ಬೆಂಗಳೂರು : ಗಣೇಶೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಂದೋಬಸ್ತ್ಗೆ ಭಾರಿ ಪ್ಲ್ಯಾನ್ ಮಾಡಲಾಗಿದೆ. ಗಣೇಶ ಮೂರ್ತಿ ಕೂರಿಸಲು ಮೂರು ರೀತಿಯ ಪ್ರದೇಶಗಳನ್ನು ಗುರುತಿಸಲಾಗಿದೆ.
ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮೂರು ರೀತಿಯ ಪ್ರದೇಶಗಳನ್ನು ಗುರುತಿಸಲಾಗಿದ್ದು, ಸೂಕ್ಷ್ಮ, ಅತಿ ಸೂಕ್ಷ್ಮ, ಸಾಮಾನ್ಯ ಪ್ರದೇಶ ಎಂದು 3 ರೀತಿ ಪ್ರದೇಶಗಳನ್ನು ಗುರುತಿಸಲಾಗಿದೆ. ಚಾಮರಾಜಪೇಟೆ, ಚಂದ್ರಾಲೇಔಟ್, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ, ಗೋವಿಂದಪುರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ.
SHOCKING NEWS: ʻಅಗ್ನಿವೀರ್ʼ ಪರೀಕ್ಷೆಯಲ್ಲಿ ಫೇಲ್: ಮನನೊಂದು ಉತ್ತರಾಖಂಡ್ನ ಯುವಕ ಆತ್ಮಹತ್ಯೆಗೆ ಶರಣು
ಈ ಪ್ರದೇಶಗಳಲ್ಲಿ ದಿನದ 24 ಗಂಟೆಯೂ ಭದ್ರತೆ ಇರಲಿದ್ದು, 3 ಪಾಳಿಯಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. ಸೂಕ್ಷ್ಮ ಏರಿಯಾಗಳಲ್ಲಿ ಇನ್ಸ್ಪೆಕ್ಟರ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಏರಿಯಾಗಳ ಸುತ್ತಮುತ್ತ ಸಿಸಿಕ್ಯಾಮರಾ ಕಣ್ಗಾವಲು ವಹಿಸಲು ಸೂಚನೆ ನೀಡಲಾಗಿದೆ.