ನವದೆಹಲಿ : ರೈತರ ಶ್ರೇಯೋಭಿವೃದ್ಧಿಗೆ ನಾನಾ ಯೋಜನೆಗಳನ್ನ ಜಾರಿಗೆ ತರುತ್ತಿರುವ ಕೇಂದ್ರ ಸರಕಾರ ಮತ್ತೊಂದು ಹೊಸ ಯೋಜನೆ ತಂದಿದ್ದು, ಈಗ ರೈತರಿಗೆ 3 ಲಕ್ಷ ಸಹಾಯಧನ ಸಿಗಲಿದೆ. ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಈ ಯೋಜನೆ ಜಾರಿಗೆ ತಂದಿದ್ದು, ಹಸು, ಎಮ್ಮೆ, ಮೇಕೆ, ಮೀನು ಸಾಕುತ್ತಿರುವ ಎಲ್ಲ ರೈತರಿಗೆ ಸರಕಾರ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುತ್ತಿದೆ.
ಪಶುಸಂಗೋಪನೆಯನ್ನ ಉತ್ತೇಜಿಸುವ ಮತ್ತು ಹಾಲು, ಹಾಲಿನ ಉತ್ಪನ್ನಗಳು ಮತ್ತು ಮಾಂಸದ ಕೊರತೆಯನ್ನ ನೀಗಿಸುವ ಉದ್ದೇಶದಿಂದ ಕೇಂದ್ರವು ಈ ಯೋಜನೆಯನ್ನ ಪ್ರಾರಂಭಿಸಿದೆ. ಈ ಕಾರ್ಡ್ ಸಹಾಯದಿಂದ ರೈತರಿಗೆ ಸುಲಭವಾಗಿ ಸಾಲ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಪಿಎಂ ಕಿಸಾನ್ ಬಳಸುವವರೂ ಈ ಕಾರ್ಡ್ ಪಡೆಯಬಹುದು. 7ರಷ್ಟು ಬಡ್ಡಿಯಲ್ಲಿ 3 ಲಕ್ಷದವರೆಗೆ ಸಾಲ ಪಡೆಯಬಹುದು. ಇನ್ನು ಒಂದು ವರ್ಷದೊಳಗೆ ಸಾಲ ಮರುಪಾವತಿ ಮಾಡುವವರಿಗೆ ಹೆಚ್ಚುವರಿ ಸಬ್ಸಿಡಿ ಕೂಡ ನೀಡಲಾಗುತ್ತದೆ. ರೈತರು ಐದು ವರ್ಷದೊಳಗೆ ಸಾಲ ಮರುಪಾವತಿ ಮಾಡಬೇಕು.
ಈ ಕಾರ್ಡ್ ಪಡೆಯಲು ಬಯಸುವ ರೈತರು ಮೊದಲು ಹತ್ತಿರದ ಬ್ಯಾಂಕ್ಗೆ ಹೋಗಿ. ನಂತರ ಅರ್ಜಿ ನಮೂನೆಯನ್ನ ತೆಗೆದುಕೊಂಡು ಸಂಬಂಧಿತ ವಿವರಗಳನ್ನ ನಮೂದಿಸಿ. ಇದಲ್ಲದೇ KYC ಗಾಗಿ ಕೆಲವು ದಾಖಲೆಗಳನ್ನ ಸಲ್ಲಿಸಬೇಕು. ಪರಿಶೀಲನೆಯ ನಂತರ 15 ದಿನಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಒದಗಿಸಲಾಗುತ್ತದೆ. ಇದಕ್ಕಾಗಿ ಆಧಾರ್ ಕಾರ್ಡ್, ಪ್ರಾಣಿಗಳ ಆರೋಗ್ಯ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಖಾತೆ, ಜಮೀನು ದಾಖಲೆಗಳು, ಪಾಸ್ಪೋರ್ಟ್ ಅಳತೆಯ ಭಾವಚಿತ್ರವನ್ನ ಒದಗಿಸಬೇಕು.
ಪ್ರತಿ ದಿನ ಒಂದು ತಾಸು ಹೆಚ್ಚಿಗೆ ಕೆಲಸ ಮಾಡಿ: ಸರ್ಕಾರಿ ನೌಕರರಿಗೆ ಸಿಎಂ ಬೊಮ್ಮಾಯಿ ಕರೆ
WATCH VIDEO: ತುಂಬಾ ಸುಲಭವಾಗಿ ಭೌತಶಾಸ್ತ್ರದ ಪರಿಕಲ್ಪನೆ ವಿವರಿಸಿದ ಶಿಕ್ಷಕ