ಬೆಂಗಳೂರು: ರಾಜ್ಯದಲ್ಲಿ ಮಹಾಮಳೆಗೆ ಜನತೆ ತತ್ತರಿಸಿ ಹೋಗಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಮಳೆಯ ( Rain ) ಅವಾಂತರದಿಂದ ರಸ್ತೆ, ಅಪಾರ್ಮೆಂಟ್, ವಿಲ್ಲಾಗಳು ಜಲಾವೃತಗೊಂಡಿವೆ. ಇದಕ್ಕೆಲ್ಲಾ ಕಾರಣ, ರಾಜ್ಯದಲ್ಲಿ ಕಳೆದ 51 ವರ್ಷಗಳಲ್ಲೇ ಸುರಿದಂತ ದಾಖಲೆಯ ಮಳೆಯಾಗಿದೆ.
BIG NEWS: ಸೆ.19 ಕ್ಕೆ ನಡೆಯುವ ಬ್ರಿಟನ್ ʻರಾಣಿ ಎಲಿಜಬೆತ್ʼ ಅಂತ್ಯಕ್ರಿಯೆಯಲ್ಲಿ ಅಮೆರಿಕ ಅಧ್ಯಕ್ಷ ʻಜೋ ಬೈಡನ್ʼ ಭಾಗಿ
ಹೌದು.. ರಾಜ್ಯದಲ್ಲಿ ಜೂನ್ ನಲ್ಲಿ ಮಳೆಯ ( Karnataka Rain ) ಕೊರತೆ ಎದುರಿಸಿದ್ದಂತ ಸಂದರ್ಭದಲ್ಲಿಯೇ, ಜೂನ್ ಬಳಿಕ ಜುಲೈ ಮತ್ತು ಆಗಸ್ಟ್ ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಅದರಲ್ಲೂ 51 ವರ್ಷಗಳ ಬಳಿಕವೇ ಅತ್ಯಧಿಕ ಮಳೆಯಾಗಿದೆ ಎಂಬುದಾಗಿ ಹವಾಮಾನ ಇಲಾಖೆಯ ದತ್ತಾಂಶದಿಂದ ತಿಳಿದು ಬಂದಿದೆ.
ಅಂದಹಾಗೇ 1971 ರಿಂದ 2021ರ ಜುಲೈವರೆಗೆ ಯಾವತ್ತೂ ಇಷ್ಟು ಮಳೆಯಾಗಿರಲಿಲ್ಲ. ಜೂನ್ ನಲ್ಲಿ ರಾಜ್ಯಾಧ್ಯಂತ ವಾಡಿಕೆಗಿಂದ 199 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದ್ರೇ 156 ಮಿಲಿ ಮೀಟರ್ ಮಳೆಯಾಗಿದೆ. ಈ ಮೂಲಕ ಶೇ.22ರಷ್ಟು ಮಳೆ ಕೊರತೆಯಾಗಿತ್ತು.
ಆದ್ರೇ ಜುಲೈನಲ್ಲಿ ರಾಜ್ಯಾಧ್ಯಂತ ವಾಡಿಕೆಯಂತೆ 271 ಮಿಲಿ ಮೀಟರ್ ಮಳೆಯಾಗೋ ಬದಲಾಗಿ, 383 ಮಿಲಿ ಮೀಟರ್ ಮಳೆಯಾಗಿದೆ. ಇದು ಶೇ.41ರಷ್ಟು ಅಧಿಕ ಮಳೆಯಾಗಿದೆ. ಈ ಮೂಲಕ ಜುಲೈ 2022ರಲ್ಲಿ ರಾಜ್ಯಾಧ್ಯಂತ 51 ವರ್ಷಗಳ ನಂತ್ರ ದಾಖಲೆಯ ಮಳೆಯಾಗಿದೆ.