ನವದೆಹಲಿ : ಭಯೋತ್ಪಾದನೆಗೆ ನೆರವು ನೀಡಿದ ಆರೋಪದ ಹಿನ್ನೆಲೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಕಳೆದ ಕೆಲ ವರ್ಷಗಳಿಂದ ವಿದೇಶಗಳಿಂದ ಅಕ್ರಮವಾಗಿ 120 ಕೋಟಿ ರೂ. ಹಣ ಸಂಗ್ರಹಿಸಿತ್ತು ಎಂಬ ಸ್ಪೋಟಕ ಮಾಹಿತಿಯನ್ನು ಜಾರಿ ನಿರ್ದೇಶನಾಲಯ ಪತ್ತೆ ಮಾಡಿದೆ.
BIGG NEWS : ಬ್ಯಾಂಕ್ ಗಳಿಂದ ರೈತರ ಆಸ್ತಿಪಾಸ್ತಿ ಜಪ್ತಿಗೆ ನಿಷೇಧ : ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ
ಪಿಎಫ್ ಐ ತನಿಖಾ ಸಂಸ್ಥೆಗಳ ಕಣ್ಣುತಪ್ಪಿಸಿ ವಿದೇಶದಲ್ಲಿರುವ ಪಿಎಫ್ ಐ ಬೆಂಬಲಿಗರು, ಕಾರ್ಯಕರ್ತರು, ಭಾರತದಲ್ಲಿನ ತಮ್ಮ ಅನಿವಾಸಿ ಭಾರತೀಯ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುತ್ತಿದ್ದರು. ಬಳಿಕ ಈ ಹಣವನ್ನು ಪಿಎಫ್ ಐನ ವಿವಿಧ ಚಟುವಟಿಕೆಗಳಿಗೆ ಬಳಸಲಾಗುತ್ತಿತ್ತು ಎಂದು ಇಡಿ ಪತ್ತೆ ಮಾಡಿದೆ.
BIGG NEWS : ನಕಲಿ ಪ್ರಮಾಣಪತ್ರ ನೀಡಿ ಸರ್ಕಾರಿ ಉದ್ಯೋಗ ಪಡೆದವರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್
ಹವಾಲಾ ಮಾರ್ಗ, ಭೂಗತ ಮಾರ್ಗ, ಇತರೆ ಕಾರ್ಯಕರ್ತರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಜಾಲವನ್ನು ಇಡಿ ಪತ್ತೆ ಹಚ್ಚಿದ್ದು, ಕಳೆದ ಕೆಲ ವರ್ಷಗಳಲ್ಲಿ ಹೀಗೆ ವಿವಿಧ ಮೂಲಗಳಿಂದ ಪಿಎಫ್ ಐ ಖಾತೆಗೆ ಒಟ್ಟು 120 ಕೋಟಿ ರೂ.ಹಣ ಜಮೆಯಾಗಿದೆ ಎಂದು ತಿಳಿದುಬಂದಿದೆ.