ಬೆಂಗಳೂರು : ವಸತಿ ರಹಿತರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದ್ದು, ಫಲಾನುಭವಿಗಳಿಗೆ ಮನೆ ಹಂಚಿಕೆ ಸಮಸ್ಯೆ ಕಂಡುಬಂದರೆ ವಸತಿ ಹಂಚಿಕೆ ನಿಯಮ ಮತ್ತಷ್ಟು ಸರಳೀಕರಣ ಮಾಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಟಿ.ಎ.ಶರವಣ ಪ್ರಶ್ನೆಗೆ ಉತ್ತರಿಸಿದ ಸಚಿವ ವಿ.ಸೋಮಣ್ಣ, ವಸತಿ ಹಂಚಿಕೆಯಲ್ಲಿ ಈಗಾಗಲೇ ಮಾರ್ಗಸೂಚಿ ಸರಳೀಕರಿಸಿ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಲಾಗುತ್ತಿದೆ. ಇನ್ನೂ ಸಮಸ್ಯೆ ಕಂಡ ಬಂದರೆ ಮತ್ತಷ್ಟು ಸರಳೀಕರಿಸಲಾಗುವುದು. ವಸತಿ ಸೌಲಭ್ಯ ಪಡೆಯಲು ದಾಖಲೆ ಪತ್ರ ಇಲ್ಲದೇ ಕೇವಲ ಸಂಖ್ಯೆ ನೀಡಿದರೂ ಸಾಕು, ಆದಾಯ ಮಿತಿ ಹೆಚ್ಚಿಸಲಾಗಿದೆ. ಇದರಿಂದ ಬ್ಯಾಂಕಿನವರು ಫಲಾನುಭವಿಗಳಿಗೆ ಸಾಲ ನೀಡಲು ಮುಂದೆ ಬರುತ್ತಿದ್ದಾರೆ ಎಂದು ಹೇಳಿದ್ದಾರೆ.
BREAKING NEWS: ಕರ್ನಾಟಕ ಸೇರಿ ಬೆಳ್ಳಂಬೆಳಗ್ಗೆ ದೇಶದ ಹಲವೆಡೆ NIA ದಾಳಿ | NIA raid