ಚಿತ್ರದುರ್ಗ : ಪೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮುರುಘಾಮಠದ ಶ್ರೀಗಳ ಜಾಮೀನು ಅರ್ಜಿ ವಿಚಾರಣೆ ಇಂದು ಚಿತ್ರದುರ್ಗದ 2 ನೇ ಹೆಚ್ಚುವರಿ ಕೋರ್ಟ್ ನಲ್ಲಿ ನಡೆಯಲಿದೆ.
ಚಿತ್ರದುರ್ಗದ 2 ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ನಲ್ಲಿ ಇಂದು ಮುರುಘಾಶ್ರೀಗಳ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಶ್ರೀಗಳಿಗೆ ಮತ್ತೆ ಜೈಲಾ? ಬೇಲಾ ಎಂದು ನಿರ್ಧಾರವಾಗಲಿದೆ. ಪೋಕ್ಸೋ ಪ್ರಕರಣದಲ್ಲಿ ಮುರುಘಾಮಠದ ಶ್ರೀಗಳನ್ನು ನ್ಯಾಯಾಲಯ ಈಗಾಗಲೇ ಸೆಪ್ಟೆಂಬರ್ 14 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದ್ದು, ಜಾಮೀನಿಗಾಗಿ ಮಠದ ಪರ ವಕೀಲರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಇಂದು ಕೋರ್ಟ್ ಶ್ರೀಗಳ ಜಾಮೀನು ಅರ್ಜಿ ವಿಚರಣೆ ನಡೆಯಲಿದೆ.
BIGG NEWS : KPTCL ಪರೀಕ್ಷೆ ಅಕ್ರಮ : ಸರ್ಕಾರಿ ಕಾಲೇಜಿನ ಅತಿಥಿ ಉಪನ್ಯಾಸಕ ಅರೆಸ್ಟ್
ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಪೊಲೀಸರು ಡಾ.ಶಿವಮೂರ್ತಿ ಮುರುಘಾ ಶರಣರನ್ನು ಬಂಧಿಸಿದ್ದು, ಸದ್ಯ ಸೆ.14 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ನೀಡಿತ್ತು.
BIG NEWS: ಜ್ಞಾನವಾಪಿ ಮಸೀದಿ ಪ್ರಕರಣ: ಇಂದು ಭವಿಷ್ಯ ನಿರ್ಧಾರ? | Gyanvapi Mosque Case