ನವದೆಹಲಿ : ಸಂಗೀತ ನಾಟಕ ಅಕಾಡೆಮಿಯು ಕರ್ನಾಟಕದ 7 ಕಲಾವಿದರಿಗೆ 2022 ನೇ ಸಾಲಿನ ಸಂಗೀತ ನಾಟಕ ಅಕಾಡೆಮಿ ಅಮೃತ ಪ್ರಶಸ್ತಿ ಘೋಷಿಸಿದೆ.
ಕರ್ನಾಟಕದ ಐವರು ಸೇರಿ ಒಟ್ಟು 75 ಕಲಾವಿದರಿಗೆ 2022 ನೇ ಸಾಲಿನ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟಿಸಲಾಗಿದ್ದು, ಕರ್ನಾಟಕದ ಇನ್ನಿಬ್ಬರು ಕಲಾವಿದರು 2020 ಹಾಗೂ 2021 ನೇ ಸಾಲಿನ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
2020 ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಕರ್ನಾಟಕದಿಂದ ಜಾನಪದ ಸಂಗೀತ ವಿಭಾಗದಲ್ಲಿ ಎಸ್.ಜಿ. ಲಕ್ಷ್ಮೀದೇವಮ್ಮ ಹಾಗೂ 2021 ನೇ ಸಾಲಿನಲ್ಲಿ ಗರ್ತಿಗೆರೆ ರಾಘಣ್ಣ ಆಯ್ಕೆಯಾಗಿದ್ದಾರೆ.
2022 ನೇ ಸಾಲಿನ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತರು
- ಗೌರಿ ಕುಪ್ಪುಸ್ವಾಮಿ
- ಅನಸೂಯ ಕುಲಕರ್ಣಿ
- ಭರತ ನಾಟ್ಯ ಕಲಾವಿದೆ ಲಲಿತಾ ಶಱರೀವಾಸನ್
- ರಂಗಭೂಮಿ ಕಲಾವಿದ ಎ.ಎಸ್. ಜಯತೀರ್ಥ
- ಜಾನಪದ ಕಲಾವಿದ ಮಾರಪ್ಪದಾಸ್ ಆಯ್ಕೆಯಾಗಿದ್ದಾರೆ.