ಮೈಸೂರು : ಮೀಸಲಾತಿಗೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮಹತ್ವದ ಹೇಳಿಕೆ ನೀಡಿದ್ದು, ಆರ್ಥಿಕವಾಗಿ ಸಬಲರಾಗಿರುವವರಿಗೆ ಯಾಕೆ ಮೀಸಲಾತಿ ನೀಡಬೇಕು ಎಂದು ಪ್ರಶ್ನಿಸಿದ್ದಾರೆ.
BIGG NEWS: ಬೆಂಗಳೂರಿನಲ್ಲಿ ಸಿವಿಲ್ ವರ್ಕ್ಗೆ ಇನ್ಮುಂದೆ ಕ್ವಾಲಿಟಿ ಚೆಕ್ ಕಡ್ಡಾಯ: ಬಿಬಿಎಂಪಿ ಆದೇಶ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬದವರು ಎಷ್ಟು ವರ್ಷಗಳಿಂದ ರಾಜಕಾರಣದಲ್ಲಿ ಇದ್ದಾರೆ. ಖರ್ಗೆಯವರು ಮಂತ್ರಿಯಾಗಿ ಆರ್ಥಿಕವಾಗಿ ಸಬಲತೆಯನ್ನು ಹೊಂದಿದ್ದಾರೆ. ಆರ್ಥಿಕವಾಗಿ ಮೇಲೆ ಬಂದ ಮೇಲೂ ಯಾಕೆ ಮೀಸಲಾತಿ ಕೊಡಬೇಕು? ಎಂದು ಹೇಳಿದ್ದಾರೆ.
ಎಲ್ಲಾ ದಲಿತ ನಾಯಕರಿಂದ ಮೀಸಲಾತಿ ದುರಪಯೋಗವಾಗುತ್ತಿದೆ. ಹೀಗಾಗಿ ಆರ್ಥಿಕ ಸಬಲಿರಿಗೆ ಮೀಸಲಾತಿ ನಿಲ್ಲಸಲಿ. ನಾನು ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಆಯ್ಕೆಯಾಗಿ ಬಂದಿದ್ದೇನೆ. ನಾನು ಯಾವ ಮೀಸಲಾತಿಯನ್ನು ಬಳಸಿಕೊಳ್ಳುತ್ತಿಲ್ಲ ಎಂದರು.