ಬೆಂಗಳೂರು: ಇಂಧನ ದರ ಹೊಂದಾಣಿಕೆ ಹಿನ್ನೆಲೆಯಲ್ಲಿ ವಿದ್ಯುತ್ ದರವನ್ನು ಏರಿಕೆ ಮಾಡಿದ್ದ ಸರ್ಕಾರ ಪರಿಷ್ಕೃತ ಆದೇಶವನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲು ಚಿಂತನೆ ನಡೆಸಿದೆ.
ವಿದ್ಯುತ್ ದರ ಏರಿಕೆ ನಿಯಮ ವಾಪಸ್ ಪಡೆಯುವ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ಅಗತ್ಯವಾದರೆ ವಿದ್ಯುತ್ ದರ ಏರಿಕೆ ನಿಯಾಮಾವಳಿ ಹಿಂಪಡೆಯಲಾಗುವುದು. ವಿದ್ಯುತ್ ದರ ಏರಿಕೆಗೆ ನಮ್ಮ ಸರ್ಕಾರ ಹೊಸ ನಿಯಮಾವಳಿ ರೂಪಿಸಿಲ್ಲ. 2014 ರಲ್ಲಿ ಕಲ್ಲಿದ್ದಲು ಬೆಲೆ ಹೊಂದಾಣಿಕೆಗೆ ರೂಪಿಸಲಾಗಿದ್ದ ನಿಯಮಾವಳಿಯೇ ಮುಂದುವರೆದಿದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ ತಂದ ಈ ಪದ್ಧತಿಯಿಂದ ಜನರಿಗೆ ಹೊರೆಯಾಗುತ್ತಿದೆ. ಸಾಧಕ-ಬಾಧಕಗಳ ಕುರಿತು ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸುತ್ತೇನೆ. ಅಗತ್ಯವಾದರೆ ಈ ನಿಯಮಾವಳಿ ಹಿಂದಕ್ಕೆಪಡೆಯಲಾಗುವುದು ಎಂದು ತಿಳಿಸಿದ್ದಾರೆ.