ಹಾವೇರಿ : ಉತ್ತರ ಕರ್ನಾಟಕ ಭಾಗದಲ್ಲಿ ನ್ಯಾಷನಲ್ ಲಾ ಕಾಲೇಜ್ ಆರಂಭಿಸಲು ಚಿಂತನೆ ಇದೆ. ಈ ಕುರಿತಂತೆ ಬೇಡಿಕೆ ಇದೆ, ತಜ್ಞರೊಂದಿಗೆ ಚರ್ಚಿಸಿ ರಾಷ್ಟ್ರೀಯ ಬಾರ್ ಕೌನ್ಸಿಲ್ಗೆ ಮನವಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
BIGG NEWS : ರಾಜ್ಯ ಸರ್ಕಾರದಿಂದ `ಅನರ್ಹ ಪಡಿತರ ಚೀಟಿ’ದಾರರಿಗೆ ಬಿಗ್ ಶಾಕ್!
ಹಾವೇರಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಭಾನುವಾರ ವಕೀಲರ ಸಂಘದ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ನ್ಯಾಯಾಂಗ ಕ್ಷೇತ್ರದಲ್ಲಿ ಯುವ ವಕೀಲರಿಗೆ ವಿಫುಲವಾದ ಅವಕಾಶಗಳಿವೆ. ಕ್ರಿಮಿನಲ್, ಸಿವಿಲ್ ಜೊತೆಗೆ ಇಂದಿನ ದಿನಮಾನದಲ್ಲಿ ಹಲವು ಶಾಖೆಗಳು ವಿಸ್ತಾರಗೊಂಡಿವೆ. ಅಂತರಾಷ್ಟ್ರೀಯ ಲಾ, ಆರ್ಥಿಕ ಲಾ, ವಾಣಿಜ್ಯ ಲಾ, ಕಾರ್ಪೋರೇಟ್ ಲಾ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ವೃತ್ತಿ ಆರಂಭಿಸಲು ಅವಕಾಶಗಳಿವೆ ಎಂದು ಹೇಳಿದರು.
BIGG NEWS : ರಾಜ್ಯ ಸರ್ಕಾರದಿಂದ ಆ್ಯಸಿಡ್ ಸಂತ್ರಸ್ತರಿಗೆ 10 ಸಾವಿರ ರೂ. ಪಿಂಚಣಿ : ಕಂದಾಯ ಸಚಿವ ಆರ್. ಅಶೋಕ್
ದೇಶದಲ್ಲೇ ಕರ್ನಾಟಕದಲ್ಲಿ ನ್ಯಾಯಾಂಗ ವ್ಯವಸ್ಥೆ ಬಲಿಷ್ಠವಾಗಿದೆ, ಅದ್ಭುತವಾಗಿ ಕೆಲಸಮಾಡುತ್ತಿದೆ. ಪ್ರಗತಿಪರ ರಾಜ್ಯದಲ್ಲಿ ನ್ಯಾಯಾಂಗ ವ್ಯವಸ್ಥೆ ಪ್ರಗತಿಪರವಾಗಿದೆ. ವಕೀಲರು ಸಹ ಪ್ರಗತಿಪರವಾಗಿ ಕೆಲಸಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ನ್ಯಾಯಾಂಗ ವ್ಯವಸ್ಥೆ ಬಲಪಡಿಸಲು ಸರ್ಕಾರ ಎಲ್ಲವನ್ನೂ ಒದಗಿಸಿಕೊಡಲಿದೆ. ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲಿದೆ. ಈಗಾಗಲೇ ಹಾವೇರಿಗೆ ಸರ್ಕಾರಿ ಕಾನೂನು ಕಾಲೇಜು ಮಂಜೂರು ಮಾಡಲಾಗಿದೆ. ವಕೀಲರಿಗೆ ನೂತನ ಕಟ್ಟಡ ನಿರ್ಮಾಣಮಾಡಿಕೊಡಲಾಗಿದೆ. ಈ ಕಟ್ಟಡದೊಳಗೆ ಕಂಟೆಂಟ್ ತುಂಬಲು ಎಲ್ಲರೂ ಶ್ರಮಿಸಬೇಕು. ಜೀವಂತಿಕೆ ಕೇಂದ್ರವಾಗಿರಬೇಕು. ಯುವ ವಕೀಲರಿಗೆ ತಮ್ಮ ವೃತ್ತಿ ಸಾಮಥ್ರ್ಯವನ್ನು ಹೆಚ್ಚಳಮಾಡುವ ನಿಟ್ಟಿನಲ್ಲಿ ಉಪಯೋಗವಾಗಬೇಕು. ಈ ನಿಟ್ಟಿನಲ್ಲಿ ಇದಕ್ಕೆ ಅಗತ್ಯವಾದ ಪೀಠೋಪಕರಣ, ಡಿಜಿಟಲ್ ಲೈಬ್ರರಿ ಸೇರಿದಂತೆ ಎಲ್ಲ ಸೌಕರ್ಯಗಳನ್ನು ಸರ್ಕಾರ ಕಲ್ಪಿಸಿಕೊಡಲಿದೆ ಎಂದು ಹೇಳಿದರು.
ನಮ್ಮ ಜಿಲ್ಲೆಯಲ್ಲಿ ಪ್ರತಿಭಾವಂತರಿದ್ದಾರೆ. ಎಲ್.ಜಿ.ಹಾವನೂರ, ಬಿ.ಜಿ.ಬಣಕಾರ, ಮೋಹನ್ ಶಾಂತನಗೌಡ್ರ ವಕೀಲರಾಗಿ ಅತ್ಯುತ್ತಮವಾದ ಕೆಲಸಮಾಡಿದ್ದಾರೆ. ಇಂತವರ ಹಾದಿಯಲ್ಲಿ ನಮ್ಮ ಯುವ ಪ್ರತಿಭೆಗಳು ಬೆಳೆಯಬೇಕು ಎಂದರು.
ಜಿಲ್ಲೆಯ ಅಭಿವೃದ್ಧಿಗೆ ಒಂದು ನಿರ್ಧಿಷ್ಟವಾದ ದೂರದೃಷ್ಟಿ ಇಟ್ಟುಕೊಂಡು ಕೆಲಸಮಾಡಲಾಗುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಬೇಕು. ವಿಫುಲವಾದ ಅವಕಾಶಗಳಿವೆ, ಈ ನಿಟ್ಟಿನಲ್ಲಿ ನೂತನ ಕೈಗಾರಿಕೆ ಸ್ಥಾಪನೆಗೆ ಕ್ರಮವಹಿಸಲಾಗಿದೆ. ಇದರಿಂದ ರೈತರಿಗೆ, ವ್ಯಾಪಾರಸ್ಥರಿಗೆ, ವಕೀಲರಿಗೆ, ಜನಸಾಮಾನ್ಯರ ಆರ್ಥಿಕ ಚಟುವಟಿಕೆಗೆ ಪೂರಕವಾಗಲಿದೆ. ವೈದ್ಯಕೀಯ ಕಾಲೇಜ್ ಸ್ಥಾಪನೆಗೊಳ್ಳುತ್ತಿದೆ, ರೂ.100 ಕೋಟಿ ವೆಚ್ಚದಲ್ಲಿ ಮೆಗಾ ಡೈರಿ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಕೋಟ್: 75ನೇ ಸ್ವಾತಂತ್ರ್ಯ ಅಮೃತಮಹೋತ್ಸವ ಆಚರಿಸಿದ್ದೇವೆ. ಹಾವೇರಿ ಜಿಲ್ಲೆಗೆ 25 ವರ್ಷಗಳು ತುಂಬಿವೆ. ಹಾಗೆಯೇ ಇದೇ ನವಂಬರ್ ಮಾಹೆಯಲ್ಲಿ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲರಿಗೂ ಶುಭ ಹಾರೈಕೆಗಳು ಎಂದರು.