ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದ್ದು, ಕೊಲೆ ಪ್ರಕರಣದ ಆರೋಪಿ ರಾಜರಾಜನ್ ಅಲಿಯಾಸ್ ಸೇಠು ಎಂಬಾತನ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.
BIG NEWS: 2025 ರ ವೇಳೆಗೆ ದೇಶಾದ್ಯಂತ 475 ʻವಂದೇ ಭಾರತ್ ರೈಲುʼಗಳು ಪ್ರಯಾಣಿಸಲಿವೆ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್
ಬೆಂಗಳೂರು ಉತ್ತರ ತಾಲೂಕು ಮಾದವಾರದ ನವಿಲೇ ಬಡಾವಣೆಯಲ್ಲಿ ಆರೋಪಿ ಸೇಠು ಸ್ಥಳ ಮಹಜರಿಗೆ ಹೋಗಿದ್ದ ವೇಳೆ ಪೊಲೀಸರ ಮೇಲೆ ಆರೋಪಿ ಲಾಂಗ್ ಬೀಸಿಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ನವೆಂಬರ್ 15ರಂದು ರೌಡಿಶೀಟರ್ ನಟರಾಜ ಅಲಿಯಾಸ್ ಮುಳ್ಳನನ್ನ ರಾಜರಾಜನ್ ಗ್ಯಾಂಗ್ ಕೊಚ್ಚಿ ಕೊಲೆ ಮಾಡಿತ್ತು. ಪ್ರಕರಣ ಸಂಬಂಧ ಆರೋಪಿ ರಾಜರಾಜನ್ನನ್ನು ಮಾದನಾಯಕನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದರು. ಕೃತ್ಯಕ್ಕೆ ಬಳಸಿದ್ದ ಲಾಂಗ್ ವಶಕ್ಕೆ ಪಡೆಯಲು ಆರೋಪಿಯೊಂದಿಗೆ ಪೊಲೀಸರು ತೆರಳಿದ್ದರು. ಈ ಸಂದರ್ಭದಲ್ಲಿ ಪೊಲೀಸರ ಮೇಲೆ ರಾಜರಾಜನ್ ಲಾಂಗ್ ಬೀಸಿದ್ದ. ಈ ಸಂದರ್ಭದಲ್ಲಿ ಮಾದನಾಯಕನಹಳ್ಳಿ ಇನ್ಸ್ಪೆಕ್ಟರ್ ಮಂಜುನಾಥ್ ಗುಂಡಿಟ್ಟು ಬಂಧಿಸಿದ್ದಾರೆ.