ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಕೆಲ ದಿನಗಳ ಹಿಂದೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿಯನ್ನು ಹೆಚ್ಚಿಸಲಾಗಿತ್ತು. ಈ ಮೀಸಲಾತಿ ಹೆಚ್ಚಳದ ಅನ್ವಯ ನೇರನೇಮಕಾತಿ, ಮುಂಬಡ್ತಿಯಲ್ಲಿ ಅವಕಾಶ ನೀಡೋ ಸಲುವಾಗಿ, ಈಗ ಎಲ್ಲಾ ನೇರ ನೇಮಕಾತಿ, ಮುಂಬಡ್ತಿಗೆ ( Direct Recruitment, Promotion ) ತಡೆ ನೀಡಲಾಗಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ( Karnataka Chief Secretory Vandita Sharma ) ಅವರು ಹೊರಡಿಸಿರುವಂತ ಟಿಪ್ಪಣಿ ಪ್ರತಿಯು ಕನ್ನಡ ನ್ಯೂಸ್ ನೌಗೆ ಲಭ್ಯವಾಗಿದೆ. ಅವರು ಹೊರಡಿಸಿರುವಂತ ಟಿಪ್ಪಣಿಯಲ್ಲಿ ದಿನಾಂಕ 23-10-2022ರಂದು ಕರ್ನಾಟಕ ಅನುಸೂಚಿತ ಜಾತಿ, ಪಂಡಗಳಿಗೆ ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ( Jobs ) ಮೀಸಲಾತಿ ಸಂಬಂಧ ಆಧ್ಯಾದೇಶವನ್ನು ದಿನಾಂಕ 01-11-2022ರಿಂದ ಜಾರಿಗೆ ಬರುವಂತೆ ಹೊರಡಿಸಲಾಗಿದೆ ಎಂದಿದ್ದಾರೆ.
BIGG NEWS : ದತ್ತಪೀಠ ವಿವಾದ : ಎಂಟು ಸದಸ್ಯರ ‘ಆಡಳಿತ ಮಂಡಳಿ’ ರಚಿಸಿ ರಾಜ್ಯ ಸರ್ಕಾರ ಆದೇಶ
ಈ ಆದೇಶದಂತೆ ನೇರ ನೇಮಕಾತಿ ಅಥವಾ ಪದೋನ್ನತಿಯಲ್ಲಿ ಅನುಸೂಚಿತ ಜಾತಿ, ಪಂಗಡಗಳಿಗೆ ಸೇರಿದ ವ್ಯಕ್ತಿಗಳಿಗೆ ಹೆಚ್ಚಿಸಲಾಗಿರುವ ಮೀಸಲಾತಿಯನ್ನು ಜಾರಿಗೊಳಿಸಲು ರೋಸ್ಟರ್ ಬಿಂದುಗಳನ್ನು ಗುರುತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಇದೀಗ ಚಾಲ್ತಿಯಲ್ಲಿರುವಂತ ರೋಸ್ಟರ್ ಬಿಂದು ಪ್ರಕ್ರಿಯ ಹಿನ್ನಲೆಯಲ್ಲಿ, ಅಂತಿಮಗೊಂಡು ಅಧಿಕೃತವಾಗಿ ಪ್ರಕಟವಾಗುವವರೆಗೆ ಎಲ್ಲಾ ನೇರನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯಲಾಗಿದೆ. ಈ ಮೀಸಲಾತಿ ಅನ್ವಯವಾಗುವ ವೃಂದಗಳಿಗೆ ನೀಡಲಾಗುವಂತ ಮುಂಬಡ್ತಿಯನ್ನು ಇಲಾಖಾ ಮುಂಬಡ್ತಿ ಸಮಿತಿ ಸಭೆಯನ್ನು ಆಯೋಜಿಸಬಾರದು ಎಂಬುದಾಗಿ ಸೂಚಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ