ನವದೆಹಲಿ : ಭಾನುವಾರ ಗಾಂಧಿ ಕುಟುಂಬದ ರಿಮೋಟ್ ಕಂಟ್ರೋಲ್ ಕುರಿತು ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್ ಅಧ್ಯಕ್ಷೀಯ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ, “ಕಾಂಗ್ರೆಸ್ ಅಧ್ಯಕ್ಷರಾದರೆ ಪಕ್ಷದ ವ್ಯವಹಾರಗಳಲ್ಲಿ ಗಾಂಧಿ ಕುಟುಂಬದ ಬೆಂಬಲವಿದೆ. ಸಲಹೆ ಮತ್ತು ಬೆಂಬಲವನ್ನ ಪಡೆಯುವುದ್ರಲ್ಲಿ ಯಾವುದೇ ನಾಚಿಕೆ ಇಲ್ಲ. ಏಕೆಂದರೆ ಆ ಕುಟುಂಬ ಕಷ್ಟಪಟ್ಟು ಪಕ್ಷದ ಅಭಿವೃದ್ಧಿಗೆ ಶಕ್ತಿ ತುಂಬಿದೆ” ಎಂದರು.
ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅಕ್ಟೋಬರ್ 17ರಂದು ನಡೆಯಲಿರುವ ಕಾಂಗ್ರೆಸ್ ನ ಅತ್ಯುನ್ನತ ಹುದ್ದೆಗೆ ನಡೆಯಲಿರುವ ಚುನಾವಣೆಗೆ ತಾವು ಅಭ್ಯರ್ಥಿ ಎಂದು ಹೇಳಿದರು. ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದರೆ ಅವರ ರಿಮೋಟ್ ಕಂಟ್ರೋಲ್ ಗಾಂಧಿ ಕುಟುಂಬದೊಂದಿಗೆ ಇರಲಿದೆ ಎಂದು ಭಾನುವಾರ ವರದಿಗಾರರು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಅವರು (ವಿರೋಧ ಪಕ್ಷಗಳು) ಅಂತಹ ವಿಷಯಗಳನ್ನ ಹೇಳುತ್ತಲೇ ಇರುತ್ತಾರೆ ಏಕೆಂದರೆ ಅವರಿಗೆ ಹೇಳಲು ಬೇರೆ ಏನೂ ಇಲ್ಲ ಎಂದು ಹೇಳಿದರು.
ಬಿಜೆಪಿ ಇಂತಹ ಸುಳ್ಳು ಚುನಾವಣಾ ಪ್ರಚಾರದಲ್ಲಿ ತೊಡಗಿದೆ ಮತ್ತು ಇತರರು ಅದನ್ನು ಅನುಸರಿಸುತ್ತಾರೆ ಎಂದು ಅವರು ಹೇಳಿದರು. ಸೋನಿಯಾ ಗಾಂಧಿ 20 ವರ್ಷಗಳಿಂದ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ. ರಾಹುಲ್ ಗಾಂಧಿ ಅಧ್ಯಕ್ಷರೂ ಆಗಿದ್ದರು. ಅವರು ಪಕ್ಷಕ್ಕಾಗಿ ಹೋರಾಡಿದ್ದಾರೆ ಮತ್ತು ಅದರ ಪ್ರಗತಿಗಾಗಿ ತಮ್ಮ ಶಕ್ತಿಯನ್ನು ನೀಡಿದ್ದಾರೆ” ಎಂದು ಅವರು ಹೇಳಿದರು.
ಇನ್ನು “ಜವಾಹರಲಾಲ್ ನೆಹರೂ ಅವರಿಂದ ಹಿಡಿದು ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯಿಂದ ಸೋನಿಯಾ ಗಾಂಧಿವರೆಗೆ ನೆಹರೂ-ಗಾಂಧಿ ಕುಟುಂಬವು ಈ ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದೆ ಮತ್ತು ತ್ಯಾಗ ಮಾಡಿದೆ” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. “ನಾವು (ಕಾಂಗ್ರೆಸ್) ಕೆಲವು ಚುನಾವಣೆಗಳಲ್ಲಿ ಸೋತಿದ್ದೇವೆ ಎಂಬ ಕಾರಣಕ್ಕಾಗಿ, ಹಾಗೆ ಹೇಳುವುದು (ಗಾಂಧಿ ಕುಟುಂಬದ ವಿರುದ್ಧ) ಸರಿಯಲ್ಲ. ಅವರು ಈ ದೇಶಕ್ಕಾಗಿ ಉತ್ತಮ ಸಾಧನೆ ಮಾಡಿದ್ದಾರೆ. ಅವರ ಸಲಹೆ ಪಕ್ಷಕ್ಕೆ ಪ್ರಯೋಜನಕಾರಿಯಾಗಿದೆ, ಆದ್ದರಿಂದ ನಾನು ಖಂಡಿತವಾಗಿಯೂ ಅವರ ಸಲಹೆ ಮತ್ತು ಸಹಕಾರವನ್ನ ಪಡೆಯುತ್ತೇನೆ. ನಾಚಿಕೆ ಪಡುವಂಥದ್ದು ಏನೂ ಇಲ್ಲ. ನಿಮ್ಮ (ಮಾಧ್ಯಮ) ಸಲಹೆಯಿಂದ ಸ್ವಲ್ಪ ಪ್ರಯೋಜನವಿದ್ದರೆ, ನಾನು ಅದನ್ನು ಸಹ ತೆಗೆದುಕೊಳ್ಳುತ್ತೇನೆ. ಅವರು ಈ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ ಮತ್ತು ಅವರ ಸಲಹೆ ಪಡೆಯುವುದು ನನ್ನ ಕರ್ತವ್ಯವಾಗಿದೆ” ಎಂದರು.