ಬಳ್ಳಾರಿ : ಇಪಿಎಸ್ ಮತ್ತು ಎಫ್ಪಿಎಸ್ ಪಿಂಚಣಿದಾರರ ಫಿಂಗರ್ ಪ್ರಿಂಟ್ ಮತ್ತು ಐರಿಸ್ ಮೂಲಕ ಡಿಜಿಟಲ್ ಲೈಫ್ ಸರ್ಟಿಫಿಕೇಟ್ಗಳನ್ನು ನವೀಕರಿಸಲು ಬಳ್ಳಾರಿಯ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಇಪಿಎಫ್ಒ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸಲ್ಲಿಕೆಗಾಗಿ ವಿಶೇಷ ಡ್ರೈವನ್ನು ಆಯೋಜಿಸುತ್ತಿದ್ದು, ವಿಶೇಷವಾಗಿ ಅಂಗವಿಕಲರು ಮತ್ತು ಹಾಸಿಗೆ ಹಿಡಿದಿರುವ ಪಿಂಚಣಿದಾರರಿಗೆ 2022ನೇ ಜುಲೈ 18ರಿಂದ 2022ನೇ ಜುಲೈ 22ರ ನಡುವೆ ಆಯೋಜಿಸಲಾಗಿದೆ ಎಂದು ಕಾರ್ಮಿಕ ಭವಿಷ್ಯ ನಿಧಿ ಸಂಘಟನೆಯ ಕ್ಷೇತ್ರಿಯ ಭವಿಷ್ಯನಿಧಿ ಆಯುಕ್ತರಾದ ಕೆ.ವೆಂಕಟ ಸುಬ್ಬಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಗವಿಕಲರು ಮತ್ತು ಹಾಸಿಗೆ ಹಿಡಿದಿರುವ ಪಿಂಚಣಿದಾರರ ಮನವಿಯನ್ನು ಸ್ವೀಕರಿಸಿದ ನಂತರ ಬಳ್ಳಾರಿಯ ಕಾರ್ಮಿಕರ ಭವಿಷ್ಯನಿಧಿ ಸಂಘಟನೆ, ಪ್ರಾದೇಶಿಕ ಕಚೇರಿಯ ಅಧಿಕಾರಿಗಳು ಪಿಂಚಣಿದಾರರನ್ನು ಖುದ್ದಾಗಿ ಭೇಟಿ ಮಾಡಿ ಮುಖ ಗುರುತಿಸುವ ತಂತ್ರಜ್ಞಾನದ ಮೂಲಕ ಜೀವನ ಪ್ರಮಾಣವನ್ನು ಸೆರೆಹಿಡಿಯಲಾಗುತ್ತದೆ.
ಬಳ್ಳಾರಿ, ಚಿತ್ರದುರ್ಗ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿರುವ ಎಲ್ಲಾ ಇಪಿಎಸ್ ಮತ್ತು ಎಫ್ಪಿಎಸ್ ಪಿಂಚಣಿದಾರರು ನಿರ್ದಿಷ್ಟವಾಗಿ ಅಂಗವಿಕಲರು ಮತ್ತು ಹಾಸಿಗೆ ಹಿಡಿದವರು, ಮುಖ ಗುರುತಿಸುವಿಕೆಯ ಮೂಲಕ ಡಿಜಿಟಲ್ ಲೈಫ್ ಸರ್ಟಿಫಿಕೇಟನ್ನು ನವೀಕರಿಸಲು ಪ್ರಾದೇಶಿಕ ಕಚೇರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಇವರನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂ.08392-268943, ಇ-ಮೇಲ್ ro.bellary@epfindia.gov.in ಅಥವಾ ವಾಟ್ಸಪ್ ಸಂಖ್ಯೆ:6363778135 (ಸಂದೇಶಗಳು ಮಾತ್ರ) ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.