ನವದೆಹಲಿ : ದೇಶಾದ್ಯಂತ ಸ್ವಾತಂತ್ರ್ಯದ 75 ವರ್ಷಾಚರಣೆ ಅಂಗವಾಗಿ ಇಂದಿನಿಂದ ಮೂರು ದಿನ ತ್ರಿವರ್ಣ ಧ್ವಜ (ಹರ್ ಘರ್ ತಿರಂಗಾ) ಅಭಿಯಾನ ನಡೆಯಲಿದೆ.
ಸ್ವಾತಂತ್ರ್ಯ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಮನೆ ಮನೆಯಲ್ಲಿ ರಾಷ್ಟ್ರಧ್ವಜ ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ಆಗಸ್ಟ್ 13 ರ ಇಂದಿನಿಂದ 15 ರವರೆಗೆ ಪ್ರತಿ ಮನೆಯಲ್ಲೂ ತ್ರಿವರ್ಣಧ್ವಜ ಹಾರಿಸುವಂತೆ ಪ್ರಧಾನಿ ಮೋದಿ ಜನತೆಗೆ ಕರೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಕಚೇರಿಗಳ ಮೇಲೂ ರಾಷ್ಟ್ರಧ್ವಜ ಹಾರಾಟಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಹರ್ ಘರ್ ಅಭಿಯಾನಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಧ್ವಜಗಳ ಮಾರಾಟ ಹೊಸ ದಾಖಲೆ ಸೃಷ್ಟಿಸಿದೆ.
BIG BREAKING NEWS: ಅಮೇರಿಕಾದಲ್ಲಿ ಬರಹಗಾರ ಸಲ್ಮಾನ್ ರಶ್ದಿ ಮೇಲೆ ಗಂಭಿರ ಹಲ್ಲೆ, ಸ್ಥಿತಿ ಗಂಭೀರ, ವಿಡಿಯೋ ಇಲ್ಲಿದೆ