ಮೈಸೂರು: ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿನಿಯರಿಗೆ ಲೈಂಕಿಗ ಕಿರುಕುಳ ಆರೋಪದಲ್ಲಿ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಎಫ್ಐಆರ್ ದಾಖಲಾಗಿದೆ.
ಈ ನಡುವೆ ಮಠದಲ್ಲಿ ಸಲಹಾ ಸಮಿತಿ ಸಭೆ ನಡೆಸಲಾಗಿದ್ದು, ಈ ವೇಳೆ ತಮ್ಮ ಆಪ್ತರ ಬಳಿ ಮಾತನಾಡಿರುವ ಶರಣರು, “ಬಾಲಕಿಯರು ಹೇಳುತ್ತಿರುವುದು ಸುಳ್ಳು. ಅವ್ರು ಏನಾದ್ರೂ ತಪ್ಪು ಒಪ್ಪಿಕೊಂಡು ಬಂದರೇ ಕ್ಷಮಿಸಿ ಸಂಧಾನ ಮಾಡಿ ಸುಮ್ಮನಾಗೋಣಾ. ಆದ್ರೆ, ಕಾನೂನು ಸಮರಕ್ಕೆ ಮುಂದಾದ್ರೆ ಕಾನೂನು ಮೂಲಕ ಹೋರಾಟ ನಡೆಸೋಣಾ. ಯಾಕಂದ್ರೆ, ನಾವು ಯಾವುದೇ ರೀತಿಯ ತಪ್ಪು ಮಾಡಿಲ್ಲ” ಎಂದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.