ಬೆಂಗಳೂರು : ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಹೊಸ ನಿಯಮವನ್ನು ಜಾರಿಗೆ ತರಲಾಗಿದ್ದು, ಇನ್ಮುಂದೆ ಕಬ್ಬನ್ ಪಾರ್ಕ್ ನಲ್ಲಿ ಹಾರ್ನ್ ಮಾಡಿದ್ರೆ ಪೊಲೀಸರು 500 ರೂ ದಂಡ ( Fine) ವಿಧಿಸಲಿದ್ದಾರೆ.
BIGG NEWS : ಹೆಬ್ರಿ ಶಾಲೆ ಆವರಣದಲ್ಲಿ ಅಗ್ನಿ ಅವಘಡ : ನಾಲ್ವರು ವಿದ್ಯಾರ್ಥಿಗಳಿಗೆ ತೀವ್ರ ಗಾಯ
ಹೌದು, ಇಂತಹದ್ದೊಂದು ಆದೇಶ ತೋಟಗಾರಿಕೆ ಇಲಾಖೆ ಹೊರಡಿಸಿದ್ದು, ಕಬ್ಬನ್ ಪಾರ್ಕ್ ಒಳಪ್ರದೇಶದಲ್ಲಿ ಹಾರ್ನ್ ( ಶಬ್ದ) ಮಾಡುವುದರಿಂದ ಸಾರ್ವಜನಿಕರು ಹಾಗೂ ಪಕ್ಷಿಗಳಿಗೆ ಕಿರಿಕಿರಿಯಾಗುತ್ತಿದೆ ಎಂಬ ದೂರು ಕೇಳಿ ಬಂದಿತ್ತು, ಈ ಹಿನ್ನೆಲೆ ತೋಟಗಾರಿಗೆ ಇಲಾಖೆ ನಗರ ಸಂಚಾರಿ ಪೊಲೀಸರ ಜೊತೆ ಸಭೆ ನಡೆಸಿ ನಗರದ ಕಬ್ಬನ್ ಪಾರ್ಕ್ ನ್ನು ನಿಶಬ್ದ ವಲಯ ಎಂದು ಘೋಷಿಸಿದೆ.
ಇಲ್ಲಿ ಉದ್ಯಾನವನ ಬಹಳ ಶಾಂತವಾಗಿದ್ದು, ಅದಕ್ಕಾಗಿ ಜನರು ಇಲ್ಲಿಗೆ ಬರುತ್ತಾರೆ, ಅಲ್ಲದೇ ಸಾಕಷ್ಟು ಪಕ್ಷಿಗಳು ಇಲ್ಲಿ ವಾಸವಿದ್ದು, ಅವುಗಳಿಗೆ ಕಿರಿಕಿರಿ ಉಂಟಾಗಬಾರದು ಎನ್ನುವ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆ.
BIG NEWS : ʻಕರೆನ್ಸಿ ಮಾನಿಟರಿಂಗ್ ಪಟ್ಟಿʼಯಿಂದ ʻಭಾರತʼವನ್ನು ತೆಗೆದುಹಾಕಿದ ಅಮೆರಿಕ | Currency Monitoring