ಚಿತ್ರದುರ್ಗ: ಚಿತ್ರದುರ್ಗದ ಮುರಘಾಮಠದ ಶ್ರೀಗಳ ವಿರುದ್ಧ ಫೋಕ್ಸೋ ಪ್ರಕರಣದ ಹಿನ್ನೆಲೆಯಲ್ಲಿ ಮಠದ ಶಿವಮೂರ್ತಿ ಶ್ರೀಗಳನ್ನು ಬಂಧಿಸಲಾಗಿದೆ. ಸದ್ಯ ಅವರನನ್ನು ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದ್ದು, ಚಿತ್ರದುರ್ಗದ ಜಿಲ್ಲಾ ಕಾರಾಗೃಹ ಕರೆದೊಯ್ಯಲಾಗಿದೆ. ಹೀಗಾಗಿ ಸ್ವಾಮೀಜಿ ಇಲ್ಲದೆ ಮಠದ ಆವರಣದಲ್ಲಿ ಬಿಕೋ ಎನ್ನುತ್ತಿದೆ.
ಎಸ್ಕಲೇಟರ್ ಮೇಲಿಂದ ಜಾರಿ ಬಿದ್ದ ಸೂಟ್ಕೇಸ್ ಬಡಿದು ಮಹಿಳೆ ಸಾವು… ಇಲ್ಲಿದೆ ಭಯಾನಕ ವಿಡಿಯೋ
ಮುರುಘಾಮಠದ ಡಾ.ಶಿವಮೂರ್ತಿ ಶರಣರ ಬಂಧನದ ಬೆನ್ನಲ್ಲೇ ಇದೀಗ ಮುರುಘಾಮಠಕ್ಕೆ ತಾತ್ಕಾಲಿಕವಾಗಿ ಉಸ್ತುವಾರಿಯನ್ನಾಗಿ ದಾವಣಗೆರೆಯ ಹೆಬ್ಬಾಳು ಶಾಖಾ ಮಠದ ಮಹಾಂತರುದ್ರ ಸ್ವಾಮೀಜಿಗಳನ್ನು ನೇಮಕ ಮಾಡಲಾಗಿದೆ. ದಾವಣಗೆರೆ ಜಿಲ್ಲೆಯ ಹೆಬ್ಬಾಳದಲ್ಲಿರುವ ಮುರುಘಾಮಠದ ಶಾಖಾ ಮಠದ ಹಿರಿಯ ಸ್ವಾಮೀಜಿಗಳಾಗಿರುವ ಮಹಾಂತ ರುದ್ರ ಸ್ವಾಮೀಜಿ ಅವರಿಗೆ ಚಿತ್ರದುರ್ಗ ಮಠದ ಆಗುಹೋಗುಗಳ ಎಲ್ಲಾ ಜವಾಬ್ದಾರಿಗಳನ್ನು ಸದ್ಯಕ್ಕೆ ವಹಿಸಲಾಗಿದೆ.
BIGG NEWS : ರೈತರೇ ಗಮನಿಸಿ : ಸೆ. 7 ರೊಳಗೆ ಪಿ.ಎಂ.ಕಿಸಾನ್ ನೋಂದಾಯಿತ ರೈತರು ಇ-ಕೆವೈಸಿ ಮಾಡಿಸಿ
ಮುರುಘಾಮಠದಲ್ಲಿ ಬ್ಯಾರಿಕೇಡ್ ಹಾಕಿ ಸಾರ್ವಜನಿಕರು ಬರದಂತೆ ಮಠದ ಸುತ್ತಮುತ್ತ ಪೊಲೀಸರು ಬಿಗಿ ಬಂದೊಬಸ್ತ್ ಮಾಡಿದ್ದಾರೆ. ಬ್ಯಾಕ್ ಗೇಟ್, ಫ್ರಂಟ್ ಗೇಟ್ ಕೂಡ ಬಂದ್ ಮಾಡಲಾಗಿದೆ. ಕೇವಲ ಮಠದ ಸಿಬ್ಬಂದಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಸದ್ಯ ಭಕ್ತಾದಿಗಳು ಇಲ್ಲದೇ ಮಠದ ಆವರಣ ಖಾಲಿ ಖಾಲಿಯಾಗಿದೆ.