ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬಡಜನತೆಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಬೆಂಗಳೂರು ಅಮೃತೋತ್ಸವ ಮನೆ ಯೋಜನೆಯಡಿ ಬಿಹೆಚ್ ಕೆ ಫ್ಲಾಟ್ ಖರೀದಿಸುವ ಆರ್ಥಿಕ ಹಿಂದುಳಿದ ನಿವೇಶನ ರಹಿತರಿಗೆ 5 ಲಕ್ಷ ರೂ. ಸಹಾಯಧನ ನೀಡಲು ಸರ್ಕಾರ ಇತರೆ ಇಲಾಖೆ ಅಥವಾ ಪ್ರಾಧಿಕಾರದಿಂದ ನಿರ್ಮಿಸಲಾದ ಅಪಾರ್ಟ್ ಮೆಂಟ್ ಖರೀದಿಗೂ ವಿಸ್ತರಣೆ ಮಾಡುವುದಕ್ಕೆ ಕಲ್ಯಾಣ ವಿಭಾಗದಿಂದ ಮುಖ್ಯ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಬಿಡಿಎ ಕೊಳಗೇರಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸುವ ಅಪಾರ್ಟ್ ಮೆಂಟ್ ಖರೀದಿಗೆ ಬಡವರಿಗೆ 5 ಲಕ್ಷ ರೂ. ನೆರವು ನೀಡುವ ಪ್ರಸ್ತಾವನೆಗೆ ಮುಖ್ಯ ಆಯುಕ್ತರು ಒಪ್ಪಿಗೆ ನೀಡಿದ್ದು, ಆಡಳಿತಾಧಿಕಾರಿಗಳ ಸಮ್ಮತಿ ಬಾಕಿ ಇದೆ ಎಂದು ಹೇಳಿದ್ದಾರೆ.
BIG NEWS: ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ | KARTET
ನಗರದಲ್ಲಿ 20*30 ಅಥವಾ ಕಡಿಮೆ ಅಳತೆಯ ಸ್ವಂತ ನಿವೇಶ ಹೊಂದಿದ ಆರ್ಥಿಕ ಹಿಂದುಳಿದ ವರ್ಗಗಳ ಫಲಾನುಭವಿಗಳಿಗೆ ಈ ಯೋಜನೆಯಿಂದ ಮನೆ ನಿರ್ಮಾಣಕ್ಕೆ ಅನುಕೂಲವಾಗಲಿದೆ. ಆದರೆ ನಿವೇಶನ ಖರೀದಿಸಲು ಆಗದ ಬಡವರು ಸ್ವಂತ ಮನೆಕಟ್ಟಲು ಆಗುತ್ತಿಲ್ಲ. ಹೀಗಾಗಿ ಒಂಟಿ ಮನೆ ಯೋಜನೆಯಡಿ ನೀಡುವ ಸ್ವಲ್ಪ ಅನುದಾನವನ್ನು ಸರ್ಕಾರದ ವಿವಿಧ ಯೋಜನೆಗಳಡಿ ನಿರ್ಮಿಸಲಾದ ಮನೆಗಳ ಖರೀದಿಗೆ ನೀಡುವುದಕ್ಕೆ ತೀರ್ಮಾನಿಸಲಾಗಿದೆ ಎಂದರು.
BIGG NEWS : `CET’ ಪರೀಕ್ಷೆ ಬರೆದ ವಿದ್ಯಾರ್ಥಿಗಳೇ ಗಮನಿಸಿ : ದಾಖಲಾತಿ ಪರಿಶೀಲನೆಗೆ ಮತ್ತೊಂದು ಅವಕಾಶ