ಧಾರವಾಡ : ಹುಬ್ಬಳ್ಳಿ ನಗರದ ಗೋಕುಲ ರೋಡ ನಿವಾಸಿ ಸಪ್ನಾ ಮುಸಾಳೆ ರವರಿಗೆ ಶ್ರೀ.ರೇಣುಕಾ ಲಕ್ಷ್ಮೀ ಅಸೋಸಿಯೇಟ್ಸ್ನ ಆನಂದ ಹಬೀಬ ಅವರು ತಾವು ಬೆಂಗೇರಿಯಲ್ಲಿ ಲೇಔಟ್ ನಿರ್ಮಿಸುತ್ತಿರುವುದಾಗಿ ಹೇಳಿ ಪ್ಲಾಟನ್ನು 7 ಲಕ್ಷ 20 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದರು.
BIGG NEWS : ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ : ಮಹಿಳೆಯರು ಸೇರಿ 20ಕ್ಕೂ ಹೆಚ್ಚು ಜನರಿಗೆ ಗಾಯ
ಈ ಬಗ್ಗೆ ದೂರುದಾರರು 4 ಲಕ್ಷ 50 ಸಾವಿರ ರೂಪಾಯಿ ಮುಂಗಡ ಹಣ ಕೊಟ್ಟಿದ್ದಳು. ಸಾಕಷ್ಟು ಕಾಲಾವಕಾಶ ಕಳೆದರೂ ಬಿಲ್ಡರ ಲೇಔಟ್ ನಿರ್ಮಾಣ ಮಾಡಿಲ್ಲದ ಕಾರಣ ಅವರಿಂದ ತನಗೆ ಸೇವಾ ನೂನ್ಯತೆ ಆಗಿ ಮೋಸವಾಗಿದೆ ಅಂತಾ ಹೇಳಿ ಕ್ರಮಕೈಗೊಳ್ಳುವಂತೆ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
BIGG NEWS : ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ; `ಗ್ರಾಮ ಒನ್’ ಕೇಂದ್ರಗಳಲ್ಲಿ ವಿತರಣೆ
ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವ್ಹಿ.ಎ.ಬೋಳಶೆಟ್ಟಿ ದೂರುದಾರರಿಂದ ಮುಂಗಡವಾಗಿ ಪಡೆದ ಹಣವನ್ನು ಡೆವಲಪರ್ ತಮ್ಮ ವೈಯಕ್ತಿಕ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡು ಅವರಿಗೆ ಪ್ಲಾಟುಗಳನ್ನು ಕೊಡದೇ ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿ ಮೋಸ ಮಾಡಿರುತ್ತಾರೆ ಅಂತಾ ಆಯೋಗ ಅಭಿಪ್ರಾಯಪಟ್ಟಿದೆ. ಆ ಬಗ್ಗೆ ಶ್ರೀ.ಲಕ್ಷ್ಮೀ ಅಸೋಸಿಯೇಟ್ಸ್ ಮಾಲೀಕ ಆನಂದ ಹಬೀಬ ಅವರು ದೂರುದಾರರಿಂದ ಪಡೆದ ರೂ.,4,50,000/-ಗಳನ್ನು ದಿ:07/01/2019 ರಿಂದ ಶೇ8% ರಂತೆ ಬಡ್ಡಿ ಹಾಕಿ ಸಂದಾಯ ಮಾಡುವಂತೆ ಆದೇಶಿಸಿದೆ. ಜೊತೆಗೆ ಸೇವಾ ನ್ಯೂನ್ಯತೆಯಿಂದ ದೂರುದಾರರಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗೆ ರೂ.50,000,/-ಗಳನ್ನು ಪರಿಹಾರವಾಗಿ ಹಾಗೂ ರೂ.10,000/-ಗಳನ್ನು ಪ್ರಕರಣದ ಖರ್ಚು-ವೆಚ್ಚ ನೀಡುವಂತೆ ಆಯೋಗ ಆದೇಶಿಸಿದೆ.