ಬೆಂಗಳೂರು : ಸರ್ಕಾರದ ವಿರುದ್ಧ 40% ಆರೋಪ ಅಣಕಿಸಿ PAY CM ಎಂಬ ಬೆಂಗಳೂರಿನಲ್ಲಿ ಅಂಟಿಸಿರುವ ಪೋಸ್ಟರ್ ವಿರುದ್ಧ ಸಿಎಂ ಆಕ್ರೋಶ ಬೆನ್ನಲ್ಲೇ PAY CM ಪೋಸ್ಟರ್ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
Watch video : ಅವಸರವೇ ಅಪಘಾತಕ್ಕೆ ಕಾರಣ, ರಸ್ತೆ ದಾಟುವಾಗ ಯುವತಿಗೆ ಗುದ್ದಿದ ಕಾರು, ಭೀಕರ ದೃಶ್ಯ ಸೆರೆ
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಪೇ ಸಿಎಂ ಪೋಸ್ಟರ್ ಅಭಿಯಾನ ವೈಯಕ್ತಿಕವಾಗಿ ಮಾಡಿಲ್ಲ. ಸಾರ್ವಜನಿಕವಾಗಿ ಏನು ಚರ್ಚೆ ನಡೆಯುತ್ತಿದ್ದೆಯೋ ಅದನ್ನು ಮಾಡಿದ್ದೇವೆ. ಬಿಜೆಪಿ ಅವರು ಚರ್ಚೆ ಮಾಡಲು ಹೆದರುತ್ತಿದ್ದಾರೆ. ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ಭ್ರಷ್ಟಾಚಾರದ ಆರೋಪ ಮಾಡಿದ್ದು, ಇದಕ್ಕೆ ಬಿಜೆಪಿಯವರು ಉತ್ತರಿಸಬೇಕು ಎಂದು ಹೇಳಿದ್ದಾರೆ.
ಸರ್ಕಾರದ ವಿರುದ್ಧ 40% ಆರೋಪ ಅಣಕಿಸಿ PAY CMಪೋಸ್ಟರ್ ಗಳನ್ನು ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸ ಮುಂದೆ ಹಾಗೂ ರಸ್ತೆಗಳಲ್ಲಿ ಪೋಸ್ಟರ್ ಹಾಕಲಾಗಿತ್ತು. ಸಿಎಂ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಇದೀಗ ಬಿಬಿಎಂಪಿ ಸಿಬ್ಬಂದಿ, ಪೊಲೀಸರಿಂದ ತೆರವು ಮಾಡಲಾಗಿದೆ.