ಬಾಗಲಕೋಟೆ: ಸೋಷಿಯಲ್ ಮೀಡಿಯಾದಲ್ಲಿ ತಂದೆಯ ಕಾಲಂ ನಲ್ಲಿ ವಿಜಯಾನಂದ ಕಾಶಪ್ಪನವರ್ ಎಂಬುದಾಗಿ ಉಲ್ಲೇಖಿಸಿರುವಂತ ಜನನ ಪ್ರಮಾಣ ಪತ್ರವೊಂದು ವೈರಲ್ ಆಗಿದೆ. ಅಲ್ಲದೇ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಎರಡನೇ ಮದುವೆಯನ್ನು ನಟಿ ಪೂಜಾಶ್ರೀ ಎಂಬುವರೊಂದಿಗೆ ಆಗಿದ್ದಾರೆ ಎಂಬುದಾಗಿ ಗುಸುಗುಸು ಸದ್ದು ಹರಿದಾಡುತ್ತಿದೆ. ಆ ಬಗ್ಗೆ ಸ್ವತಹ ಮಾಜಿ ಶಾಸಕರು ಏನ್ ಹೇಳಿದ್ರು ಅಂತ ಮುಂದೆ ಓದಿ.
BIGG NEWS :ಶೀಘ್ರವೇ ಉತ್ತರ ಕನ್ನಡ ಜಿಲ್ಲೆಯಲ್ಲಿ `ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ’ : ಆರೋಗ್ಯ ಸಚಿವ ಸುಧಾಕರ್ ಭರವಸೆ
ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದಂತ ಅವರು, ನನಗೆ ಆ ಸರ್ಟಿಫಿಕೇಷ್ ತಂದು ತೋರಿಸಿದ್ರೇ ಮಾತನಾಡುತ್ತೇನೆ. ನನಗೆ ಯಾವುದೇ ಮಾಹಿತಿ ಇಲ್ಲದೇ ಎರಡನೇ ಮದುವೆ ಬಗ್ಗೆ ಪ್ರತಿಕ್ರಿಯಿಸೋದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ. ಯಾರೂ ವೈಯಕ್ತಿಕ ಜೀವನಕ್ಕೆ ಹೋಗಬಾರದು. ರಾಜಕೀಯವೇ ಬೇರೆಯಾಗಿದೆ, ವೈಯಕ್ತಿಕ ಬದುಕೇ ಬೇರೆಯಾಗಿದೆ. ನಾನು ದಾಖಲೆಯಿಲ್ಲದೇ ಯಾವುದೇ ಮಾತನಾಡೋದಿಲ್ಲ. ನನಗೆ ದಾಖಲೆ ಸಿಗಲಿ ಆಗ ಮಾತನಾಡುತ್ತೇನೆ ಎಂಬುದಾಗಿ ತಿಳಿಸಿದರು.
BIGG NEWS : ರೈತರೇ ಗಮನಿಸಿ : `ರೈತ ಶಕ್ತಿ ಯೋಜನೆ’ಯಡಿ ಡೀಸಲ್ ಸಹಾಯಧನ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ