ಮೈಸೂರು : ಮಗನ ಸಾವಿನ ನೋವಿನಲ್ಲೂ ಪಿರಿಯಾಪಟ್ಟಣದ ಕುಟುಂಬವೊಂದು ಸಾರ್ಥಕತೆ ಮೆರೆದಿದ್ದಾರೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಯುವಕ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು,ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆ ಆತನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕುಟುಂಬಸ್ಥರು ಮಾನವೀಯತೆ ಮರೆದಿದ್ದಾರೆ.
ಹುಣಸೂರು ತಾಲ್ಲೂಕು ಬಿಳಿಕೆರೆ ಬಳಿ ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಕಾರು ಚಾಲಕನಾಗಿದ್ದ ಪಿರಿಯಾಪಟ್ಟಣ ನಿವಾಸಿ ಲೋಹಿತ್ ಅವರ ತಲೆಗೆ ಗಂಭೀರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆ ಅಂಗಾಂಗಗಳನ್ನು ದಾನ ಮಾಡಲಾಗಿದೆ.
ಲೋಹಿತ್ ಅವರ ಹೃದಯ, ಲಿವರ್ ಯಕೃತ್ ಮೇಜೋಜೀರಕ ಗ್ರಂಥಿ, ಕಿಡ್ನಿ ಸೇರಿ ಹಲವು ಅಂಗಗಳನ್ನು ದಾನ ಮಾಡಲಾಗಿದೆ. ಈ ಪೈಕಿ ಹೃದಯವನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ರವಾನಿಸಿ ಅಗತ್ಯ ರೋಗಿಗೆ ಅಳವಡಿಸಲಾಗಿದ್ದು, ಕಿಡ್ನಿಗಳನ್ನು ಮೈಸೂರಿನ ಅಪೋಲೋ ಆಸ್ಪತ್ರೆಯ ರೋಗಿಗಳಿಗೆ ಅಳವಡಿಸಲಾಗಿದೆ. ಈ ಮೂಲಕ ಲೋಹಿತ್ ಅಂಗಾಂಗಗಳಿಂದಾಗಿ 8 ಮಂದಿಯ ಬಾಳಿಗೆ ಬೆಳಕಾಗಿದ್ದಾರೆ.
BIGG NEWS : ಅ.23ರಿಂದ ಕಿತ್ತೂರು ಉತ್ಸವ : ಇಂದು `ವೀರಜ್ಯೋತಿಯಾತ್ರೆ’ಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ