ಬೆಳಗಾವಿ : ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಎರಡನೇ ದಿನದ ಕಲಾಪದಲ್ಲಿ 2022ನೇ ಸಾಲಿನ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಧೀಕ ಸೇವೆಗಳಲ್ಲಿನ ನೇಮಕಾತಿ ಅಥವ ಹುದ್ದೆಗಳಲ್ಲಿ ಮೀಸಲಾತಿ) ವಿಧೇಯಕ ಮಂಡನೆ ಮಾಡಲಾಗಿದೆ.
Good News : ರೈತರಿಗೆ ಗುಡ್ ನ್ಯೂಸ್ : ಶೀಘ್ರವೇ ಹಾಲಿನ ಬಾಕಿ ಪ್ರೋತ್ಸಾಹಧನ ಬ್ಯಾಂಕ್ ಖಾತೆಗೆ ಜಮಾ
ಗೃಹ ಸಚಿವ ಅರಗಜ್ಞಾನೇಂದ್ರ ಅವರು, 2022ನೇ ಸಾಲಿನ ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕ ಮಂಡನೆ ಮಾಡಲಾಗಿದೆ. 2022ನೇ ಸಾಲಿನ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ ಮಂಡನೆ. 2022ನೇ ಸಾಲಿನ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕ ಮಂಡನೆ ಸೇರಿ ನಾಲ್ಕು ವಿದೇಯಕ ಮಂಡನೆ ಮಾಡಿದ್ದಾರೆ.
ಕೇಂದ್ರ ಸರ್ಕಾರದ ದಿ ಐಡೆಂಟಿಫಿಕೇಷನ್ ಆಫ್ ಪ್ರಿಸನರ್ಸ್ 2021 ತರಲಾಗಿತ್ತು. ಕಾನೂನು ಮತ್ತು ಸುವ್ಯವಸ್ಥೆ ಪರಿಣಾಮಕಾರಿಯಾಗಿ ಕಾಪಾಡಲು. ಅಪರಾಧಿಯ DNA, ಧ್ವನಿ ಪರೀಕ್ಷೆ, ಕಣ್ಣಿನ ಮಾದರಿ ಸಂಗ್ರಹ ಮಾಡುವ ಬಗ್ಗೆ ನ್ಯಾಯಾಧೀಶರಿಗೆ ಮಾತ್ರ ಅಧಿಕಾರ ಇತ್ತು. ಎಸ್ಪಿ ಅವರಿಗೂ ಅಧಿಕಾರ ನೀಡುವಂತೆ ಅಮೆಂಡ್ಮೆಂಟ್ ಕೊಡಲು ನಿರ್ಣಯ ಮಾಡಲಾಗಿತ್ತು. ಯಾವುದೇ ನಿರ್ದೇಶನ ಇಲ್ಲದಿದ್ದಲ್ಲಿ ನಿರಾಪರಾಧಿ ಅಂತ ಘೋಷಿಸಿದಲ್ಲಿ. ಹತ್ತು ವರ್ಷದ ಬಳಿಕ ಅದನ್ನ ಡೆಸ್ಟ್ರಾಯ್ ಮಾಡಲು ಅವಕಾಶ ಇತ್ತು. ಈ ಬಿಲ್ ಅನ್ನ ರಾಷ್ಟ್ರಪತಿ ಸಹಿಗೆ ಹಳಿಸಲಾಗಿತ್ತು. ಅಷ್ಟರಲ್ಲಿ ಈ ಬಿಲ್ಲನ್ನ ನಿರಷನಗೊಳಿಸಿ, ದಿ ಐಡೆಂಟಿಫಿಕೇಷನ್ ಆಫ್ ಪ್ರಿಸನರ್ಸ್ 2022ನ್ನ ಜಾರಿಗೆ ತಂತು. ಹಾಗಾಗಿ ಈ ಬಿಲ್ ಹಿಂಪಡೆಯುತ್ತಿರೋದಾಗಿ ಸಭೆಗೆ ಆರಗ ಜ್ಞಾನೇಂದ್ರ ಉತ್ತರ ನೀಡಿದ್ದಾರೆ.