ಬೆಂಗಳೂರು: ರಾಜ್ಯದಾದ್ಯಂತ ಶಾಲೆಗಳು ಮತ್ತು ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ವಿನ್ಯಾಸಕ್ಕೆ ಸಂಬಂಧಿಸಿದಂತೆ ಚಿಂತನೆಗಳನ್ನು ಬೆಳೆಸಲು ವಿಶ್ವ ವಿನ್ಯಾಸ ಪರಿಷತ್ (ವರ್ಲ್ಡ್ ಡಿಸೈನ್ ಕೌನ್ಸಿಲ್) ಸಹಕಾರ ನೀಡಲು ಉತ್ಸುಕವಾಗಿದೆ ಎಂದು ಕೌನ್ಸಿಲ್ ಅಧ್ಯಕ್ಷ ಪೌಲಾ ಗಜಾರ್ಡ್ ಶನಿವಾರ ಹೇಳಿದರು.
BIGG NEWS : `ಆನರ್ಸ್ ಪದವಿ’ಗೆ ಇನ್ಮುಂದೆ 4 ವರ್ಷ : `UGC’ ಯಿಂದ ಹೊಸ ಮಾರ್ಗಸೂಚಿ ಪ್ರಕಟ
ನಗರದ ಖಾಸಗಿ ಹೋಟೆಲ್ ನಲ್ಲಿ ಬೆಂಗಳೂರು ಡಿಸೈನ್ ಫೆಸ್ಟಿವಲ್ ಭಾಗವಾಗಿ ಮೂರು ದಿನಗಳ ಕಾಲ ನಡೆದ ಫ್ಯೂಚರ್ ಡಿಸೈನ್ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಈ ಸಂಬಂಧ ಅವರು ಲಿಖಿತ ಪತ್ರವನ್ನು ಐಟಿಬಿಟಿ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ್ ಅವರಿಗೆ ನೀಡಿದರು.
ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಸಚಿವ ನಾರಾಯಣ್ ಅವರು, ಡಿಸೈನ್ ಕಲಿಕೆಯನ್ನು ಎನ್ ಇ ಪಿ ಪಠ್ಯಕ್ರಮದ ಭಾಗವಾಗಿಸುವ ಬಗ್ಗೆ ಸರ್ಕಾರ ಆಲೋಚಿಸುತ್ತಿದೆ ಎಂದು ಹೇಳಿದ್ದರು. ಅದಕ್ಕೆ ಪೂರಕವಾಗಿ ವಿಶ್ವ ವಿನ್ಯಾಸ ಪರಿಷತ್ ವತಿಯಿಂದ ಈ ಪ್ರತಿಕ್ರಿಯೆ ವ್ಯರ್ಥವಾಗಿದೆ
ಪತ್ರವನ್ನು ಸ್ವೀಕರಿಸಿ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್ ಅವರು, “ಸುಸ್ಥಿರ ಅಭಿವೃದ್ಧಿಯ ಬೆಳವಣಿಗೆಗೆ ಡಿಸೈನ್ ಉದ್ಯಮವು ಅತ್ಯಗತ್ಯವಾಗಿದೆ. ಈ ಕ್ಷೇತ್ರದ ಬೆಳವಣಿಗೆಗೆ ಸರಕಾರವು ಬದ್ಧವಾಗಿದ್ದು, ಬೆಂಗಳೂರು ನಗರವು ಈ ಕ್ಷೇತ್ರದಲ್ಲಿ ಭರವಸೆಯ ತಾಣವಾಗಿ ಬೆಳೆಯಬೇಕಾಗಿದೆ” ಎಂದರು.
ತ್ಯಾಜ್ಯ ನಿರ್ವಹಣೆ, ನಗರೀಕರಣ, ವಸತಿ, ಪರಿಸರ, ಸಂಚಾರ ಸೌಲಭ್ಯ ಮುಂತಾದ ಸವಾಲುಗಳು ನಮ್ಮ ಮುಂದಿವೆ. ಇವುಗಳ ಸಮರ್ಥ ಮತ್ತು ರಚನಾತ್ಮಕ ಬೆಳವಣಿಗೆಗೆ ವಿನ್ಯಾಸದಲ್ಲಿ ಸಮನ್ವಯ ಇರುವಂತೆ ನೋಡಿಕೊಳ್ಳಬೇಕು ಎಂದು ಅವರು ನುಡಿದರು.
ವಿನ್ಯಾಸಕಾರರು ತಮ್ಮ ಸುರಕ್ಷಿತ ವಲಯವನ್ನು ಬಿಟ್ಟು ಹೊರಬರಬೇಕು. ಆಗ ಮಾತ್ರ ಸಮಕಾಲೀನ ಜಗತ್ತಿಗೆ ಬೇಕಾದ ಕೌಶಲಗಳು ಗೊತ್ತಾಗುತ್ತವೆ. ಜತೆಗೆ ಜಾಗತಿಕ ಮಟ್ಟದಲ್ಲಿ ಇರುವ ಸದವಕಾಶಗಳು ನಮ್ಮದಾಗುತ್ತವೆ ಎಂದು ಅವರು ಪ್ರತಿಪಾದಿಸಿದರು.
ವಿನ್ಯಾಸಕಾರರು ಯಾವಾಗಲೂ ಸುತ್ತಲಿನ ಪರಿಸರದೊಂದಿಗೆ ಸಂಪರ್ಕ ಇಟ್ಟುಕೊಳ್ಳಬೇಕು. ಜತೆಗೆ, ಪಾಲುದಾರರಿಂದ ದೂರವಾಗಬಾರದು. ತಮ್ಮ ಕಲ್ಪನೆಯ ಮೂಲಕ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಈ ವಲಯದಲ್ಲಿ ಇರುವವರು ಶ್ರಮಿಸಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೈನ್ ವಿವಿ ಸಂಸ್ಥಾಪಕ ಚೆನರಾಜ್ ರಾಯಚಂದ್, ಅಂತರರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮದ ಕಾರ್ಯಕಾರಿ ನಿರ್ದೇಶಕ ಟಾಮ್ ಜೋಸೆಫ್, ಪ್ರೊ.ಶಡಗೋಪನ್ ಮುಂತಾದವರು ಉಪಸ್ಥಿತರಿದ್ದರು.