ಬೆಳಗಾವಿ : ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರ ಪೈಕಿ 15 ಸಾವಿರ ಮಂದಿಯ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
BIGG NEWS : ಮುಖ್ಯಮಂತ್ರಿ ಅಮೃತ ಜೀವನ ಯೋಜನೆ : ಹಸು/ಎಮ್ಮೆ ಘಟಕ ಸ್ಥಾಪನೆಗೆ ಕೃಷಿಕರಿಂದ ಅರ್ಜಿ ಆಹ್ವಾನ
ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಉತ್ತರಿಸಿದ ಸಿಎಂ ಬೊಮ್ಮಾಯಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 2021-22 ನೇ ಸಾಲಿನಲ್ಲಿ ಆದ್ಯತಾ ಕಾರ್ಡ್ ಗೆ 7,61,902 ಅರ್ಜಿ ಸ್ವೀಕರಿಸಿದ್ದು, ಈ ಪೈಕಿ 1,57,628 ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ಪಡಿತರ ಚೀಟಿ ವಿತರಿಸುವ ಕಾರ್ಯ ಜಾರಿಯಲ್ಲಿದೆ. ನವೆಂಬರ್ 28 ರಂದು ಅರ್ಹ ಅರ್ಜಿದಾರರಿಗೆ ಹೊಸದಾಗಿ ಕಾರ್ಡ್ ನೀಡಲು ಆದೇಶ ಹೊರಡಿಸಲಾಗಿದೆ. ಪ್ರಸ್ತುತ ಅರ್ಜಿ ಸಲ್ಲಿಕೆಯಾಗಿರುವ ಪೈಕಿ 2,60,418 ಅರ್ಜಿಗೆ ಮಂಜೂರಾತಿ ಸಿಕ್ಕಿದ್ದು, 3,43,856 ಅರ್ಜಿ ಪರಿಶೀಲನಾ ಹಂತದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.