ವಿಜಯನಗರ : ಜನಪರ ಯೋಜನೆ ಆಡಿಯಲ್ಲಿ ರಾಜ್ಯದ ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್ ಪಡಿತರ ಚೀಟಿ ಹೊಂದಿರುವ) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬದ ಗೃಹ ವಿದ್ಯುತ್ ಬಳಕೆದಾರರಿಗೆ (ಭಾಗ್ಯ ಜ್ಯೋತಿ, ಕುಟೀರ, ಜ್ಯೋತಿ ಒಳಗೊಂಡಂತೆ) ಮಾಸಿಕ 75 ಯುನಿಟ್ಗಳ ಉಚಿತ ವಿದ್ಯುತ್ ಒದಗಿಸುವ ಕಾರ್ಯಕ್ರಮವನ್ನು “ಅಮೃತ ಜ್ಯೋತಿ” ಕಾರ್ಯಕ್ರಮ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದು, ನೊಂದಣಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಹೊಸಪೇಟೆ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ತಿಳಿಸಿದ್ದಾರೆ.
ಹೊಸಪೇಟೆ ನಗರದ ಉಪ-ವಿಭಾಗ-1ರ ವ್ಯಾಪ್ತಿಯಲ್ಲಿ ಬರುವಂತಹ ಬಸವೇಶ್ವರ ಬಡಾವಣೆ, ಇಂಡಸ್ಟ್ರೀಯಲ್ ಏರಿಯಾ, ಅಮರಾವತಿ, ಸಾಯಿರಾಂ ಬಡಾವಣೆ, ಮಲ್ಲಿನಾಥ್ ಲೇಔಟ್, ಚಿತ್ತವಾಡಿಗಿ, ಕಲ್ಯಾಣನಗರ, ಪಟೇಲ್ ನಗರ, ಅನ್ನಪೂರ್ಣ ಬಡಾವಣೆ, ಕಾಲೇಜ್ ರಸ್ತೆ, ಇಂದಿರಾ ನಗರ, ಚಾಪಲ್ ಗಟ್ಟ, ಸ್ಟೇಷನ್ ರೋಡ್ ಏರಿಯಾ, ಭಾರತಿ ನಗರ, ಪಟೇಲ್ ನಗರ ರೈಲ್ವೆ ಸ್ಟೇಷನ್, ಶ್ರೀರಾಮ್ ಪಾರ್ಕ್, ರಾಯಲ್ ಆರ್ಕೇಟ್, ಚಲುವಾದಿಕೇರಿ, ಜಬ್ಬಲ್ ಸರ್ಕಲ್, ಎನ್.ಸಿ. ಕಾಲೋನಿ, ಚಪ್ಪರದಹಳ್ಳಿ, ಎಸ್.ಆರ್.ನಗರ, ಎಂ.ಜೆ.ನಗರ, ಗಾಂಧಿ ಕಾಲೋನಿ, ಬಿಟಿಆರ್ ನಗರ, ವಿದ್ಯಾ ನಗರ್, ಭಗತ್ಸಿಂಗ್ ನಗರ, ಸಂಡೂರು ರಸ್ತೆ, ವಿದ್ಯಾರಣ್ಯ ನಗರ, ವಿವೇಕಾನಂದ ನಗರ, ಜೋಳದರಾಶಿ ಗುಡ್ಡ, ಸಾಯಿಬಾಬಾ ಸರ್ಕಲ್, ಗೋಕುಲ ನಗರ, ಸೋನಿಯಾ ನಗರ, ಇಂದಿರಾ ನಗರ, ವಂಕಾಯ ಕ್ಯಾಂಪ್, ಜನತಾ ಕಾಲೋನಿ, ರಾಯರಕೆರೆ, ನಿಶಾನಿ ಕ್ಯಾಂಪ್, ಡ್ರೆಸೆಸ್ ಕ್ಯಾಂಪ್, ಪಿಎಲ್ಸಿ ಏರಿಯಾ, ಟಿಬಿ ಡ್ಯಾಂ ಇತ್ಯಾದಿ ಏರಿಯಾ ಗ್ರಾಹಕರು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿಗಳನ್ನು “sevasindhu.karnataka.govt.in” ವೆಬ್ಸೈಟ್ನಲ್ಲಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜೆಸ್ಕಾಂ ಕಚೇರಿಗೆ ಸಂಪರ್ಕಿಸಬಹುದು.