗೆ ಬರುವವರು ನಿಯಮ ಪಾಲನೆ ಮಾಡಬೇಕು. ವಿದ್ಯಾರ್ಥಿಗಳು ಮನೆಯಲ್ಲಿ ಏನೂ ಬೇಕಾದ್ರೂ ವಸ್ತ್ರ ಧರಿಸಲಿ, ಶಾಲೆಗೆ ಬರುವಾಗ ಸಮವಸ್ತ್ರ ಕಡ್ಡಾಯವಾಗಿದೆ ಎಂದರು.
ಹಿಜಾಬ್ ( Hijab Row) ವಿವಾದದ ಕುರಿತು ಸುಪ್ರೀಂಕೋರ್ಟ್ (Supreme Court) ಇಂದು ಐತಿಹಾಸಿಕ ತೀರ್ಪು (Verdict) ಪ್ರಕಟಿಸಿದೆ. ನ್ಯಾಹೇಮಂತ್ ಗುಪ್ತಾ, ನ್ಯಾ ಸುಧಾಂಶು ಧುಲಿಯಾ ನ್ಯಾಯಮೂರ್ತಿಗಳು ವಿಭಿನ್ನ ತೀರ್ಪು ನೀಡಿದ್ದಾರೆ. ಮುಸ್ಲಿಂ ವಿದ್ಯಾರ್ಥಿಯರ ಮೇಲ್ಮನವಿ ವಜಾ ಮಾಡಲಾಗಿದೆ ಎಂದು ನ್ಯಾಯ ಮೂರ್ತಿ ಹೇಮಂತ್ ಗುಪ್ತಾ ಆದೇಶ ಹೊರಡಿಸಿದ್ದಾರೆ. ನ್ಯಾ ಸುಧಾಂಶು ಧುಲಿಯಾ ಹೈಕೋರ್ಟ್ ತೀರ್ಪು ರದ್ದುಗೊಳಿಸಿದ್ದಾರೆ. ಹೀಗಾಗಿ ಹಿಜಾಬ್ ಪ್ರಕರಣ ಸಿಜೆಐ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.