ಮೈಸೂರು : ಟಿಪ್ಪು ಜಯಂತಿ ಆಚರಣೆ ಮಾಡುತ್ತಿರುವುದು ನನಗೆ ಖುಷಿ ತಂದಿದೆ, ಟಿಪ್ಪು ಕನ್ನಡ ವಿರೋಧಿ ಎಂದು ಬಿಂಬಿಸುವರಿಗೆ ಇದು ತಕ್ಕ ಉತ್ತರ ಎಂದು ಬಿಜೆಪಿ ಎಂಎಲ್ ಸಿ ಹೆಚ್. ವಿಶ್ವನಾಥ್ ಹೇಳಿದ್ದಾರೆ.
BIG NEWS: ʻಲಾಲು ಪ್ರಸಾದ್ ಯಾದವ್ʼಗೆ ಕಿಡ್ನಿ ದಾನ ಮಾಡಲು ಮುಂದಾದ ಪುತ್ರಿ ರೋಹಿಣಿ ಆಚಾರ್ಯ
ಮೈಸೂರಿನಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್. ವಿಶ್ವನಾಥ್ ಅವರು, ಶತ್ರುಗಳ ಮುಂದೆ ಮಂಡಿಯೂರದ ಏಕೈಕ ವ್ಯಕ್ತಿ ಟಿಪ್ಪು ಸುಲ್ತಾನ್, ಕರ್ನಾಟಕದಲ್ಲಿ ಆರ್ಥಿಕ ವಲಯವನ್ನು ಉತ್ತಮ ಪಡಿಸಿದವರು ಟಿಪ್ಪು ಸುಲ್ತಾನ್, ಮೈಸೂರು ಹುಲಿ ಎಂಬ ಬಿರುದನ್ನು ಯಾರೋ ಮಹಾರಾಜರು ನೀಡಿಲ್ಲ. ನಾಡಿನ ಪ್ರಜೆಗಳೇ ಟಿಪ್ಪುಗೆ ಮೈಸೂರು ಹುಲಿ ಬಿರುದು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಟಿಪ್ಪು ಸುಲ್ತಾನ್ ಹಲವರನ್ನು ಮಾತಾಂತರ ಮಾಡಿದ, ಹಲವು ಹಿಂದೂಗಳನ್ನು ಕೊಂದ ಎಂದು ಕೆಲವರು ಹೇಳುತ್ತಾರೆ. ಆದರೆ ಟಿಪ್ಪು ಯಾರನ್ನೂ ಮತಾಂತರ ಮಾಡಿಲ್ಲ. ಯಾರನ್ನೂ ಕೊಂದಿಲ್ಲ ಎಂದರು.