- ಅವಿನಾಶ್ ಆರ್ ಭೀಮಸಂದ್ರ ಜೊತೆಗೆ ವಸಂತ್ ಬಿ ಈಶ್ವರಗೆರೆ
ಬೆಂಗಳೂರು: ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಆದೇಶವಾಗಿರುವ ಹಿನ್ನೆಲೆಯಲ್ಲಿ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಮತ್ತು ಇತರೆ ಸಮುದಾಯಗಳಿಗೆ ಜಾತಿ ಪುಮಾಣ ಪತ್ರಗಳನ್ನು ನೀಡುವ ಬಗ್ಗೆ ಅಧಿಕೃತ ಆದೇಶವನ್ನು ಹೊರಡಿಸಿದೆ.
ಆದೇಶದಲ್ಲಿ ಈ ಕೆಳಕಂಡತೆ ಉಲ್ಲೇಖ ಮಾಡಲಾಗಿದೆ. ಉಲ್ಲೇಖ (1)ರ ಸರ್ಕಾರದ ಆದೇಶದಲ್ಲಿ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ 101 ಜಾತಿಗಳನ್ನು ಒಳ ಮೀಸಲಾತಿಗಾಗಿ ಸಂವಿಧಾನದ ಅನುಚ್ಛೇಧ 15 ಮತ್ತು ಅನುಚ್ಛೇಧ 16 ರನ್ವಯ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ಪವರ್ಗ- ಎ ರಲ್ಲಿ 16 ಜಾತಿಗಳು ಪವರ್ಗ-ಬಿ ರಲ್ಲಿ 19 ಜಾತಿಗಳು ಮತ್ತು ಪ್ರವರ್ಗ-ಸಿ ರಲ್ಲಿ 63 ಜಾತಿಗಳನ್ನು ಸೇರಿಸಿ, ಮೂರು ಪವರ್ಗಗಳಾಗಿ ವರ್ಗೀಕರಿಸಿ, ಆದೇಶ ಹೊರಡಿಸಲಾಗಿದೆ. ಮುಂದುವರೆದು, ಆದಿ, ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಸಮುದಾಯಗಳನ್ನು ಪವರ್ಗ- ಎ ಮತ್ತು ಪವರ್ಗ ಬಿ ನಲ್ಲಿ ಮೀಸಲಾತಿ ಸೌಲಭ್ಯವನ್ನು ಪಡೆಯಬಹುದೆಂದು ಆದೇಶಿಸಲಾಗಿದೆ.
–
ಮೇಲ್ಕಂಡ ಆದೇಶವನ್ನು ಅನುಷ್ಟಾನಗೊಳಿಸಲು ಕೆಲವೊಂದು ಸೃಷ್ಟಿಕರಣ ನೀಡುವುದು ಅಗತ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಜಾತಿ ಪ್ರಮಾಣ ಪತ್ರ ಪಡೆಯುವ ಬಗ್ಗೆ ಈ ಕೆಳಕಂಡಂತೆ ವಿವರಿಸಲಾಗಿದೆ.
A) ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಈಗಾಗಲೇ ಪಡೆದಿದ್ದಲ್ಲಿ ಅನುಸರಿಸಬೇಕಾದ ವಿಧಾನ: 1) ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಸಮುದಾಯಗಳನ್ನು ಹೊರತುಪಡಿಸಿ ಉಳಿದ 98 ಜಾತಿಗಳನ್ನು ಪವರ್ಗ- ಎ, ಪುವರ್ಗ-ಬಿ ಮತ್ತು ಪವರ್ಗ -ಸಿ ಗಳಲ್ಲಿ ವರ್ಗೀಕರಿಸಲಾಗಿದೆ. ಆದರೆ, ಸದರಿ 98 ಸಮುದಾಯದವರು ಈಗಾಗಲೇ ಜಾತಿ ಪ್ರಮಾಣ ಪತ್ರಗಳನ್ನು ಪಡೆದಿರುತ್ತಾರೆ. ಈ 98 ಜಾತಿಗಳು ತಮ್ಮ ಜಾತಿಯನ್ನು ಸ್ಪಷ್ಟವಾಗಿ ತಿಳಿಸಿ, ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿರುವುದರಿಂದ ಅದೇ ಜಾತಿ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಪುವರ್ಗದೊಂದಿಗೆ ಮೀಸಲಾತಿ ಸೌಲಭ್ಯ ಪಡೆಯಲು ಉಪಯೋಗಿಸಬಹುದಾಗಿದೆ. ಆದ್ದರಿಂದ ಸಂಬಂಧಪಟ್ಟ ಪ್ರಾಧಿಕಾರಿಗಳು ಈ ಜಾತಿ ಪುಮಾಣ ಪತ್ರಗಳಿಗೆ ಉಲ್ಲೇಖ(1) ರ ಆದೇಶದಲ್ಲಿ ವರ್ಗೀಕರಿಸಿರುವಂತೆ ಆಯಾ ಜಾತಿಗಳಿಗೆ ಸಂಬಂಧಿಸಿದ ಪವರ್ಗವನ್ನು ಅಟಲ್ ಜೀ ಜನಸ್ನೇಹಿ ಕೇಂದ್ರದ ತಂತ್ರಾಂಶದಲ್ಲಿ 2ಅಳವಡಿಸಿಕೊಂಡು ಜಾತಿ ಪುಮಾಣ ಪತ್ರದಲ್ಲಿ ನಮೂದಿಸುವ ಬಗ್ಗೆ ಅಗತ್ಯ ಕ್ರಮವಹಿಸುವುದು.
ಉದಾಹರಣೆ i) : ಅಭ್ಯರ್ಥಿಯು ಕೊರಚ (Koracha) ಎಂದು ಜಾತಿ ಪ್ರಮಾಣ ಪತ್ರ ಈಗಾಗಲೇ ಪಡೆದಿದ್ದು.ಅಟಲ್ ಜೀ ಜನಸ್ನೇಹಿ ಕೇಂದ್ರದವರು ಉಲ್ಲೇಖ(1)ರಲ್ಲಿನ ಆದೇಶದಂತೆ ಕೊರಚ ಸಮುದಾಯವನ್ನು ಪ್ರವರ್ಗ-ಸಿ ಯಲ್ಲಿ ವರ್ಗೀಕರಿಸಿರುವುದರಿಂದ ಜಾತಿ ಪ್ರಮಾಣ ಪತ್ರವನ್ನು ಕೊರಚ (ಪವರ್ಗ-ಸಿ) ಎಂದು ನೀಡಲು ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು.
ಉದಾಹರಣೆ ii) : ಅಭ್ಯರ್ಥಿಯು ಪರೆಯನ್, ಪರೆಯ ಎಂದು ಜಾತಿ ಪ್ರಮಾಣ ಪತ್ರ ಈಗಾಗಲೇ ಪಡೆದಿದ್ದು.ಅಟಲ್ ಜೀ ಜನಸ್ನೇಹಿ ಕೇಂದ್ರದವರು ಉಲ್ಲೇಖ(1)ರಲ್ಲಿನ ಆದೇಶದಂತೆ ಪರೆಯನ್, ಪರೆಯ ಸಮುದಾಯವನ್ನು ಪ್ರವರ್ಗ-ಬಿ ಯಲ್ಲಿ ವರ್ಗೀಕರಿಸಿರುವುದರಿಂದ ಜಾತಿ ಪ್ರಮಾಣ ಪತ್ರವನ್ನು ಪರೆಯನ್, ಪರೆಯ (ಪವರ್ಗ-ಸಿ) ಎಂದು ನೀಡಲು ತಂತ್ರಾಂಶದಲ್ಲಿ ಅಳವಡಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು.
2) ಈಗಾಗಲೇ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಎಂದು ಜಾತಿ ಪಮಾಣ ಪತ್ರ ಪಡೆದವರು, ಸಂಬಂಧಿಸಿದ ಪವರ್ಗ ಎ ಅಥವಾ ಪವರ್ಗ-ಬಿ ರಲ್ಲಿ ಮೀಸಲಾತಿ ಸೌಲಭ್ಯ ಪಡೆಯಬೇಕಾದಲ್ಲಿ ತಮ್ಮ ಮೂಲ ಜಾತಿ ಹಾಗೂ ಪವರ್ಗವನ್ನು ಉಲ್ಲೇಖ(1)ರ ಆದೇಶದಂತೆ ಸ್ಪಷ್ಟವಾಗಿ ನಮೂದಿಸಿ, ಅರ್ಜಿ ನಮೂನೆ -1 ರಲ್ಲಿ ಪ್ರಸ್ತುತ ಜಾರಿಯಲ್ಲಿರುವ ಪದ್ಧತಿಯಂತೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು.
3) ಅರ್ಜಿ ಸ್ವೀಕರಿಸಿದ ಪ್ರಾಧಿಕಾರಗಳು ಕರ್ನಾಟಕ ಅನುಸೂಚಿತ ಜಾತಿಗಳು ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ, ಮುಂತಾದುವುಗಳ ಮೀಸಲಾತಿ) ಅಧಿನಿಯಮ 1990 ತಿದ್ದುಪಡಿ ಅಧಿನಿಯಮ 2024 ಮತ್ತು ನಿಯಮಗಳು 1992, ಮತ್ತು ಸರ್ಕಾರದ ಸುತ್ತೋಲೆ ಸಂಖ್ಯೆ: ಸಕಇ 41 W 2022, ದಿನಾಂಕ: 02-07-2022ರನ್ವಯ ಪರಿಶೀಲಿಸಿ, ಅಭ್ಯರ್ಥಿಗಳ ಮೂಲ ಜಾತಿಯ ಬಗ್ಗೆ ಸ್ಥಳೀಯ ವಿಚಾರಣೆ ನಡೆಸಿ, ಮೂಲ ಜಾತಿಯನ್ನು ಖಾತರಿಪಡಿಸಿಕೊಂಡು ಉಲ್ಲೇಖ(1)ರಲ್ಲಿ ವರ್ಗೀಕರಿಸಿರುವಂತೆ ಮೂಲ ಜಾತಿಯೊಂದಿಗೆ ಪವರ್ಗವನ್ನು ನಮೂದಿಸಿ, ಜಾತಿ ಪ್ರಮಾಣ ಪತ್ರವನ್ನು ನೀಡುವುದು.
ಉದಾಹರಣೆ: i) ಅಭ್ಯರ್ಥಿಯು ಆದಿ ಕರ್ನಾಟಕ ಎಂದು ಜಾತಿ ಪ್ರಮಾಣ ಪತ್ರ ಪಡೆದಿದ್ದು ಹಾಗೂ ಮೂಲ ಜಾತಿಯು ಹೊಲೆಯ ಎಂದು ಇದ್ದಲ್ಲಿ ಜಾತಿ ಪ್ರಮಾಣ ಪತ್ರದಲ್ಲಿ ಆದಿ ಕರ್ನಾಟಕ (ಹೊಲೆಯ/ಪವರ್ಗ-ಬಿ) ಎಂದು ನಮೂದಿಸಿ, ಜಾತಿ ಪ್ರಮಾಣ ಪತ್ರ ನೀಡುವುದು.
ii) ಅಭ್ಯರ್ಥಿಯು ಆದಿ ಕರ್ನಾಟಕ ಎಂದು ಜಾತಿ ಪ್ರಮಾಣ ಪತ್ರ ಪಡೆದಿದ್ದು ಹಾಗೂ ಮೂಲ ಜಾತಿಯು ಮಾದಿಗ ಎಂದು ಇದ್ದಲ್ಲಿ ಜಾತಿ ಪ್ರಮಾಣ ಪತ್ರದಲ್ಲಿ ಆದಿ ಕರ್ನಾಟಕ (ಮಾದಿಗ/ಪವರ್ಗ- ಎ) ಎಂದು ನಮೂದಿಸಿ, ಜಾತಿ ಪ್ರಮಾಣ ಪತ್ರ ನೀಡುವುದು.
3ಉದಾಹರಣೆ (1) ಮತ್ತು (2) ರಂತೆ ಆದಿ ದ್ರಾವಿಡ ಮತ್ತು ಅದಿ ಆಂಧ್ರ ಅಭ್ಯರ್ಥಿಗಳು ಇದೇ ರೀತಿ ಜಾತಿ ಪ್ರಮಾಣ ಪತ್ರ ನೀಡಲು ಕ್ರಮವಹಿಸುವುದು.ಸದರಿ ಪ್ರಕ್ರಿಯೆಯು ಆದಿ ದ್ರಾವಿಡ, ಆದಿ ಆಂಧ್ರ ಮತ್ತು ಆದಿ ಕರ್ನಾಟಕ ಎಂದು ಜಾತಿ ಪ್ರಮಾಣ ಪತ್ರ ಪಡೆದವರಿಗೆ ಮಾತ್ರ ಅನ್ವಯಿಸುತ್ತದೆ.
4) ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ್ಕೆ ಸೇರಿದ ಇತರೆ (ಮೂಲ ಜಾತಿಯನ್ನು ತಿಳಿಸದೇ ಇರುವ) ಅಭ್ಯರ್ಥಿಗಳು, ಉಲ್ಲೇಖ(1)ರ ಆದೇಶದಂತೆ, ಪವರ್ಗ- ಎ ಅಥವಾ ಪ್ರವರ್ಗ- ಬಿ ಯನ್ನು ಆಯ್ಕೆ ಮಾಡಿಕೊಂಡು ಸ್ಪಷ್ಟವಾಗಿ ನಮೂದಿಸಿ, ಮುಚ್ಚಳಿಕೆ ಪತ್ರ (Affidavit) ದೊಂದಿಗೆ ಅರ್ಜಿ ಸಲ್ಲಿಸುವುದು.
5) ಅರ್ಜಿ ಸ್ವೀಕರಿಸಿದ ಪ್ರಾಧಿಕಾರಗಳು ಕರ್ನಾಟಕ ಅನುಸೂಚಿತ ಜಾತಿಗಳು ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ, ಮುಂತಾದುವುಗಳ ಮೀಸಲಾತಿ) ಅಧಿನಿಯಮ 1990 ತಿದ್ದುಪಡಿ ಅಧಿನಿಯಮ 2024 ಮತ್ತು ನಿಯಮಗಳು 1992, ಮತ್ತು ಸರ್ಕಾರದ ಸುತ್ತೋಲೆ ಸಂಖ್ಯೆ: ಸಕಇ 41 ಎಸ್‌ಡಿ 2022, ದಿನಾಂಕ: 02-07- 2022ರನ್ವಯ ಪರಿಶೀಲಿಸಿ, ಅಭ್ಯರ್ಥಿಗಳೂ ಪರಿಶಿಷ್ಟ ಜಾತಿಗೆ ಸೇರಿರುವ ಬಗ್ಗೆ ಖಾತರಿಪಡಿಸಿಕೊಂಡು ಮೇಲ್ಕಂಡ ಕ್ರಮಸಂಖ್ಯೆ (4)ರಂತೆ ನೀಡಿರುವ ಮುಚ್ಚಳಿಕೆ ಪತ್ರ (Affidavit)ನಲ್ಲಿ ಘೋಷಿಸಿರುವ ಪವರ್ಗವನ್ನು ನಮೂದಿಸಿ ಪರಿಶಿಷ್ಟ ಜಾತಿ ಪುಮಾಣ ಪತ್ರವನ್ನು ನೀಡುವುದು.
ಉದಾಹರಣೆ: 1) ಅಭ್ಯರ್ಥಿಯು ಆದಿ ಕರ್ನಾಟಕ ಎಂದು ಜಾತಿ ಪ್ರಮಾಣ ಪತ್ರ ಪಡೆದಿದ್ದು ಅರ್ಜಿಯಲ್ಲಿ ಮೂಲ ಜಾತಿಯನ್ನು ತಿಳಿಸದೇ ಇದ್ದಲ್ಲಿ ಜಾತಿ ಪಮಾಣ ಪತ್ರದಲ್ಲಿ ಆದಿ ಕರ್ನಾಟಕ (ಪವರ್ಗ-ಎ ಆಥವಾ ಪವರ್ಗ-ಬಿ)-[ಅಭ್ಯರ್ಥಿಯು Affidavit ನಲ್ಲಿ ಘೋಷಿಸಿರುವಂತೆ] ನಮೂದಿಸಿ, ಜಾತಿ ಪ್ರಮಾಣ ಪತ್ರ ನೀಡುವುದು.
ಆದಿ ದ್ರಾವಿಡ ಮತ್ತು ಅದಿ ಆಂಧ್ರ ಅಭ್ಯರ್ಥಿಗಳು ಇದೇ ರೀತಿ ಜಾತಿ ಪ್ರಮಾಣ ಪತ್ರ ನೀಡಲು ಕ್ರಮವಹಿಸುವುದು. ಸದರಿ ಪ್ರಕ್ರಿಯೆಯು ಆದಿ ದ್ರಾವಿಡ, ಆದಿ ಆಂಧ್ರ ಮತ್ತು ಆದಿ ಕರ್ನಾಟಕ ಎಂದು ಜಾತಿ ಪುಮಾಣ ಪತ್ರ ಪಡೆದು ಮೂಲಜಾತಿಯನ್ನು ಅರ್ಜಿಯಲ್ಲಿ ತಿಳಿಸದೇ ಇರುವ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ.
6) ಅಭ್ಯರ್ಥಿಗಳು ಮೇಲಿನ ಕ್ರಮಸಂಖ್ಯೆ (4) ರಂತೆ ಆಯ್ಕೆ ಮಾಡಿಕೊಂಡು ಯಾವ ಪುವರ್ಗದಲ್ಲಿ ಜಾತಿ ಪ್ರಮಾಣ ಪತ್ರ ಪಡೆದಿರುತ್ತಾರೆಯೋ ಅದೇ ಪವರ್ಗ ಅವರ ಕುಟುಂಬಕ್ಕೆ ಶಾಶ್ವತವಾಗಿ ಮುಂದುವರೆಯುತ್ತದೆ. ಯಾವುದೇ ಕಾರಣಕ್ಕೂ ಬದಲಾವಣೆಗೆ ಅವಕಾಶವಿರುವುದಿಲ್ಲ. B) ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯದೇ ಇದ್ದಲ್ಲಿ ಹೊಸದಾಗಿ ಪಡೆಯಲು ಅನುಸರಿಸಬೇಕಾದ ವಿಧಾನ:
1) ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಜಾತಿಗಳನ್ನು ಹೊರತುಪಡಿಸಿ, ಉಳಿದ 98 ಜಾತಿಗಳನ್ನು ನಮೂದಿಸಿ, ಅರ್ಜಿ ಸಲ್ಲಿಸಿದ್ದಲ್ಲಿ ಅಂತಹ ಅರ್ಜಿಗಳನ್ನು ಅರ್ಜಿ ಸ್ವೀಕರಿಸಿದ ಪ್ರಾಧಿಕಾರಗಳು ಕರ್ನಾಟಕ ಅನುಸೂಚಿತ ಜಾತಿಗಳು ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ, ಮುಂತಾದುವುಗಳ ಮೀಸಲಾತಿ) ಅಧಿನಿಯಮ 41990 ತಿದ್ದುಪಡಿ ಅಧಿನಿಯಮ 2024 ಮತ್ತು ನಿಯಮಗಳು 1992, ಮತ್ತು ಸರ್ಕಾರದ ಸುತ್ತೋಲೆ ಸಂಖ್ಯೆ: ಸಕಇ 41 ಎಸ್‌ಡಿ 2022, ದಿನಾಂಕ: 02-07-2022ರನ್ವಯ ಪರಿಶೀಲಿಸಿ, ಸಂಬಂಧಪಟ್ಟ ಪ್ರಾಧಿಕಾರಗಳು, ಅಭ್ಯರ್ಥಿಗಳ ಜಾತಿಯ ಬಗ್ಗೆ ಸ್ಥಳೀಯ ವಿಚಾರಣೆ ನಡೆಸಿ, ಜಾತಿಯನ್ನು ಖಾತರಿಪಡಿಸಿಕೊಂಡು ತಮ್ಮ ತಂದೆ-ತಾಯಿ/ಪಾಲಕರು ಜಾತಿ ಪ್ರಮಾಣ ಪತ್ರದಲ್ಲಿ ಅದೇ 98 ಜಾತಿಗಳಲ್ಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿದ್ದಲ್ಲಿ ಉಲ್ಲೇಖ(1)ರಲ್ಲಿ ವರ್ಗೀಕರಿಸಿರುವಂತೆ ಜಾತಿಯೊಂದಿಗೆ ಪವರ್ಗವನ್ನು ನಮೂದಿಸಿ, ಜಾತಿ ಪಮಾಣ ಪತ್ರವನ್ನು ನೀಡುವುದು.
ಉದಾಹರಣೆ: ಅಭ್ಯರ್ಥಿಯು ಮಾದಿಗ ಜಾತಿಗೆ ಸೇರಿರುವ ಬಗ್ಗೆ ಅರ್ಜಿ ಸಲ್ಲಿಸಿದಲ್ಲಿ ಸಕ್ಷಮ ಪ್ರಾಧಿಕಾರವು ಮೇಲಿನ ಕಾಯ್ದೆಯಂತೆ ಪರಿಶೀಲಿಸಿ, ಜಾತಿ ಪ್ರಮಾಣ ಪತ್ರದಲ್ಲಿ ಮಾದಿಗ (ಪವರ್ಗ- ಎ) ಎಂದು ಜಾತಿ ಪ್ರಮಾಣ ಪತ್ರ ನೀಡುವುದು.
2) ಅಭ್ಯರ್ಥಿಯ ತಮ್ಮ ಮೂಲ ಜಾತಿಯನ್ನು ಘೋಷಿಸಿ ಅರ್ಜಿ ಸಲ್ಲಿಸಿರುತ್ತಾರೆ. ಆದರೆ, ಅಭ್ಯರ್ಥಿಯ ತಂದೆ-ತಾಯಿ/ಪಾಲಕರ ದಾಖಲೆಗಳಲ್ಲಿ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಜಾತಿಯೆಂದು ನಮೂದಾಗಿರುವಂತಹ ಪುಕರಣಗಳಲ್ಲಿ ಸಕ್ಷಮ ಪ್ರಾಧಿಕಾರವು ಕರ್ನಾಟಕ ಅನುಸೂಚಿತ ಜಾತಿಗಳು ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ, ಮುಂತಾದುವುಗಳ ಮೀಸಲಾತಿ) ಅಧಿನಿಯಮ 1990 ತಿದ್ದುಪಡಿ ಅಧಿನಿಯಮ 2024 ಮತ್ತು ನಿಯಮಗಳು 1992, ಮತ್ತು ಸರ್ಕಾರದ ಸುತ್ತೋಲೆ ಸಂಖ್ಯೆ: ಸಕಇ 41 ಎಸ್‌ಡಿ 2022, ದಿನಾಂಕ: 02-07-2022ರನ್ವಯ ಪರಿಶೀಲಿಸಿ, ಸಂಬಂಧಪಟ್ಟ ಪ್ರಾಧಿಕಾರಗಳು, ಅಭ್ಯರ್ಥಿಗಳ ಜಾತಿಯ ಬಗ್ಗೆ ಸ್ಥಳೀಯ ವಿಚಾರಣೆ ನಡೆಸಿ, ಜಾತಿಯನ್ನು ಖಾತರಿಪಡಿಸಿಕೊಂಡು ಉಲ್ಲೇಖ(1)ರಲ್ಲಿ ವರ್ಗೀಕರಿಸಿರುವಂತೆ ಜಾತಿಯೊಂದಿಗೆ ಪವರ್ಗವನ್ನು ನಮೂದಿಸಿ, ಜಾತಿ ಪ್ರಮಾಣ ಪತ್ರವನ್ನು ನೀಡುವುದು.
ಉದಾಹರಣೆ: ಅಭ್ಯರ್ಥಿಯ ತಂದೆ-ತಾಯಿ/ಪಾಲಕರ ದಾಖಲೆಗಳಲ್ಲಿ ಆದಿ ಕರ್ನಾಟಕ ಎಂದು ಜಾತಿ ಪಮಾಣ ಪತ್ರ ಪಡೆದಿದ್ದು, ಅರ್ಜಿದಾರರು ತಮ್ಮ ಮೂಲ ಜಾತಿಯು ಹೊಲೆಯ ಎಂದು ಅರ್ಜಿ ಸಲ್ಲಿಸಿದ್ದಲ್ಲಿ ಜಾತಿ ಪ್ರಮಾಣ ಪತ್ರದಲ್ಲಿ ఆది ಕರ್ನಾಟಕ (ಹೊಲೆಯ/ಪುವರ್ಗ-ಬಿ) ಎಂದು ನಮೂದಿಸಿ, ಜಾತಿ ಪ್ರಮಾಣ ಪತ್ರ ನೀಡುವುದು.
3) ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ್ಕೆ ಸೇರಿದ ಇತರೆ ಅಭ್ಯರ್ಥಿಗಳು (ಮೂಲ ಜಾತಿಯನ್ನು ತಿಳಿಸದೇ ಇರುವು ಉಲ್ಲೇಖ(1)ರ ಆದೇಶದಂತೆ, ಪವರ್ಗ- ಎ ಅಥವಾ ಪುವರ್ಗ- ಬಿ ಯನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಪವರ್ಗವನ್ನು ಸ್ಪಷ್ಟವಾಗಿ ನಮೂದಿಸಿ, ಮುಚ್ಚಳಿಕೆ ಪತ್ರ (Affidavit) ದೊಂದಿಗೆ ಹೊಸದಾಗಿ ಅರ್ಜಿಯನ್ನು ಸಲ್ಲಿಸಿದಲ್ಲಿ ಸಕ್ಷಮ ಪ್ರಾಧಿಕಾರವು ಅರ್ಜಿಯನ್ನು ಪರಿಶೀಲಿಸಿ, ತಮ್ಮ ತಂದೆ-ತಾಯಿ/ಪಾಲಕರ ದಾಖಲೆಗಳಲ್ಲಿ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಎಂದು ಜಾತಿ ಪ್ರಮಾಣ ಪತ್ರ ಪಡೆದಿದ್ದಲ್ಲಿ ಮೇಲ್ಕಂಡ ಕ್ರಮಸಂಖ್ಯೆ (A-5) ರಂತೆ ಹೊಸ ಜಾತಿ ಅರ್ಜಿಗಳನ್ನು ಪರಿಶೀಲಿಸಿ, ಕ್ರಮವಹಿಸುವುದು.
ಪುಮಾಣ ಪತ್ರ ನೀಡುವ ಬಗ್ಗೆ
ಉದಾಹರಣೆ: ಅಭ್ಯರ್ಥಿಯು ಆದಿ ಕರ್ನಾಟಕ ಎಂದು ಜಾತಿ ಪಮಾಣ ಪತ್ರ ಪಡೆಯಲು ಹೊಸದಾಗಿ ಅರ್ಜಿ ಸಲ್ಲಿಸಿ, ಮೂಲ ಜಾತಿಯನ್ನು ತಿಳಿಸದೇ ಇದ್ದಲ್ಲಿ ಹಾಗೂ ತಮ್ಮ ತಂದೆ- ತಾಯಿ/ಪಾಲಕರ ದಾಖಲೆಗಳಲ್ಲಿ ಆದಿ ಕರ್ನಾಟಕ ಜಾತಿ ಪ್ರಮಾಣ ಪತ್ರ ಪಡೆದಿದ್ದು, ಜಾತಿ ಪುಮಾಣ ಪತ್ರದಲ್ಲಿ ಆದಿ ಕರ್ನಾಟಕ (ಪವರ್ಗ-ಎ ಆಥವಾ ಪವರ್ಗ-ಬಿ)-[ಅಭ್ಯರ್ಥಿಯು Affidavit ನಲ್ಲಿ ಘೋಷಿಸಿರುವಂತೆ] ನಮೂದಿಸಿ, ಜಾತಿ ಪುಮಾಣ ಪತ್ರವನ್ನು ನೀಡುವುದು. ಅಭ್ಯರ್ಥಿಗಳು ಮೇಲ್ಕಂಡ ಕ್ರಮಸಂಖ್ಯೆ (3) ರಂತೆ ಆಯ್ಕೆ ಮಾಡಿಕೊಂಡು ಯಾವ ಪ್ರವರ್ಗದಲ್ಲಿ ಜಾತಿ ಪ್ರಮಾಣ ಪತ್ರ ಪಡೆದಿರುತ್ತಾರೆಯೋ ಅದೇ ಪವರ್ಗ ಅವರ ಕುಟುಂಬಕ್ಕೆ ಶಾಶ್ವತವಾಗಿ ಮುಂದುವರೆಯುತ್ತದೆ. ಯಾವುದೇ ಕಾರಣಕ್ಕೂ ಬದಲಾವಣೆಗೆ ಅವಕಾಶವಿರುವುದಿಲ್ಲ.
ಆದಿ ದ್ರಾವಿಡ, ಆದಿ ಆಂಧ್ರ ಮತ್ತು ಆದಿ ಕರ್ನಾಟಕ ಈ ಮೂರು ಜಾತಿಗಳಿಗೆ ಮೂಲ ಜಾತಿಯನ್ನು ಸಂಬಂಧಪಟ್ಟ, ಪವರ್ಗಗಳೊಂದಿಗೆ ಜಾತಿ ಪಮಾಣ ಪತ್ರದಲ್ಲಿ ನಮೂದಿಸುವುದು. ಆದರೆ, ಭಾರತ ಸರ್ಕಾರವು ಅಧಿಸೂಚಿಸಿರುವ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಇಲ್ಲದೇ ಇರುವ ಯಾವುದೇ ಜಾತಿಗಳನ್ನು ಮೂಲ ಜಾತಿಯೆಂದು ನಮೂದಿಸತಕ್ಕದ್ದಲ್ಲ.