ಬೆಂಗಳೂರು : ರಾಜ್ಯದಲ್ಲಿ ಮತ್ತೆ ಹಲಾಲ್ ಕಟ್ Vs ಜಟ್ಕಾ ಕಟ್ ಅಭಿಯಾನ ಶುರುವಾಗಿದ್ದು, ಹಬ್ಬಕ್ಕೆ ಹಿಂದೂಗಳಿಂದಲೇ ಮಾಂಸ ಖರೀದಿಸಿ ಎಂದು ಹಿಂದುಪರ ಸಂಘಟನೆಗಳು ಅಭಿಯಾನ ಶುರು ಮಾಡಿವೆ.
Bharat Jodo Yatra : ಇಂದು ಮೈಸೂರಿಗೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಭೇಟಿ
ಇಂದು ಹಿಂದುಪರ ಸಂಘಟನೆಗಳ ಮುಖಂಡರು ಬೆಂಗಳೂರಿನಲ್ಲಿ ಅಭಿಯಾನದ ಕುರಿತು ಸಭೆ ನಡೆಸಲಿದ್ದು, ಹಿಂದೂಗಳು ಹಿಂದೂಗಳ ಅಂಗಡಿಗಳಿಂದಲೇ ಮಾಂಸ ಖರೀದಿಸುವಂತೆ ಕರೆ ಕೊಡಲು ನಿರ್ಧರಿಸಲಾಗಿದೆ.
ಮಹಾನವಮಿ, ವಿಜಯದಶಮಿ ವೇಳೆಯಲ್ಲಿ ಜಟ್ಕಾ ಕಟ್ ಅಭಿಯಾನವನ್ನು ನಾವು ಮುಂದುವರಿಸಬೇಕಿದೆ. ಕಳೆದ ಬಾರಿ ಕರೆಕೊಟ್ಟ ಜಟ್ಕಾ ಕಟ್ ಅಭಿಯಾನ ದೊಡ್ಡಮಟ್ಟದಲ್ಲಿ ಯಶಸ್ಸು ಕಂಡಿದೆ. ಇಂದಿನಿಂದ ಎಲ್ಲರೂ ಮನೆ ಮನೆಗೆ ತೆರಳಿ ಜಾಗೃತಿ, ಕರಪತ್ರ ಹಂಚಿಕೆ ಮಾಡುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸುತ್ತೇವೆ ಎಂದು ಹಿಂದೂಪರ ಮುಖಂಡರೊಬ್ಬರು ಹೇಳಿದ್ದಾರೆ.
ಕರ್ನಾಟಕದಲ್ಲಿ ಕಳೆದ ಯುಗಾದಿ ಹಬ್ಬದ ಸಂದರ್ಭದಲ್ಲಿ ಹಲಾಲ್ VS ಜಟ್ಕಾ ಕಟ್ ಅಭಿಯಾನ ಭಾರೀ ಸದ್ದು ಮಾಡಿತ್ತು. ಇದೀಗ ಬೆಂಗಳೂರಿನಲ್ಲಿ ಮತ್ತೆ ಹಲಾಲ್ VS ಜಟ್ಕಾ ಕಟ್ ಅಭಿಯಾನ ಶುರುವಾಗಿದೆ.