ತುಮಕೂರು : ತುಮಕೂರು ವಿಶ್ವವಿದ್ಯಾಲಯದಲ್ಲಿ ವೀರ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ವಿಶ್ವವಿದ್ಯಾಲಯ ಸಿಂಡಿಕೇಟ್ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.
ದೇವರೇ… ಮತ್ತೊಮ್ಮೆʼ ಮುಖ್ಯಮಂತ್ರಿ ಸಿದ್ದರಾಮಯ್ಯʼ ಆಗಲಿ : ಗಮನ ಸೆಳೆದ ʻ ಕಾಂಗ್ರೆಸ್ ನಾಯಕನ ಬಾಳೆಹಣ್ಣಿನ ಹರಕೆ ʼ
ಶುಕ್ರವಾರ ನಡೆದ ಸಭೆಯಲ್ಲಿ ವಿವಿ ಸಿಂಡಿಕೇಟ್ ಸದಸ್ಯ ವಿನಯ್ ಸಭೆಯ ಅಜೆಂಡಾದಲ್ಲಿ ಸಾವರ್ಕರ್ ಪೀಠ ಸ್ಥಾಪನೆಯ ವಿಷಯದ ಬಗ್ಗೆ ಪ್ರಸ್ತಾಪಿಸಿದ್ದರು. ಸಿಂಡಿಕೇಟ್ ಸಭೆಯಲ್ಲಿ ಸಾವರ್ಕರ್ ಅಧ್ಯಯನ ಪೀಠಕ್ಕೆ ಒಪ್ಪಿಗೆ ನೀಡಲಾಗಿದ್ದು, ಆಂತರಿಕ ನಿಧಿ ಬಳಸಿಕೊಳ್ಳಲು ಸರ್ವಾನುಮತದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
BIGG BREAKING NEWS : ಭಾರತದ 49 ನೇ ಮುಖ್ಯ ನ್ಯಾಯಮೂರ್ತಿಯಾಗಿ `ಯುಯು ಲಲಿತ್’ ಪ್ರಮಾಣ ವಚನ
ವಿ.ಡಿ. ಸಾವರ್ಕರ್ ಪೀಠ ಸ್ಥಾಪನೆಗೆ ಅಗತ್ಯ ಇರುವ ಕರಡು ಪರಿನಿಯಮ ಸಿದ್ಧಗೊಂಡಿದ್ದು, ಪೀಠ ಆರಂಭಕ್ಕೆ ಬೇಕಾಗಿರುವ 25 ಲಕ್ಷ ರೂ. ಗಳನ್ನು ದಾನಿಗಳಿಂದ ಸಂಗ್ರಹಿಸಲು ನಿರ್ಧಾರ ಮಾಡಿದ್ದಾರೆ. ವಿವಿಯಲ್ಲಿ ಸಾವರ್ಕರ್ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆ ದೇಶದಲ್ಲಿ ಇದೇ ಮೊದಲಾಗಿದ್ದು, ಮತ್ತೆ ವಿವಾದದ ಕಿಡಿ ಬುಗಿಲೇಳುವ ಸಾಧ್ಯತೆ ಇದೆ.