ಮಂಗಳೂರು : ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣವನ್ನು ಇಂದು ರಾಷ್ಟ್ರೀಯ ತನಿಖಾ ದಳ (NIA) ತನಿಖೆ ಆರಂಭಿಸಲಿದ್ದು, ಈಗಾಗಲೇ ಎಫ್ ಐಆರ್ ದಾಖಲಿಸಿದೆ.
BIGG NEWS : ಒಂದೇ ದಿನಗಳೊಳಗೆ ‘ಮಹಿಳಾ ಆಯೋಗ’ದ ದೂರುಗಳ ತನಿಖೆಗೆ ‘ಸಿಎಂ ಬೊಮ್ಮಾಯಿ’ ಸೂಚನೆ
ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಭಯೋತ್ಪಾದನೆ ಸಂಘಟನೆ ಪಾತ್ರ ಕಂಡು ಬಂದಿರುವ ಹಿನ್ನೆಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದೆ. ಪ್ರಕರಣದಲ್ಲಿ ಮಹಮದ್ ಶಾರೀಕ್ ನನ್ನು ಮೊದಲ ಆರೋಪಿಯನ್ನಾಗಿ ಹೆಸರಿಸಲಾಗಿದೆ.
ಐಸಿಸ್ ಪ್ರೇರಿತ ಅಲ್ ಹಿಂದ ಸಂಘಟನೆಯ ಮೊಹಮ್ಮದ್ ಮತೀನ್ ತಾಹಾನ ಸೂಚನೆ ಮತ್ತು ಸಂಪರ್ಕದ ಮೇರೆಗೆ ಶಾರೀಕ್ ಉಗ್ರ ಕೃತ್ಯದಲ್ಲಿ ತೊಡಗಿದ್ದಾನೆ ಎಂದು ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಇಂದಿನಿಂದ ಮಂಗಳೂರಿನಲ್ಲಿ ಎನ್ ಐಎ ತನಿಖೆ ಆರಂಭವಾಗಲಿದೆ.